ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‍ಬಿಎಕ್ಸ್ ಮಿನಿ ಎಸ್‍ಯುವಿ
ಟಾಟಾ ಮೋಟಾರ್ಸ್ ಕಂಪನಿಯು ಹೆಚ್‍ಬಿಎಕ್ಸ್ ಮಿನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರೊಂದಿಗೆ ಹೆಚ್‍ಬಿಎಕ್ಸ್ ಮಿನಿ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿಯು ಕೂಡ ಬಿಡುಗಡೆಗೊಳಿಸಲಿದೆ.

ಈ ಮಿನಿ ಇವಿ ಎಸ್‍ಯುವಿಯಲ್ಲಿ ನೆಕ್ಸಾನ್ ಇವಿ ಯಲ್ಲಿ ಬಳಸಿದ ಜಿಪ್ಟ್ರಾನ್ ಇವಿ ಪವರ್‌ಟ್ರೇನ್ ತಂತ್ರಜ್ಞಾನ ಹೊಂದಿರುತ್ತದೆ. ಈ ಟಾಟಾ ಹೆಚ್‍ಬಿಎಕ್ಸ್ ಎಲೆಕ್ಟ್ರಿಕ್ ಆವೃತ್ತಿಯನ್ನು ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗುತ್ತದೆ. ಹೆಚ್‍ಬಿಎಕ್ಸ್ ಇವಿ ಎಸ್‍ಯುವಿಯಲ್ಲಿ ಮೋಟಾರ್ ನೊಂದಿಗೆ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಿದೆ. ಈ ಇವಿಯ ಮೋಟಾರ್ 129 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಉತ್ಪಾದನೆಗೆ ಸಿದ್ಧವಾದ ಟಾಟಾ ಹೆಚ್‌ಬಿಎಕ್ಸ್ ಇವಿ ಹೇಗಿರಬಹುದು ಎಂಬುದನ್ನು ಇತ್ತೀಚಿನ ಡಿಜಿಟಲ್ ರೆಂಡರಿಂಗ್ ಚಿತ್ರವನ್ನು ಆನ್‍ಲೈನ್‍ನಲ್ಲಿ ಬಿಡುಗಡೆಗೊಳಿಸಿದೆ. ಪ್ರದರ್ಶಿಸಲಾದ ಮಾದರಿಯು ಹ್ಯಾರಿಯರ್-ಪ್ರೇರಿತ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ದೊಡ್ಡ ಬಂಪರ್ ಮತ್ತು ನೀಲಿ ಬಣ್ಣದ ಎಕ್ಸೆಟ್ ಗಳಿವೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಕಾರುಗಳು

ಇನ್ನು ಈ ಚಿತ್ರದಲ್ಲಿ ಈ ಮಿನಿ ಎಸ್‍ಯುವಿಯಲ್ಲಿ ಅಲಾಯ್ ವ್ಹೀಲ್ ಮತ್ತು ಸಿ-ಪಿಲ್ಲರ್ ವಿನ್ಯಾಸ ಮತ್ತು ಸಿಗ್ನೇಚರ್ ಟೀಲ್ ಬ್ಲೂ ಬಣ್ಣವನ್ನು ಹೊಂದಿದೆ. .ಎಚ್‌ಬಿಎಕ್ಸ್ ಬ್ಲೈಕ್ ರೂಫ್ ರೈಲ್, ಬ್ಲ್ಯಾಕ್ ಒಆರ್‌ವಿಎಂಗಳು ಮತ್ತು ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ.

ಟಾಟಾ ಮೋಟಾರ್ಸ್ ಕಂಪನಿಯು ಸಾಮಾನ್ಯ ಹೆಚ್‍ಬಿಎಕ್ಸ್ ಮಿನಿ ಎಸ್‍ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಹೆಚ್‍ಬಿಎಕ್ಸ್ ಟಾಟಾ ಮೋಟಾರ್ಸ್ ಕಂಪನಿಯ ಮಿನಿ ಎಸ್‍ಯುವಿಯಾಗಿದೆ. ಈ ಮಿನಿ ಎಸ್‍ಯುವಿಯು 2020-21ರ ಆರ್ಥಿಕ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ ಎಂದು ಟಾಟಾ ಮೋಟಾರ್ಸ್ ಸ್ಪಷ್ಟ ಪಡಿಸಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಭಾರತದಲ್ಲಿ ಬಿಡುಗಡೆಯಾದ ನಂತರ ಹೆಚ್‍ಬಿಎಕ್ಸ್ ಟಾಟಾ ಮೋಟಾರ್ಸ್ ಸರಣಿಯಲ್ಲಿ ನೆಕ್ಸಾನ್ ಕಾರಿಗಿಂತ ಕೆಳಗಿನ ಸ್ಥಾನದಲ್ಲಿರಲಿದೆ. ಟಾಟಾ ಹೆಚ್‍ಬಿಎಕ್ಸ್ ಮಿನಿ ಎಸ್‍ಯುವಿಯು ಆಲ್‍ಟ್ರೊಜ್‍ನಂತೆಯೇ ಬ್ರ್ಯಾಂಡ್‍ನ ಆಲ್ಫಾ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಹೆಚ್‍ಬಿಎಕ್ಸ್ ಒಂದು ಕಾನ್ಸೆಪ್ಟ್ ಎಂದು ಹೇಳಲಾಗುತ್ತಿದೆ.

ಟಾಟಾ ಮೋಟಾರ್ಸ್‍ನ ಮಿನಿ-ಎಸ್‍ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಿನಿ ಎಸ್‍ಯುವಿಯ ಮುಂಭಾಗವು ಟಾಟಾ ಹ್ಯಾರಿಯರ್ ಎಸ್‍ಯುವಿ ಮಾದರಿಯಲ್ಲಿದೆ. ಈ ಮಿನಿ ಎಸ್‍ಯುವಿಯ ಮುಂಭಾಗ ಡ್ಯುಯಲ್ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದೆ. ಇನ್ನೂ ಡಿಆರ್‍ಎಲ್ ಮತ್ತು ಹೆಡ್‍ಲ್ಯಾಂಪ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍ಯುವಿ

ಈ ಮಿನಿ ಎಸ್‍ಯುವಿಯಲ್ಲಿ ಟಾಟಾ ಆಲ್‍ಟ್ರೊಜ್‍ನಂತೆಯೇ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ 1.2 ಲೀಟರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್‍ನೊಂದಿಗೆ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ.

ಈ ಹೊಸ ಹೆಚ್‍ಬಿಎಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಇಗ್ನಿಸ್ ಮತ್ತು ಮಹೀಂದ್ರಾ ಕೆಯುವಿ 100 ಮಿನಿ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ ಹೆಚ್‍ಬಿಎಕ್ಸ್ ಎಲೆಕ್ಟ್ರಿಕ್ ಆವೃತ್ತಿಯ ಉತ್ಪಾದನೆಯು ಶೀಘ್ರದಲ್ಲೇ ಪ್ರಾರಂಭಿಸಬಹುದು.


Click it and Unblock the Notifications