ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡುಗಡೆ ಮಾಡಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಪ್ರತಿ 2 ತಿಂಗಳಿಗೆ ಒಂದು ಬಾರಿ ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಇದೀಗ ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳನ್ನೂ ಡಾರ್ಕ್ ಎಡಿಷನ್ ಬಿಡುಗಡೆ ಮಾಡಿದೆ.

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಹ್ಯಾರಿಯರ್ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ಮಾತ್ರವೇ ಡಾರ್ಕ್ ಎಡಿಷನ್ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲೂ ಪರಿಚಯಿಸಲಾಗಿದ್ದು, ಗ್ರಾಹಕರು ಇದೀಗ ಹ್ಯಾರಿಯರ್ ಎಕ್ಸ್‌ಟಿ ಮತ್ತು ಎಕ್ಸ್‌ಟಿ ಪ್ಲಸ್ ವೆರಿಯೆಂಟ್‌ಗಳಲ್ಲೂ ಡಾರ್ಕ್ ಎಡಿಷನ್ ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಡಾರ್ಕ್ ಎಡಿಷನ್ ಹೊಂದಿರುವ ಹ್ಯಾರಿಯರ್ ಎಕ್ಸ್‌ಟಿ ಮತ್ತು ಎಕ್ಸ್‌ಟಿ ಪ್ಲಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.50 ಲಕ್ಷ ಮತ್ತು ರೂ. 17.30 ಲಕ್ಷ ಬೆಲೆ ಹೊಂದಿದ್ದು, ಎಸ್‌ಯುವಿ ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಜೊತೆಗೆ ಎಕ್ಸ್‌ಟಿ ಪ್ಲಸ್ ಹೊಸ ವೆರಿಯೆಂಟ್‌ನಲ್ಲಿ ಪನೊರಮಿಕ್ ಸನ್‌ರೂಫ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎಕ್ಸ್‌ಟಿ ಪ್ಲಸ್ ಸಾಮಾನ್ಯ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 16.99 ಲಕ್ಷ ಬೆಲೆ ಪಡೆದುಕೊಂಡಿದೆ.

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಈ ಮೂಲಕ ಹ್ಯಾರಿಯರ್ ಕಾರಿನಲ್ಲಿ ಒಟ್ಟು 19 ವೆರಿಯೆಂಟ್‌ಗಳನ್ನು ಪರಿಚಯಿಸಿದಂತಾಗಿದ್ದು, ಫೇಸ್‌ಲಿಫ್ಟ್ ಮಾದರಿಯ ಬಿಡುಗಡೆಯ ನಂತರ ಹ್ಯಾರಿಯರ್ ಕಾರಿನಲ್ಲಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಬಿಎಸ್-6 ಎಂಜಿನ್ ಪ್ರೇರಿತ ಹ್ಯಾರಿಯರ್ ಫೇಸ್‌ಲಿಫ್ಟ್ ಆವೃತ್ತಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಹೊಸ ಕಾರಿನ ಬೆಲೆಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.30 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದರಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.40 ಲಕ್ಷದಿಂದ ಆರಂಭಗೊಳ್ಳಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಇದರಲ್ಲಿ ಬ್ಲ್ಯಾಕ್ ಎಡಿಷನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.16.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.30 ಲಕ್ಷ ಬೆಲೆ ಹೊಂದಿದೆ.

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹ್ಯಾರಿಯರ್ ಎಸ್‌ಯುವಿ ಕಾರು 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹ್ಯಾರಿಯರ್ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳಲ್ಲಿ ಡಾರ್ಕ್ ಎಡಿಷನ್ ಬಿಡು

ಸದ್ಯ ಡೀಸೆಲ್ ಎಂಜಿನ್ ಮಾದರಿಯಲ್ಲೇ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಹ್ಯಾರಿಯರ್ ಕಾರು ಶೀಘ್ರದಲ್ಲೇ ಪೆಟ್ರೋಲ್ ಮಾದರಿಯನ್ನು ಪಡೆದುಕೊಳ್ಳಲಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಬಲಿಷ್ಠ ಕಾರು ಮಾದರಿಯಾಗಿದೆ.

Most Read Articles

Kannada
English summary
Tata Harrier Dark Edition New Variants Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X