ಆಟಿಟ್ಯೂಡ್ ಹೆಸರಿನ ಹೈಬ್ರಿಡ್ ಕಾರು ಅನಾವರಣಗೊಳಿಸಿದ ಸುಜುಕಿ

ಖ್ಯಾತ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆದ ಸ್ವಿಫ್ಟ್‌ನ ಹೊಸ ಲಿಮಿಟೆಡ್ ಎಡಿಷನ್ ಮಾದರಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಕಂಪನಿಯು ಈ ಕಾರಿಗೆ ಆಟಿಟ್ಯೂಡ್ ಹೈಬ್ರಿಡ್ ಎಂಬ ಹೆಸರನ್ನಿಟ್ಟಿದೆ.

ಆಟಿಟ್ಯೂಡ್ ಹೆಸರಿನ ಹೈಬ್ರಿಡ್ ಕಾರು ಅನಾವರಣಗೊಳಿಸಿದ ಸುಜುಕಿ

ಕಂಪನಿಯು ಈ ಕಾರಿನ ಎಕ್ಸ್ ಟಿರಿಯರ್ ಅನ್ನು ಅಪ್ ಡೇಟ್ ಮಾಡಿದೆ. ಈ ಕಾರಿನ ಹೆಸರಿನಿಂದಲೇ ಈ ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ಎಂಜಿನ್ ಬಳಸಲಾಗಿದೆ ಎಂಬುದನ್ನು ಊಹಿಸಬಹುದು. ಬೇರೆ ಕಾರುಗಳಿಗಿಂತ ಈ ಕಾರನ್ನು ವಿಭಿನ್ನವಾಗಿಡಲು ಸುಜುಕಿ ಕಂಪನಿಯು ಈ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಈ ಕಾರಿನ ಕೇವಲ 350 ಯುನಿಟ್‌ಗಳನ್ನು ಮಾತ್ರ ಉತ್ಪಾದಿಸಿ ಮಾರಾಟ ಮಾಡಲಾಗುವುದು.

ಆಟಿಟ್ಯೂಡ್ ಹೆಸರಿನ ಹೈಬ್ರಿಡ್ ಕಾರು ಅನಾವರಣಗೊಳಿಸಿದ ಸುಜುಕಿ

ಯುವ ಜನರನ್ನು ಆಕರ್ಷಿಸಲು ಕಂಪನಿಯು ಈ ಕಾರನ್ನು ಬಿಡುಗಡೆಗೊಳಿಸುತ್ತಿದೆ. ಸುಜುಕಿ ಕಂಪನಿಯು ಈ ಹೊಸ ಹೈಬ್ರಿಡ್‌ ಕಾರ್ ಅನ್ನು ಫರ್ವೆಂಟ್ ರೆಡ್, ಪ್ಯೂರ್ ವೈಟ್, ಪ್ರೀಮಿಯಂ ಸಿಲ್ವರ್, ಸೂಪರ್ ಬ್ಲ್ಯಾಕ್, ಸ್ಪೀಡಿ ಬ್ಲೂ, ಮಿನರಲ್ ಗ್ರೇ ಹಾಗೂ ಬರ್ನಿಂಗ್ ರೆಡ್ ಎಂಬ ಏಳು ಬಣ್ಣಗಳಲ್ಲಿ ಬಿಡುಗಡೆಗೊಳಿಸಲಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಆಟಿಟ್ಯೂಡ್ ಹೆಸರಿನ ಹೈಬ್ರಿಡ್ ಕಾರು ಅನಾವರಣಗೊಳಿಸಿದ ಸುಜುಕಿ

ಮಾರುಕಟ್ಟೆಯಲ್ಲಿರುವ ಸ್ವಿಫ್ಟ್‌ನ ಮಿಡ್-ಎಂಡ್ ಮಾದರಿಯಾದ ಎಸ್‌ ಝಡ್-ಟಿ ಆಧಾರದ ಮೇಲೆ ಈ ಕಾರ್ ಅನ್ನು ತಯಾರಿಸಲಾಗಿದೆ. ಈ ಕಾರಣಕ್ಕೆ ಈ ಕಾರಿನಲ್ಲಿ ಅತ್ಯುತ್ತಮವಾದ ಫೀಚರ್ ಗಳನ್ನು ನೀಡಲಾಗಿದೆ. ಈ ಫೀಚರ್ ಗಳಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, 16 ಇಂಚಿನ ಅಲಾಯ್ ವ್ಹೀಲ್ ಹಾಗೂ ಏರ್ ಕಂಡೀಷನ್ ಸಿಸ್ಟಂಗಳು ಸೇರಿವೆ.

ಆಟಿಟ್ಯೂಡ್ ಹೆಸರಿನ ಹೈಬ್ರಿಡ್ ಕಾರು ಅನಾವರಣಗೊಳಿಸಿದ ಸುಜುಕಿ

ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗಳನ್ನು ಬೆಂಬಲಿಸುವ ಟಚ್ ಸ್ಕ್ರೀನ್ ಇನ್ಫೋಟೇನ್ ಮೆಂಟ್ ಸಿಸ್ಟಂ ಅನ್ನು ಸಹ ನೀಡಲಾಗಿದೆ. ಇವುಗಳ ಜೊತೆಗೆ ರೇರ್ ಪ್ರೈವೇಸಿ ಗ್ಲಾಸ್ ಹಾಗೂ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆಟಿಟ್ಯೂಡ್ ಹೆಸರಿನ ಹೈಬ್ರಿಡ್ ಕಾರು ಅನಾವರಣಗೊಳಿಸಿದ ಸುಜುಕಿ

ಎಕ್ಸ್ ಟಿರಿಯರ್ ಅನ್ನು ಮತ್ತಷ್ಟು ಆಕರ್ಷಿಸಲು ಮುಂಭಾಗದ ಗ್ರಿಲ್‌ನಲ್ಲಿ ಕ್ರೋಮ್, ಗ್ರೇ ಬಣ್ಣದ ಸ್ಕರ್ಟ್‌, ರೇರ್ ಅಪ್ಪರ್ ಸ್ಪಾಯ್ಲರ್ ಹಾಗೂ ಬ್ಲಾಕ್ ಪಿಲ್ಲರ್ ಗಳನ್ನು ನೀಡಲಾಗಿದೆ. ಈ ಕಾರ್ ಅನ್ನು ಹೊಸ ಆಕರ್ಷಕ ಫೇಶಿಯಲ್ ಆಯ್ಕೆಗಳೊಂದಿಗೆ ನೀಡಲಾಗುವುದು.

ಆಟಿಟ್ಯೂಡ್ ಹೆಸರಿನ ಹೈಬ್ರಿಡ್ ಕಾರು ಅನಾವರಣಗೊಳಿಸಿದ ಸುಜುಕಿ

ಈ ಕಾರಿನಲ್ಲಿ 1.2-ಲೀಟರಿನ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಿ ಮೈಲ್ಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಕೆಸಿ 12 ಎಂಜಿನ್ 12 ವೋಲ್ಟ್ ಹೈಬ್ರಿಡ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

Most Read Articles

Kannada
English summary
Suzuki reveals Swift Attitude hybrid limited edition in international market. Read in Kannada.
Story first published: Friday, July 10, 2020, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X