ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ಕರೋನಾ ವೈರಸ್ ಕಾರಣಕ್ಕೆ ಭಾರತವೂ ಸೇರಿದಂತೆ ಇಡೀ ವಿಶ್ವದ್ಯಾಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಭಾರತದಲ್ಲಿ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಪ್ರಿಲ್ 20ರಿಂದ ಟೋಲ್ ಸಂಗ್ರಹವನ್ನು ಪುನರಾರಂಭಿಸಲಾಗಿದೆ. ಈ ಮೊದಲು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಾಹನಗಳ ಸಾಗಣೆಗೆ ಅನುಕೂಲವಾಗುವಂತೆ ಟೋಲ್‌‌ಗಳಲ್ಲಿನ ಶುಲ್ಕ ಸಂಗ್ರಹವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿತ್ತು.

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ಮಾರ್ಚ್ 25ರಿಂದ ಟೋಲ್‌‌ಗಳಲ್ಲಿ ಶುಲ್ಕ ವಿಧಿಸುವುದನ್ನು ಕೇಂದ್ರ ಸರ್ಕಾರವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳಿಗೆ ಅನುಕೂಲವಾಗಿತ್ತು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ಲಾಕ್‌ಡೌನ್ ಸಂದರ್ಭದಲ್ಲಿಯೇ ಟೋಲ್‌ಗಳಲ್ಲಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಟೋಲ್ ಶುಲ್ಕವನ್ನು ಏಪ್ರಿಲ್ 20ರಿಂದ ಪುನಃ ಆರಂಭಿಸಲಾಗುವುದು ಎಂದು ಈ ಮೊದಲೇ ಹೇಳಲಾಗಿತ್ತು. ಅದರಂತೆ ಮೊನ್ನೆಯಿಂದ ಟೋಲ್ ಶುಲ್ಕವನ್ನು ಆರಂಭಿಸಲಾಗಿದೆ. ಇದು ಟ್ರಕ್ ಮಾಲೀಕರು ಹಾಗೂ ಸಾರ್ವಜನಿಕರಿಗೆ ಆಘಾತವನ್ನುಂಟು ಮಾಡಿದೆ.

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ಟೋಲ್ ಶುಲ್ಕ ಘೋಷಣೆಯಿಂದ ಆಘಾತಕ್ಕೊಳಗಾದವರಿಗೆ, ಟೋಲ್ ಪ್ಲಾಜಾ ಪ್ರವೇಶಿಸಿದಾಗ ಮತ್ತೊಂದು ಆಘಾತ ಎದುರಾಗಿದೆ. ಟೋಲ್ ಪ್ಲಾಜಾಗಳಲ್ಲಿನ ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ. ತಮಿಳುನಾಡಿನಲ್ಲಿರುವ ಟೋಲ್ ಪ್ಲಾಜಾಗಳಲ್ಲಿನ ಟೋಲ್ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ತಮಿಳುನಾಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 48 ಟೋಲ್‌ಗಳಿವೆ. ಈ ಪೈಕಿ 26 ಟೋಲ್‌ಗಳಲ್ಲಿನ ಶುಲ್ಕವನ್ನು ಏರಿಸಲಾಗಿದೆ. ಟೋಲ್ ದರವನ್ನು ರೂ.5 ರಿಂದ ರೂ.15 ರವರೆಗೆ ಏರಿಸಲಾಗಿದೆ. ಇದು ನಿಜಕ್ಕೂ ಟ್ರಕ್ ಸೇರಿದಂತೆ ಹಲವು ವಾಹನ ಮಾಲೀಕರಿಗೆ ಆಘಾತವನ್ನುಂಟು ಮಾಡಿದೆ.

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ಈ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಪ್ರತಿವರ್ಷ ಏಪ್ರಿಲ್ 1 ಹಾಗೂ ಸೆಪ್ಟೆಂಬರ್ 1ರಂದು ತಮಿಳುನಾಡಿನಲ್ಲಿರುವ ಟೋಲ್‌ಗಳ ಶುಲ್ಕವನ್ನು ಏರಿಸಲಾಗುತ್ತದೆ. ಅದರಂತೆ ಈ ಬಾರಿಯೂ ಸಹ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಶುಲ್ಕವನ್ನು ಏರಿಸಲಾಗಿದೆ ಎಂದು ಹೇಳಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ಲಾಕ್‌ಡೌನ್‌ನಿಂದ ಟೋಲ್ ಶುಲ್ಕ ಸಂಗ್ರಹವನ್ನು ಸ್ಥಗಿತಗೊಳಿಸಿದ್ದ ಕಾರಣಕ್ಕೆ ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬಂದಿರಲಿಲ್ಲ. ಈ ಕಾರಣಕ್ಕೆ ಹೊಸ ದರವನ್ನು ಏಪ್ರಿಲ್ 20ರಿಂದ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ತಮಿಳುನಾಡಿನಲ್ಲಿ ಉಳಿದ ಟೋಲ್‌ಗಳಲ್ಲಿನ ಶುಲ್ಕವನ್ನು ಸೆಪ್ಟೆಂಬರ್ 1ರಿಂದ ಏರಿಕೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ. ಆ ಟೋಲ್‌ಗಳಲ್ಲಿನ ಶುಲ್ಕವನ್ನು ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಏರಿಕೆ ಮಾಡಲಾಗುವುದು. ಸಾರಿಗೆ ಸಂಘಗಳ ಪ್ರತಿಭಟನೆಯ ನಡುವೆಯೂ ಟೋಲ್‌ಗಳಲ್ಲಿ ಶುಲ್ಕ ಸಂಗ್ರಹವನ್ನು ಪುನರಾರಂಭಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ಶುಲ್ಕ ಸಂಗ್ರಹವನ್ನು ಮುಂದೂಡುವಂತೆ ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರು ಮಾಡಿದ್ದ ಮನವಿಯನ್ನು ತಳ್ಳಿಹಾಕಲಾಗಿದೆ. ಇದರ ಜೊತೆಗೆ ಶುಲ್ಕವನ್ನು ಏರಿಸಿ ವಾಹನ ಸವಾರರಿಗೆ ಡಬಲ್ ಶಾಕ್ ನೀಡಲಾಗಿದೆ.

ವಾಹನ ಸವಾರರಿಗೆ ಡಬಲ್ ಶಾಕ್ ನೀಡಿದ ಎನ್‌ಹೆಚ್‌ಎ‌ಐ

ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಉಳಿದ ರಾಜ್ಯಗಳಲ್ಲಿರುವ ಟೋಲ್ ಪ್ಲಾಜಾಗಳಲ್ಲಿಯೂ ಸಹ ತಮಿಳುನಾಡಿನಂತೆಯೇ ಶುಲ್ಕ ಏರಿಕೆ ಮಾಡಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Tamilnadu user fee hiked by Rs.5 to Rs.15 in 26 toll plazas. Read in Kannada.
Story first published: Wednesday, April 22, 2020, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X