ಅಲಾಯ್ ವೀಲ್ಹ್‌ನೊಂದಿಗೆ ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ಟಾಟಾ ಗ್ರಾವಿಟಾಸ್
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಗ್ರಾವಿಟಾಸ್ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, 2021ರ ಆರಂಭದಲ್ಲಿ ಬಿಡುಗಡೆಯ ನೀರಿಕ್ಷೆಯಲ್ಲಿರುವ ಹೊಸ ಕಾರು ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್‌ಗಳನ್ನು ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಗ್ರಾವಿಟಾಸ್ ಎಸ್‌ಯುವಿ ಮಾದರಿಯನ್ನು ಇದೇ ಜೂನ್ ಅಥವಾ ಜುಲೈ ಅವಧಿಯಲ್ಲಿ ಬಿಡುಗಡೆಯ ಯೋಜನೆಯಲ್ಲಿದ್ದ ಟಾಟಾ ಮೋಟಾರ್ಸ್ ಕಂಪನಿಯು ಕರೋನಾ ವೈರಸ್‌ನಿಂದಾಗಿ ಕಾರು ಬಿಡುಗಡೆಯನ್ನು 2021ಕ್ಕೆ ಮುಂದೂಡಿದ್ದು, ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಅಲಾಯ್ ವೀಲ್ಹ್‌ನೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಗ್ರಾವಿಟಾಸ್ ಕಾರು ಟಾಟಾ ನಿರ್ಮಾಣದ ಕಾರುಗಳಲ್ಲೇ ವಿಶೇಷ ವಿನ್ಯಾಸದ ಎಸ್‌ಯುವಿ ಆವೃತ್ತಿಯಾಗಿದ್ದು, ಹ್ಯಾರಿಯರ್ ಉತ್ಪಾದನೆಗಾಗಿ ಬಳಕೆ ಮಾಡಲಾಗಿದ್ದ OMEGA ಪ್ಲ್ಯಾಟ್‌ಫಾರ್ಮ್‌ನಡಿಯಲ್ಲೇ ಹೊಸ ಗ್ರಾವಿಟಾಸ್ ಅನ್ನು ಕೂಡಾ ಅಭಿವೃದ್ದಿಗೊಳಿಸಲಾಗಿದೆ.

OMEGA ಕಾರು ಉತ್ಪಾದನಾ ತಂತ್ರಜ್ಞಾನವು ಟಾಟಾ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಗ್ರಾವಿಟಾಸ್ ಕಾರು ಕೂಡಾ ಹ್ಯಾರಿಯರ್ ಮಾದರಿಯಲ್ಲೇ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ತಂತ್ರಜ್ಞಾನವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಕಾಣಬಹುದಾಗಿದ್ದು, ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.

ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಅಭಿವೃದ್ದಿಗೊಳ್ಳುತ್ತಿದ್ದು, 6 ಸೀಟರ್ ಮಾದರಿಯು 2+2+2 ಮಾದರಿ ಆಸನ ಸೌಲಭ್ಯದೊಂದಿಗೆ ಮತ್ತು 7 ಸೀಟರ್ ಮಾದರಿಯು 2+3+2 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿರಲಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಈ ಮೂಲಕ ಹೊಸ ಕಾರು ಆವೃತ್ತಿಯು ಪ್ರತಿಸ್ಪರ್ಧಿ ಮಾದರಿಗಳಾದ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಜಿ4 ಜೊತೆಗೆ ಟೊಯೊಟಾ ಫಾರ್ಚೂನರ್ ಕಾರಿಗೂ ಪೈಪೋಟಿ ನೀಡಲಿದ್ದು, ಉತ್ತಮ ಸ್ಥಳಾವಕಾಶದೊಂದಿಗೆ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಗ್ರಾವಿಟಾಸ್ ಕಾರು 4,661-ಎಂಎಂ ಉದ್ದ, 1786-ಎಂಎಂ ಎತ್ತರ ಮತ್ತು 2,741-ಎಂಎಂ ವೀಲ್ಹ್ ಬೆಸ್‌ನೊಂದಿಗೆ ಹ್ಯಾರಿಯರ್‌ಗಿಂತಲೂ 63-ಎಂಎಂ ಹೆಚ್ಚು ಉದ್ದ, 80-ಎಂಎಂ ಕಡಿಮೆ ಎತ್ತರ ಪಡೆದುಕೊಂಡಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, 18-ಇಂಚಿನ ನೈನ್ ಸ್ಪೋಕ್ ಅಲಾಯ್ ವೀಲ್ಹ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍ಗಳಿಂದ ಸಜ್ಜುಗೊಂಡಿದೆ.

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)
ಈ ಮೊದಲು ನಿಗದಿಪಡಿಸಿದ ಯೋಜನೆಯೆಂತೆ ಹೊಸ ಗ್ರಾವಿಟಾಸ್ ಕಾರು ಇದೇ ವರ್ಷ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಹೊಸ ಕಾರಿನ ಬಿಡುಗಡೆಯು 2021ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.19 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.25 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷಿಸಲಾಗಿದೆ.


Click it and Unblock the Notifications