Just In
- 11 hrs ago
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- 11 hrs ago
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಫೋರ್ಸ್ ನ್ಯೂ ಜನರೇಷನ್ ಗೂರ್ಖಾ
- 11 hrs ago
ಸೀಮನ್ಸ್ ಕಂಪನಿಯ ಜೊತೆಗೂಡಿ ಆಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಅಭಿವೃದ್ದಿಪಡಿಸಲಿದೆ ಓಲಾ
- 12 hrs ago
ಹೊಸ ವಿನ್ಯಾಸದ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ
Don't Miss!
- News
ಬೆಂಗಳೂರು: 20 ವಾರ್ಡ್ಗಳಲ್ಲಿ 104 ಬೋರ್ವೆಲ್ ಕೊರೆಯಲಿದೆ ಬಿಬಿಎಂಪಿ
- Movies
ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಂಗ್ಲಾ ದೇಶದಲ್ಲೂ ಸದ್ದು ಮಾಡಲಿವೆ ಟಾಟಾ ಏಸ್ ಟ್ರಕ್‌ಗಳು
ಟಾಟಾ ಮೋಟಾರ್ಸ್ ಭಾನುವಾರ 51 ಟಾಟಾ ಏಸ್ ಮಿನಿ ಟ್ರಕ್‌ಗಳನ್ನು ಉತ್ತರ ಪ್ರದೇಶದ ಬರೇಲಿಯಿಂದ ರೈಲ್ವೆ ಕ್ಯಾರಿಯರ್ ಮೂಲಕ ಬಾಂಗ್ಲಾದೇಶಕ್ಕೆ ರಫ್ತು ಮಾಡಿದೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ಚಿತ್ರಗಳನ್ನು ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಈ ಮೂಲಕ ರೈಲ್ವೆ ಇಲಾಖೆಯು ರಫ್ತು ಉತ್ತೇಜಿಸಲು ಪೂರ್ಣ ಸಹಕಾರ ನೀಡುತ್ತಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ವ್ಯಾಪಾರವು ಪೆಟ್ರಾಪೋಲ್-ಬೆನಾಪೋಲ್ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಸಾಗುತ್ತದೆ. ಈ ವ್ಯಾಪಾರ ಪ್ರಮಾಣವು ವಾರ್ಷಿಕ 8.7 ಬಿಲಿಯನ್ ಡಾಲರ್ ಗಳಾಗಿದೆ. ಲಾಕ್ ಡೌನ್ ಅವಧಿಯಲ್ಲಿಯೂ ಈ ವ್ಯಾಪಾರವು ಮುಂದುವರೆದಿತ್ತು. ಇದರ ಜೊತೆಗೆ ರೈಲ್ವೆ ಇಲಾಖೆಯು ಲಾಕ್ ಡೌನ್ ಅವಧಿಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ತನ್ನ ಕಮರ್ಷಿಯಲ್ ವಾಹನಗಳಿಗಾಗಿ ಫ್ಲೀಟ್ ಮ್ಯಾನೇಜ್ ಮೆಂಟ್ ಸೊಲ್ಯುಷನ್ ಬಿಡುಗಡೆಗೊಳಿಸಿದೆ. ಈ ಫ್ಲೀಟ್ ಸೊಲ್ಯುಷನ್ ಟ್ರ್ಯಾಕಿಂಗ್ ಹಾಗೂ ಟ್ರೇಸಿಂಗ್ ಗಳಲ್ಲಿ ನೆರವಾಗಲಿದೆ. ಫ್ಲೀಟ್ ಅನ್ನು ವಾಣಿಜ್ಯ ವಾಹನಗಳಿಗೆ ಮಾತ್ರ ಬಳಸಲಾಗುತ್ತದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಇದರ ನೆರವಿನಿಂದ ವಾಹನಗಳ ಸ್ಥಿತಿ, ಚಾಲನಾ ಮಾದರಿ, ಫ್ಯೂಯಲ್ ಎಫಿಶಿಯನ್ಸಿ ಸೇರಿದಂತೆ ಹಲವು ಮಾಹಿತಿಯನ್ನು ಪಡೆಯಬಹುದು. ಕಂಪನಿಯ ಎಲ್ಲಾ ಮಧ್ಯಮ ಹಾಗೂ ಭಾರೀ ಕಮರ್ಷಿಯಲ್ ವಾಹನಗಳಿಗೆ ಫ್ಲೀಟ್ ಎಡ್ಜ್ ನಿಂದ ಪರಿಹಾರ ದೊರೆಯಲಿದೆ ಎಂದು ಕಂಪನಿ ಹೇಳಿದೆ.

ಈ ವಾಹನಗಳಲ್ಲಿ ಟಾಟಾ ಮೋಟಾರ್ಸ್‌ನ ಬಿಎಸ್ 6 ಸರಣಿಯ ಟ್ರಕ್ ಹಾಗೂ ಬಸ್‌ಗಳು ಸೇರಿವೆ. ಕಂಪನಿಯು ಮಧ್ಯಮ ಹಾಗೂ ಲಘು ವಾಣಿಜ್ಯ ವಾಹನಗಳ ಜೊತೆಗೆ ಸಣ್ಣ ವಾಣಿಜ್ಯ ವಾಹನಗಳಿಗೂ ತನ್ನ ಸೌಲಭ್ಯವನ್ನು ವಿಸ್ತರಿಸಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

2012ರಲ್ಲಿ ಟಾಟಾ ಮೋಟಾರ್ಸ್ ತನ್ನ ವಾಹನಗಳಿಗಾಗಿ ಟೆಲಿಮ್ಯಾಟಿಕ್ ಪರಿಹಾರವನ್ನು ಬಿಡುಗಡೆಗೊಳಿಸಿತ್ತು. ಸದ್ಯಕ್ಕೆ ಕಂಪನಿಯ 2 ಲಕ್ಷಕ್ಕೂ ಹೆಚ್ಚು ಮಧ್ಯಮ ಹಾಗೂ ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳು ಉತ್ಪಾದನಾ ಘಟಕದಲ್ಲಿ ಅಳವಡಿಸಿದ್ದ ಟೆಲಿಮ್ಯಾಟ್ರಿಕ್ ಯುನಿಟ್ ಗಳನ್ನು ಹೊಂದಿವೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

ಈ ಮಾಹಿತಿಯು ಫ್ಲೀಟ್ ಎಡ್ಜ್ ಪೋರ್ಟಲ್ ಜೊತೆಗೆ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ಮಾಹಿತಿಯು ಗ್ರಾಹಕರಿಗೆ ತಮ್ಮ ಫ್ಲೀಟ್ ಅನ್ನು ಇನ್ನಷ್ಟು ಉತ್ತಮವಾಗಿ ಚಲಾಯಿಸಲು ಸಹಾಯ ಮಾಡಲಿದೆ.