ದೀಪಾವಳಿ ಆಫರ್: ಕಾರುಗಳ ಖರೀದಿಗೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದ ಟಾಟಾ

ದೇಶಾದ್ಯಂತ ದಸರಾ ಮತ್ತು ಮುಂಬರುವ ದೀಪಾವಳಿ ಸಂಭ್ರಮಕ್ಕಾಗಿ ಹೊಸ ವಾಹನ ಖರೀದಿ ಭರಾಟೆಯು ಜೋರಾಗಿದ್ದು, ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಹಬ್ಬದ ಸಂಭ್ರಮದಲ್ಲಿ ಗರಿಷ್ಠ ವಾಹನ ಮಾರಾಟ ಗುರಿಯೊಂದಿಗೆ ಹಲವಾರು ಆಕರ್ಷಕ ಆಫರ್‌ಗಳನ್ನು ಘೋಷಣೆ ಮಾಡಿವೆ.

ದೀಪಾವಳಿ ಆಫರ್: ಕಾರುಗಳ ಖರೀದಿಗೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದ ಟಾಟಾ

ಕರೋನಾ ವೈರಸ್‌ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಸಿಕೊಳ್ಳುತ್ತಿದ್ದು, ಹಲವಾರು ಆಟೋ ಕಂಪನಿಗಳ ಹೊಸ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಸಂಕಷ್ಟದಲ್ಲೂ ಕಾರು ಮಾರಾಟವು ಚೇತರಿಸಿಕೊಂಡಿರುವುದು ಆಟೋ ಕಂಪನಿಗಳಲ್ಲಿ ಮತ್ತಷ್ಟು ಬಲತುಂಬಿದ್ದು, ದಸರಾ ಮತ್ತು ದೀಪಾವಳಿ ಸಂಭ್ರಮಾಚರಣೆ ವೇಳೆ ಮತ್ತಷ್ಟು ಹೊಸ ವಾಹನಗಳನ್ನು ಮಾರಾಟಗೊಳ್ಳುವ ನೀರಿಕ್ಷೆಯಲ್ಲಿವೆ.

ದೀಪಾವಳಿ ಆಫರ್: ಕಾರುಗಳ ಖರೀದಿಗೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದ ಟಾಟಾ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಟಾಟಾ ಮೋಟಾರ್ಸ್ ಕೂಡಾ ತನ್ನ ಬಹುತೇಕ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್‌ಗಳನ್ನು ಘೋಷಣೆ ಮಾಡಿದೆ.

ದೀಪಾವಳಿ ಆಫರ್: ಕಾರುಗಳ ಖರೀದಿಗೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರುಗಳ ಖರೀದಿಯ ಮೇಲೆ ಗ್ರಾಡ್ಯುವಲ್ ಸ್ಟೆಪ್ ಅಪ್ ಸ್ಕೀಮ್ ಮತ್ತು ಟಿಎಂಎಲ್ ಫ್ಲೆಕ್ಸಿ ಡ್ರೈವ್ ಎನ್ನುವ ಎರಡು ಮಾದರಿಯ ಲೋನ್ ಸೌಲಭ್ಯಗಳನ್ನು ಘೋಷಣೆ ಮಾಡಿದ್ದು, ಶೇ.100ರಷ್ಟು ಎಕ್ಸ್‌ಶೋರೂಂ ದರದ ಮೇಲೆ ಸಾಲ ಸೌಲಭ್ಯ ಸಿಗಲಿದೆ.

ದೀಪಾವಳಿ ಆಫರ್: ಕಾರುಗಳ ಖರೀದಿಗೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದ ಟಾಟಾ

ಗ್ರಾಡ್ಯುವಲ್ ಸ್ಟೆಪ್ ಅಪ್ ಸ್ಕೀಮ್ ಲೋನ್ ಆಫರ್‌ನಲ್ಲಿ ಗ್ರಾಹಕರಿಗೆ ಆಕರ್ಷಕ ಬಡ್ಡಿದರದಲ್ಲಿ ಒಂದು ಲಕ್ಷಕ್ಕೆ ರೂ. 799 ಇಎಂಐಯೊಂದಿಗೆ ತ್ವರಿತವಾಗಿ ಮಾಲೀಕತ್ವ ಪಡೆಯಬಹುದಾಗಿದ್ದು, ಕಾರು ಮಾಡಿದ 2 ವರ್ಷಗಳ ನಂತರ ಕ್ರಮೇಣ ಇಎಂಐ ಮೊತ್ತವು ಹೆಚ್ಚಳವಾಗುತ್ತದೆ. ಸಾಲ ಮರುಪಾವತಿಗೆ ಗರಿಷ್ಠ ಐದು ವರ್ಷಗಳನ್ನು ನೀಡಲಾಗಿದ್ದು, ಸದ್ಯ ಕರೋನಾ ವೈರಸ್ ಪರಿಣಾಮ ಹೊಸ ಕಾರು ಖರೀದಿ ಮುಂದೂಡಿರುವ ಗ್ರಾಹಕರಿಗೆ ಇದು ಅನುಕೂಲಕರವಾಗಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ದೀಪಾವಳಿ ಆಫರ್: ಕಾರುಗಳ ಖರೀದಿಗೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದ ಟಾಟಾ

ಟಿಎಂಎಲ್ ಫ್ಲೆಕ್ಸಿ ಡ್ರೈವ್ ಎನ್ನುವ ಇನ್ನೊಂದು ಲೋನ್ ಸ್ಕೀಮ್ ಅಡಿ ವಾಹನ ಸಾಲ ಪಡೆಯುವ ಗ್ರಾಹಕರಿಗೆ ಕಾರ್ ವೆರಿಯೆಂಟ್ ಆಧರಿಸಿ ಪ್ರತಿ ಲಕ್ಷಕ್ಕೆ ರೂ.789 ಗಳಂತೆ ವರ್ಷಕ್ಕೆ ಮೂರು ತಿಂಗಳು ಇಎಂಐ ಪಾವತಿಗೆ ವಿನಾಯ್ತಿ ದೊರೆಯಲಿದೆ.

ದೀಪಾವಳಿ ಆಫರ್: ಕಾರುಗಳ ಖರೀದಿಗೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದ ಟಾಟಾ

ಟಿಎಂಎಲ್ ಫ್ಲೆಕ್ಸಿ ಡ್ರೈವ್ ಲೋನ್ ಅಡಿ ಕಾರು ಖರೀದಿ ಮಾಡುವುದರಿಂದ ಗ್ರಾಹಕರಿಗೆ ಐದು ವರ್ಷಗಳ ಕಾಲ ವರ್ಷಕ್ಕೆ ಮೂರು ತಿಂಗಳಂತೆ ಒಟ್ಟು 15 ತಿಂಗಳ ಕಾಲ ಇಎಂಐ ಮರುಪಾವತಿಗೆ ವಿನಾಯ್ತಿ ದೊರೆಯಲಿದ್ದು, ವಿನಾಯ್ತಿ ಪಡೆದ ಲೋನ್ ಇಎಂಐ ಮೊತ್ತವು ಇನ್ನುಳಿದ ತಿಂಗಳ ಇಎಂಐನಲ್ಲಿ ಸೇರ್ಪಡೆಗೊಳಿಸಿ ದರ ನಿಗದಿಮಾಡಲಾಗುತ್ತದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ದೀಪಾವಳಿ ಆಫರ್: ಕಾರುಗಳ ಖರೀದಿಗೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದ ಟಾಟಾ

ಅಂದರೆ ಕಾರು ಖರೀದಿ ಮಾಡುವ ಗ್ರಾಹಕನು ವರ್ಷದ ಯಾವ ತಿಂಗಳಿನಲ್ಲಿ ಆದಾಯ ಕಡಿಮೆ ಇರುತ್ತೆ ಎನ್ನಿಸುವುದೋ ಆ ತಿಂಗಳಿನಲ್ಲಿ ಇಎಂಐ ಮರುಪಾವತಿ ವಿನಾಯ್ತಿ ಪಡೆದುಕೊಳ್ಳುವ ಅವಕಾಶವಿದ್ದು, ಹೊಸ ಲೋನ್‌ಗಳನ್ನು ಹೆಚ್‌ಡಿಎಫ್‌ಪಿ ಜೊತೆಗೂಡಿ ನೀಡಲಾಗುತ್ತಿದೆ.

Article Published On: Tuesday, October 20, 2020, 10:54 [IST]
English summary
Tata Cars Finance Offers & Benefits During Festive Season. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+