ಕಣಿವೆ ಪ್ರದೇಶಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ

ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ ಆವೃತ್ತಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತು ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದುವರಿಸಿದೆ.

ಕಣಿವೆ ಪ್ರದೇಶಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ಹೆಚ್‌ಬಿಎಕ್ಸ್

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಹೊಸ ವಾಹನಗಳ ಮಾರಾಟ ಪ್ರಕ್ರಿಯೆ ಜೊತೆಗೆ ಬಿಡುಗಡೆಯಾಗಲಿರುವ ಹೊಸ ವಾಹನಗಳ ಅಭಿವೃದ್ದಿ ಮೇಲೂ ಗಮನಹರಿಸುತ್ತಿದ್ದು, ಬಹುನೀರಿಕ್ಷಿತ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ ಮತ್ತು ಗ್ರಾವಿಟಾಸ್ ಎಸ್‌ಯುವಿ ಬಿಡುಗಡೆಗೆ ಸಜ್ಜಾಗುತ್ತಿದೆ. ಹೀಗಾಗಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಲಾಕ್‌ಡೌನ್ ವಿನಾಯ್ತಿ ನಂತರ ಮರು ಚಾಲನೆ ನೀಡಲಾಗಿದ್ದು, ಹೊಸ ಕಾರುಗಳು ಮುಂಬರುವ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿವೆ.

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ನಂತರ ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಮೇಲೆ ಉತ್ಪಾದನೆ ಮಾಡಲಾಗುತ್ತಿರುವ ಎರಡನೇ ಆವೃತ್ತಿಯಾಗಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಶೀಘ್ರದಲ್ಲೇ ಉತ್ಪಾದನಾ ಮಾದರಿಯು ಸಹ ಅನಾವರಣಗೊಳ್ಳಲಿದ್ದು, ಹೊಸ ಕಾರನ್ನು ಸದ್ಯ ಹವಾಗುಣ ಆಧರಿಸಿ ವಿವಿಧ ಪ್ರದೇಶಗಳಲ್ಲಿ ಎಂಜಿನ್ ಕಾರ್ಯಕ್ಷಮತೆಗಾಗಿ ಕಣಿವೆ ರಾಜ್ಯಗಳಲ್ಲಿ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಕಣಿವೆ ಪ್ರದೇಶಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ಹೆಚ್‌ಬಿಎಕ್ಸ್

ಸಣ್ಣ ಗಾತ್ರದ ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಹೊರ ವಿನ್ಯಾಸ ಹೊಂದಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರನ್ನ ಸದ್ಯ ವಿವಿಧ ಮಾದರಿಯಲ್ಲಿ ತಾಂತ್ರಿಕ ಸೌಲಭ್ಯಗಳ ಪರೀಕ್ಷೆಗಾಗಿ ರೋಡ್ ಟೆಸ್ಟಿಂಗ್‌ ನಡೆಸಲಾಗುತ್ತಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಕಣಿವೆ ಪ್ರದೇಶಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ಹೆಚ್‌ಬಿಎಕ್ಸ್

ಮೈಕ್ರೊ ಎಸ್‌ಯುವಿ ಕಾರುಗಳಲ್ಲಿ ಗಮನಸೆಳೆಯುವಂತಹ ಉದ್ದಳತೆ ಹೊಂದಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು 3,822-ಎಂಎಂ ಉದ್ದ, 1,822-ಎಂಎಂ ಉದ್ದ, 1,635-ಎಂಎಂ ಅಗಲ ಮತ್ತು 2,450-ಎಂಎಂ ವೀಲ್ಹ್‌ಬೆಸ್ ಹೊಂದಿದೆ.

ಕಣಿವೆ ಪ್ರದೇಶಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ಹೆಚ್‌ಬಿಎಕ್ಸ್

ಹೊಸ ಕಾರು 1.2-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆದರೆ ಹೊಸ ಕಾರಿನ ಎಂಜಿನ್ ಆಯ್ಕೆ ಕುರಿತಾಗಿ ಇದುವರೆಗೂ ಯಾವುದೇ ನಿಖರ ಮಾಹಿತಿ ಇಲ್ಲ.

ಕಣಿವೆ ಪ್ರದೇಶಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ಹೆಚ್‌ಬಿಎಕ್ಸ್

ಇನ್ನು ಹೊಸ ಕಾರಿನಲ್ಲಿ ಸ್ಪೋರ್ಟಿ ಖದರ್ ಹೆಚ್ಚಿಸಲು ವಿಶೇಷ ಡಿಸೈನ್‌ಗಳನ್ನು ನೀಡಲಾಗಿದ್ದು, ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟ್‌ಅಪ್, ಆಕರ್ಷಕವಾದ ಬಂಪರ್, ಸ್ಕ್ವಾರ್ಡ್ ಔಟ್ ವೀಲ್ಹ್ ಆರ್ಚ್, ರೂಫ್ ಮೌಂಟೆಡ್ ಕ್ಯಾರಿಯರ್ ಸೌಲಭ್ಯಗಳು ಕಾರಿನ ಬಲಿಷ್ಠತೆ ಮತ್ತಷ್ಟು ಮೆರಗು ನೀಡಿವೆ.

ಕಣಿವೆ ಪ್ರದೇಶಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ಹೆಚ್‌ಬಿಎಕ್ಸ್

ಹೊಸ ಮೈಕ್ರೊ ಎಸ್‌ಯುವಿ ಬಿಡುಗಡೆಯ ಅವಧಿ(ಅಂದಾಜು)

ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಪೆಟ್ರೋಲ್ ಆವೃತ್ತಿಯನ್ನು ಇದೇ ವರ್ಷದ ಜೂನ್ ಅಥವಾ ಜುಲೈ ಹೊತ್ತಿಗೆ ಬಿಡುಗೆಡೆಗೊಳ್ಳಬಹುದೆಂದು ನೀರಿಕ್ಷೆ ಮಾಡಲಾಗಿತ್ತು. ಆದರೆ ಲಾಕ್‌ಡೌನ್ ಸಂಕಷ್ಟದಿಂದಾಗಿ ಮಾರುಕಟ್ಟೆಯ ಸನ್ನಿವೇಶದ ಆಧಾರದ ಮೇಲೆ ಹೊಸ ಕಾರು ಬಿಡುಗಡೆಯ ಮುಂದೂಡಲಾಗಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು 2021ರ ಮೇ ಅವಧಿಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕಣಿವೆ ಪ್ರದೇಶಗಳಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ಟಾಟಾ ಹೆಚ್‌ಬಿಎಕ್ಸ್

ಹೊಸ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತ ಹೆಚ್ಚು ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

Article Published On: Wednesday, November 18, 2020, 21:02 [IST]
English summary
Tata HBX Spotted Test Run On Leh-Manali Highway. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+