ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಈಗ ಎಲ್ಲಿ ನೋಡಿದರೂ ಎಲೆಕ್ಟ್ರಿಕ್ ವಾಹನಗಳದೇ ಸದ್ದು. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಪೆಟ್ರೋಲ್ ಡೀಸೆಲ್ ವಾಹನಗಳಿಗೆ ಬದಲಿಗೆ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯಲಿವೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಇತ್ತೀಚಿಗಷ್ಟೇ ಲಾಸ್ ವೇಗಾಸ್‍‍ನಲ್ಲಿ ನಡೆದ ಸಿ‍ಇ‍ಎಸ್ ಸಮ್ಮೇಳನದಲ್ಲಿ ಸೋನಿ ಹಾಗೂ ಮರ್ಸಿಡಿಸ್ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರುಗಳನ್ನು ಅನಾವರಣಗೊಳಿಸಿದ್ದವು. ಈಗ ಮತ್ತೊಂದು ಸ್ಟಾರ್ಟ್ ಅಪ್ ಕಂಪನಿಯು ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರ್ ಅನ್ನು ಅನಾವರಣಗೊಳಿಸಿದೆ. ಕಾರುಗಳೆಂದ ಮೇಲೆ ನಾಲ್ಕು ಚಕ್ರಗಳಿರುವುದು ಸಾಮಾನ್ಯ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಆದರೆ ಇದೇ ಮೊದಲ ಬಾರಿಗೆ ಮೂರು ಚಕ್ರದ ಕಾರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಾರ್ ಎಲೆಕ್ಟ್ರಿಕ್ ಆಗಿರುವುದು ವಿಶೇಷ. ಅಂದ ಹಾಗೆ ಈ ಕಾರ್ ಅನ್ನು ಅಭಿವೃದ್ಧಿಪಡಿಸಿರುವುದು ಮುಂಬೈ ಮೂಲದ ಸ್ಟ್ರಾಮ್ ಮೋಟಾರ್ಸ್. ಈ ಕಾರ್ ಅನ್ನು ಕಾನ್ಸೆಪ್ಟ್ ಕಾರ್ ಆಗಿ ಅನಾವರಣಗೊಳಿಸಲಾಗಿದೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಈ ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು. ಈ ಕಾರ್ ಅನ್ನು ಸಹ ಲಾಸ್ ವೇಗಾಸ್‍‍ನಲ್ಲಿ ನಡೆದ 2020ರ ಸಿಇ‍ಎಸ್‍ನಲ್ಲಿಯೇ ಪ್ರದರ್ಶಿಸಲಾಗಿದೆ. ಸ್ಟ್ರಾಮ್ ಕಂಪನಿಯು ಈ ಸಮ್ಮೇಳನದಲ್ಲಿ ಭಾಗವಹಿಸಿದ ಮೊದಲ ಭಾರತೀಯ ಆಟೋಮೊಬೈಲ್ ಕಂಪನಿಯಾಗಿದೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಸ್ಟ್ರಾರ್ಮ್ ಆರ್ 3 ಎಂದು ಕರೆಯಲಾಗುವ ಈ ಮೂರು ಚಕ್ರದ ಎಲೆಕ್ಟ್ರಿಕ್ ಕಾರಿಗೆ ಈ ಸಮ್ಮೇಳನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಟ್ರಾಮ್ ಕಂಪನಿಯು 2018ರಲ್ಲಿಯೇ ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನ್ನು ಅನಾವರಣಗೊಳಿಸುವುದಾಗಿ ತಿಳಿಸಿತ್ತು. ಈ ಕಾರಣಕ್ಕಾಗಿ ಸಿ‍‍ಇ‍ಎಸ್ ಸಮ್ಮೇಳನದಲ್ಲಿ ಪ್ರಪಂಚದ ಮುಂದೆ ಈ ಕಾರ್ ಅನ್ನು ಪ್ರದರ್ಶಿಸಿದೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಭಾರತದಲ್ಲಿ ಮುಂದಿನ ತಿಂಗಳಿನಿಂದ ಈ ಕಾರಿನ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗುವುದು. ಸ್ಟ್ರಾಮ್ ಆರ್ 3 ಕಾರು ಬೇರೆ ಕಾರುಗಳ ರೀತಿಯಲ್ಲಿರದೇ ಆಟೋ ರಿಕ್ಷಾವನ್ನು ಹೈ ಎಂಡ್‍‍ನಲ್ಲಿ ಬಿಡುಗಡೆಗೊಳಿಸಿದರೆ ಯಾವ ರೀತಿಯಲ್ಲಿರುತ್ತದೋ ಆ ರೀತಿಯಲ್ಲಿದೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ನಾಲ್ಕು ಚಕ್ರದ ವಾಹನಗಳಲ್ಲಿರುವ ಫೀಚರ್‍‍ಗಳನ್ನು ಹೊಂದಿದ್ದರೂ, ಈ ಕಾರ್ ಅನ್ನು ಮೂರು ಚಕ್ರದ ವಾಹನವೆಂದು ಕರೆಯಲಾಗುತ್ತದೆ. ಆದರೆ ಈ ಮೂರು ಚಕ್ರದ ವಾಹನವು ಕಾರುಗಳಷ್ಟೇ ಗಾತ್ರ ಹಾಗೂ ಎತ್ತರವನ್ನು ಹೊಂದಿದೆ. ಮೂರು ಚಕ್ರದ ಈ ಕಾರು ಹ್ಯಾಚ್‍‍ಬ್ಯಾಕ್ ಕಾರುಗಳ ಗಾತ್ರವನ್ನು ಹೊಂದಿದೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಸ್ಟ್ರಾಮ್ ಆರ್ 3 ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ 12 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಹಿಂಭಾಗದ ವ್ಹೀಲ್‍‍ಗಳನ್ನು ಎಲೆಕ್ಟ್ರಿಕ್ ಮೋಟರ್‍‍ನೊಂದಿಗೆ ಜೋಡಿಸಲಾಗಿದೆ. ಈ ಕಾರಿನಲ್ಲಿ 13 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಈ ಮೋಟರ್ 17.4 ಬಿ‍‍ಹೆಚ್‍‍ಪಿ ಪವರ್ ಹಾಗೂ 48 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಈ ಮೋಟರಿಗೆ ಸಿಂಗಲ್ ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ಮೋಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ, ಕಾರು 200 ಕಿ.ಮೀಗಳವರೆಗೆ ಚಲಿಸುತ್ತದೆ. ಕೇವಲ 3 ಗಂಟೆಗಳಲ್ಲಿ ಈ ಮೋಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಇದಕ್ಕಾಗಿ 15 ಆಂಪ್‍‍ಗಳ ಪ್ಲಗ್ ಪಾಯಿಂಟ್ ಬೇಕಾಗುತ್ತದೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಈ ಕಾರಿನಲ್ಲಿ ಕ್ಲೈಮೆಂಟ್ ಕಂಟ್ರೋಲ್, 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಪಾರ್ಕಿಂಗ್ ಅಸಿಸ್ಟ್, ರೇರ್ ಕ್ಯಾಮರಾ, ಪವರ್ ವಿಂಡೋ ಹಾಗೂ 3 ಪಾಯಿಂಟ್‍‍ಗಳ ಸೀಟ್ ಬೆಲ್ಟ್ ಗಳಂತಹ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಮೂರು ಚಕ್ರದ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಸ್ಟ್ರಾಮ್ ಮೋಟಾರ್ಸ್

ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಈ ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಕಾರು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರಲಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Strom Motors unveils electric car concept R3 - Read in Kannada
Story first published: Friday, January 10, 2020, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X