ಕಾನ್ಸೆಪ್ಟ್ ಮಾದರಿಯಲ್ಲೇ ಬಿಡುಗಡೆಯಾಗಲಿದೆ ಟಾಟಾ ಹೊಸ ಕಾರು
ದೇಶಾದ್ಯಂತ ಲಾಕ್‌ಡೌನ್ ಸಡಿಲಿಕೆ ನಂತರ ಬಹುತೇಕ ವಾಣಿಜ್ಯ ಚಟುವಟಿಕೆಗಳು ಹಂತ ಹಂತವಾಗಿ ಚಾಲನೆ ಪಡೆದುಕೊಳ್ಳುತ್ತಿದ್ದು, ಆಟೋ ಉತ್ಪಾದನಾ ವಲಯದಲ್ಲೂ ಹೊಸ ವಾಹನ ಉತ್ಪಾದನೆ, ಬಿಡುಗಡೆ ಮತ್ತು ಮಾರಾಟ ಪ್ರಕ್ರಿಯೆಯು ನಿಧಾನ ಚೇತರಿಸಿಕೊಳ್ಳುತ್ತಿವೆ.

ಟಾಟಾ ಮೋಟಾರ್ಸ್ ಸಹ ಹೊಸ ವಾಹನಗಳ ಮಾರಾಟ ಪ್ರಕ್ರಿಯೆ ಜೊತೆಗೆ ಬಿಡುಗಡೆಯಾಗಲಿರುವ ಹೊಸ ವಾಹನಗಳ ಅಭಿವೃದ್ದಿ ಮೇಲೂ ಗಮನಹರಿಸುತ್ತಿದ್ದು, ಬಹುನೀರಿಕ್ಷಿತ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ ಮತ್ತು ಗ್ರಾವಿಟಾಸ್ ಎಸ್‌ಯುವಿ ಬಿಡುಗಡೆಗೆ ಸಜ್ಜಾಗುತ್ತಿದೆ. ಹೀಗಾಗಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಮರು ಚಾಲನೆ ನೀಡಲಾಗಿದ್ದು, ಹೊಸ ಕಾರುಗಳು ಮುಂಬರುವ ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿವೆ.

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ನಂತರ ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಮೇಲೆ ಉತ್ಪಾದನೆ ಮಾಡಲಾಗುತ್ತಿರುವ ಎರಡನೇ ಆವೃತ್ತಿಯಾಗಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಶೀಘ್ರದಲ್ಲೇ ಉತ್ಪಾದನಾ ಮಾದರಿಯು ಸಹ ಅನಾವರಣಗೊಳ್ಳಲಿದ್ದು, ಹೊಸ ಕಾರು ಕಾನ್ಸೆಪ್ಟ್ ಮಾದರಿಯಲ್ಲೇ ಬಹುತೇಕ ವಿನ್ಯಾಸಗಳನ್ನು ಪಡೆದುಕೊಂಡಿರಲಿದೆ.

ಸಣ್ಣ ಗಾತ್ರದ ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಹೊರ ವಿನ್ಯಾಸ ಹೊಂದಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರನ್ನ ಸದ್ಯ ವಿವಿಧ ಮಾದರಿಯಲ್ಲಿ ತಾಂತ್ರಿಕ ಸೌಲಭ್ಯಗಳ ಪರೀಕ್ಷೆಗಾಗಿ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಮಾರಾಟಗೊಳ್ಳಲಿದ್ದು, ಮಾರುತಿ ಸುಜುಕಿ ಎಸ್-ಪ್ರೆಸ್ಸೊ, ಮಹೀಂದ್ರಾ ಕೆಯುವಿ100 ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರು ಫಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್‌ಗಳೊಂದಿಗೆ ಐದು ವೆರೆಯೆಂಟ್‌ಗಳನ್ನು ಪಡೆದುಕೊಂಡಿರಲಿದೆ.

ಮೈಕ್ರೊ ಎಸ್‌ಯುವಿ ಕಾರುಗಳಲ್ಲಿ ಗಮನಸೆಳೆಯುವಂತಹ ಉದ್ದಳತೆ ಹೊಂದಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು 3,822-ಎಂಎಂ ಉದ್ದ, 1,822-ಎಂಎಂ ಉದ್ದ, 1,635-ಎಂಎಂ ಅಗಲ ಮತ್ತು 2,450-ಎಂಎಂ ವೀಲ್ಹ್‌ಬೆಸ್ ಹೊಂದಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರು 1.2-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆದರೆ ಹೊಸ ಕಾರಿನ ಎಂಜಿನ್ ಆಯ್ಕೆ ಕುರಿತಾಗಿ ಇದುವರೆಗೂ ಯಾವುದೇ ನಿಖರ ಮಾಹಿತಿ ಇಲ್ಲ.

ಇನ್ನು ಹೊಸ ಕಾರಿನಲ್ಲಿ ಸ್ಪೋರ್ಟಿ ಖದರ್ ಹೆಚ್ಚಿಸಲು ವಿಶೇಷ ಡಿಸೈನ್‌ಗಳನ್ನು ನೀಡಲಾಗಿದ್ದು, ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟ್‌ಅಪ್, ಆಕರ್ಷಕವಾದ ಬಂಪರ್, ಸ್ಕ್ವಾರ್ಡ್ ಔಟ್ ವೀಲ್ಹ್ ಆರ್ಚ್, ರೂಫ್ ಮೌಂಟೆಡ್ ಕ್ಯಾರಿಯರ್ ಸೌಲಭ್ಯಗಳು ಕಾರಿನ ಬಲಿಷ್ಠತೆ ಮತ್ತಷ್ಟು ಮೆರಗು ನೀಡಿವೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಪೆಟ್ರೋಲ್ ಆವೃತ್ತಿಯನ್ನು ಇದೇ ವರ್ಷದ ಜುಲೈ ಅಥವಾ ಅಗಸ್ಟ್ ಹೊತ್ತಿಗೆ ಬಿಡುಗೆಡೆಗೊಳ್ಳಬಹುದೆಂದು ನೀರಿಕ್ಷೆ ಮಾಡಲಾಗಿತ್ತು. ಆದರೆ ಲಾಕ್‌ಡೌನ್ ಸಂಕಷ್ಟದಿಂದಾಗಿ ಮಾರುಕಟ್ಟೆಯ ಸನ್ನಿವೇಶದ ಆಧಾರದ ಮೇಲೆ ಹೊಸ ಕಾರು ಬಿಡುಗಡೆಯನ್ನು ಮುಂದಿನ ನವೆಂಬರ್ ಅಂತ್ಯಕ್ಕೆ ಮುಂದೂಡಲಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.7.50 ಲಕ್ಷ ಬೆಲೆ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications