ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ಅಲ್ಲು ಅರ್ಜುನ್ ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಒಬ್ಬರು. ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ಎಂದು ಹೆಸರುವಾಸಿಯಾಗಿದ್ದಾರೆ. ಅವರು ನಟನೆಯ ಜೊತೆಗೆ ಕಾರು ಹಾಗೂ ಬೈಕುಗಳ ಮೇಲೂ ಕ್ರೇಜ್ ಹೊಂದಿದ್ದಾರೆ.

ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ಇತ್ತೀಚೆಗೆ ಅಲ್ಲು ಅರ್ಜುನ್ ತಮ್ಮ ಹೊಸ ಕಾರನ್ನು ಚಾಲನೆ ಮಾಡುತ್ತಿರುವ ಫೋಟೋಗಳು ಕಂಡುಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಫೋಟೋಗಳಲ್ಲಿ ಅವರು ಐಷಾರಾಮಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಚಾಲನೆ ಮಾಡುತ್ತಿದ್ದಾರೆ. ಈ ವೇಳೆ ಅವರ ಪತ್ನಿ ಸ್ನೇಹಾ ರೆಡ್ಡಿ ಕೂಡ ಜೊತೆಗಿದ್ದಾರೆ.

ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ಜೊತೆಗೆ ಮಕ್ಕಳಾದ ಅಯಾನ್ ಹಾಗೂ ಅರ್ಹಾ ಸಹ ಇದ್ದಾರೆ. ಅಲ್ಲು ಅರ್ಜುನ್ ಸಾಕಷ್ಟು ಸಂಖ್ಯೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈ ಪೈಕಿ ಬಹುತೇಕ ಕಾರುಗಳನ್ನು ಅವರ ಇಷ್ಟದಂತೆ ಕಸ್ಟಮೈಸ್ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ಅಲ್ಲು ಅರ್ಜುನ್ ಕಳೆದ ವರ್ಷ ರೇಂಜ್ ರೋವರ್ ವೋಗ್ ಎಸ್‌ಯುವಿಯನ್ನು ಖರೀದಿಸಿದ್ದರು. ಈ ಎಸ್‌ಯುವಿಯು ಲ್ಯಾಂಡ್ ರೋವರ್ ಕಂಪನಿಯ ಟಾಪ್ ಎಂಡ್ ಮಾದರಿಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ ಈ ಹೊಸ ಎಸ್‌ಯುವಿಯನ್ನು ಸಹ ಕಸ್ಟಮೈಸ್ ಮಾಡಿಸಿದ್ದಾರೆ.

ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ರೇಸ್‌ಟೆಕ್ ಇಂಡಿಯಾ ಎಂಬ ಕಂಪನಿಯು ಅಲ್ಲು ಅರ್ಜುನ್ ಅವರ ಈ ಎಸ್‌ಯುವಿಯನ್ನು ಮಾಡಿಫೈಗೊಳಿಸಿದೆ. ವ್ಹೀಲ್ ಕ್ಯಾಪ್‌ಗಳನ್ನು ಅಪ್ ಡೇಟ್ ಮಾಡಿರುವ ಕಾರಣಕ್ಕೆ ಈ ಎಸ್‌ಯುವಿಯು ಆಕರ್ಷಕವಾಗಿ ಕಾಣುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ಕಪ್ಪು ಬಣ್ಣದ ಈ ಎಸ್‌ಯುವಿಯು ಕೆಂಪು ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿರುವುದರಿಂದ ಅದರ ಸ್ಪೋರ್ಟಿ ಲುಕ್ ಸಹ ಹೆಚ್ಚಾಗಿದೆ. ಈ ಎಸ್‌ಯುವಿಯಲ್ಲಿದ್ದ ಕ್ರೋಮ್ ಬಣ್ಣವನ್ನು ತೆಗೆದು ಹಾಕಲಾಗಿದ್ದು, ಕ್ರೋಮ್ ಬದಲಿಗೆ ಕಪ್ಪು ಬಣ್ಣವನ್ನು ನೀಡಲಾಗಿದೆ.

ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ಇನ್ನು ಐಷಾರಾಮಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಬಗ್ಗೆ ಹೇಳುವುದಾದರೆ, ಅಲ್ಲು ಅರ್ಜುನ್ ಚಾಲನೆ ಮಾಡಿದ ಕಾರು ಕಾಂಟಿನೆಂಟಲ್ ಜಿಟಿಯ ವಿ 8 ಕನ್ವರ್ಟಿಬಲ್ ಮಾದರಿಯಂತೆ ಕಾಣುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ಈ ಐಷಾರಾಮಿ ಕಾರಿನ ಹೊರಭಾಗ ಹಾಗೂ ಒಳಭಾಗವು ಕೆಂಪು ಬಣ್ಣವನ್ನು ಹೊಂದಿದೆ. ವಾಹನದ ಮುಂಭಾಗದ ಗ್ರಿಲ್ ಹಾಗೂ ಏರ್ ಡ್ಯಾಮ್ ಕ್ರೋಮ್ ಬಣ್ಣವನ್ನು ಹೊಂದಿವೆ. ಅಲ್ಲು ಅರ್ಜುನ್ ಈ ಕಾರನ್ನು ಚಾಲನೆ ಮಾಡಿರುವುದು ಹೈದರಾಬಾದ್‌ನ ರಸ್ತೆಯಲ್ಲಿ.

ಕಾಂಟಿನೆಂಟಲ್ ಜಿಟಿ ವಿ 8 ಕನ್ವರ್ಟಿಬಲ್ ಕಾರಿನಲ್ಲಿ 4.0-ಲೀಟರಿನ ವಿ 8 ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 493 ಬಿಹೆಚ್‌ಪಿ ಪವರ್ ಹಾಗೂ 660 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಐಷಾರಾಮಿ ಕಾರು ಚಾಲನೆ ವೇಳೆ ಕಂಡು ಬಂದ ಸ್ಟೈಲಿಶ್ ಸ್ಟಾರ್

ಈ ಎಂಜಿನ್'ನೊಂದಿಗೆ 8-ಸ್ಪೀಡಿನ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ನೀಡುತ್ತದೆ. ಕಾಂಟಿನೆಂಟಲ್ ಜಿಟಿ ವಿ 8 ಕನ್ವರ್ಟಿಬಲ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.3.64 ಕೋಟಿಗಳಾಗಿದೆ.

Most Read Articles

Kannada
English summary
Stylish Star Allu Arjun drives Bentley Continental GT car with family. Read in Kannada.
Story first published: Tuesday, December 22, 2020, 14:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X