ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ಕಾರುಗಳ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಕಳೆದ 30 ವರ್ಷಗಳಲ್ಲಿ 40 ಲಕ್ಷ ಕಾರುಗಳ ಉತ್ಪಾದನೆ ಮಾಡಿ ಹೊಸ ದಾಖಲೆಗೆ ಕಾರಣವಾಗಿದೆ.

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

1945ರಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರಕ್ ಉತ್ಪಾದನೆ ಮೂಲಕ ಆಟೋ ಮೊಬೈಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಲಾದ ಆಲ್‌ಟ್ರೊಜ್ ಕಾರು ಉತ್ಪಾದನೆಯವರೆಗೂ ಹಲವು ಏಳು ಬೀಳುಗಳನ್ನು ಕಂಡಿದ್ದು, ದೇಶದ ಜನಪ್ರಿಯ ಕಾರ್ ಬ್ರ್ಯಾಂಡ್ ಹಿಂದೆ ದೊಡ್ಡ ಇತಿಹಾಸವೇ ಇದೆ. ಆಟೋ ಉದ್ಯಮಕ್ಕೆ ಕಾಲಿಟ್ಟ ಆರಂಭದಲ್ಲಿ ವಾಣಿಜ್ಯ ಬಳಕೆಯ ವಾಹನಗಳನ್ನು ಮಾತ್ರವೇ ಉತ್ಪಾದನೆ ಮಾಡುತ್ತಿದ್ದ ಟಾಟಾ ಕಂಪನಿಯು 1991ರಲ್ಲಿ ಮೊದಲ ಬಾರಿಗೆ ಪ್ರಯಾಣಿಕ ಬಳಕೆಯ ಕಾರುಗಳ ಉತ್ಪಾದನೆ ಆರಂಭಿಸಿತು.

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

ಕಾರು ಉತ್ಪಾದನೆಗೂ ಮೊದಲು ಕೇವಲ ಟ್ರಕ್ ಕವಚಗಳನ್ನು ಮಾತ್ರ ನಿರ್ಮಾಣ ಮಾಡುತ್ತಿದ್ದ ಟಾಟಾ ಕಂಪನಿಯು 1955ರ ನಂತರ ಡೈಮ್ಲರ್ ತಂತ್ರಜ್ಞಾನಗಳ ಬಳಕೆಯೊಂದಿಗೆ ಉತೃಷ್ಟ ಗುಣಮಟ್ಟದ ಟ್ರಕ್ ಉತ್ಪನ್ನಗಳೊಂದಿಗೆ ದೇಶದಲ್ಲಿ ಜನಪ್ರಿಯಗೊಳ್ಳತೊಡಗಿತು.

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

60ರ ದಶಕದವರೆಗೂ ದೇಶಿಯವಾಗಿ ಮಾತ್ರವೇ ವಾಣಿಜ್ಯ ವಾಹನಗಳ ಉತ್ಪಾದನೆ ಕೈಗೊಳ್ಳುತ್ತಿದ್ದ ಟಾಟಾ ಸಂಸ್ಥೆಯು 1961ರಲ್ಲಿ ಮೊದಲ ಬಾರಿಗೆ ಶ್ರೀಲಂಕಾಕ್ಕೆ ವಾಣಿಜ್ಯ ವಾಹನಗಳನ್ನು ರಫ್ತು ಮಾಡುವ ಮೂಲಕ ಸಾಗರೋತ್ತರ ವ್ಯವಹಾರಗಳನ್ನು ಆರಂಭಿಸಿತ್ತು.

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

1969ರಲ್ಲಿ ಡೈಮ್ಲರ್‌ನಿಂದ ಪ್ರತ್ಯೇಕಗೊಂಡ ಟಾಟಾ ಸ್ವತಂತ್ರವಾಗಿ ತನ್ನ ಉತ್ಪನ್ನಗಳ ಮೇಲೆ "T" ಚಿಹ್ನೆಯುಳ್ಳ ಲೋಗೊ ಅಚ್ಚುಹಾಕಲು ಪ್ರಾರಂಭಿಸಿತು. ಇದೇ ಕಾರಣಕ್ಕೆ ಮೊದಮೊದಲು ಟಾಟಾ ಉತ್ಪನ್ನಗಳ ಮೇಲೆ ಬೆಂಝ್ ಚಿಹ್ನೆಯನ್ನೇ ಹಾಕಲಾಗುತ್ತಿತ್ತು. 1986ರಲ್ಲಿ ಬಿಡುಗಡೆಗೊಂಡ ಟಾಟಾ 407 ವಾಹನಗಳು ಹಲವು ದಾಖಲೆಗೆ ಕಾರಣವಾಗಿದಲ್ಲದೇ ಇತಿಹಾದ್ ಮಿಟ್ಸುಬಿಸಿ, ಡಿಸಿಎಂ ಟೊಯೊಟಾ ಮತ್ತು ಸ್ವರಾಜ್ ಮಸ್ದಾ ಟ್ರಕ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡಿತ್ತು.

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

ಆದನಂತರ 1990ರಲ್ಲಿ ಬಿಡುಗಡೆಯಾಗಿದ್ದೇ ಟಾಟಾ ಸಿಯೆರಾ ಎಸ್‌ಯುವಿ. ಇದು ಟಾಟಾದ ಮೊದಲ ಎಸ್‌ಯುವಿ ವಾಹನವಾಗಿದ್ದು, ನಂತರದ ಹಲವಾರು ಯುಟಿಲಿಟಿ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿತು.

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯ ನಿವೃತ್ತ ಎಂಡಿ ಸುಮಾತ್ ಮುಲೋಂಗನ್ ಅವರ ನೆನಪಿಗಾಗಿ ಬಿಡುಗಡೆ ಮಾಡಲಾದ ಸುಮೋ ಎಸ್‌ಯುವಿ ಕಾರು ಕಂಪನಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು. ಪ್ರಯಾಣಿಕರ ವಾಹನಗಳು ಮತ್ತು ವಾಣಿಜ್ಯ ವಾಹನಗಳಲ್ಲದೇ ಮಿಲಟರಿ ವಾಹನಗಳ ಉತ್ಪಾದಲ್ಲೂ ಜನಪ್ರಿಯತೆ ಸಾಧಿಸಿದ ಟಾಟಾ, ತದನಂತರ ಸುಧಾರಿತ ತಂತ್ರಜ್ಞಾನಗಳೊಂದಿಗೆ ಇಂಡಿಕಾ ಕಾರನ್ನು ಬಿಡುಗಡೆ ಮಾಡುವ ಮೂಲಕ ಬಹುದೊಡ್ಡ ಯಶಸ್ಸು ಸಾಧಿಸಿತು.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

ಹೀಗೆ ಹಲವು ಬಗೆಯ ವಾಹನಗಳ ಉತ್ಪಾದನೆ ಮಾಡಿ ದೇಶದ ಜನತೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಟಾಟಾ ಕಂಪನಿಯು ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲೂ ತನ್ನ ಜನಪ್ರಿಯತೆ ಉಳಿಸಿಕೊಂಡಿರುವುದು ಅದರ ಯಶಸ್ಸಿಗೆ ಹಿಡಿದ ಕೈಗನ್ನಡಿ ಎಂದ್ರೆ ತಪ್ಪಾಗಲಾರದು.

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

ಸುರಕ್ಷಿತ ವಾಹನಗಳ ಅಭಿವೃದ್ದಿಯಲ್ಲಿ ಸದ್ಯ ಪ್ರತಿಸ್ಪರ್ಧಿ ವಾಹನ ಮಾದರಿಗಳಿಂತಲೂ ಹೆಚ್ಚು ಜನಪ್ರಿಯತೆ ಹೊಂದಿರುವ ಟಾಟಾ ಕಂಪನಿಯು ಭವಿಷ್ಯದಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆಯ ಸಿದ್ದತೆಯಲ್ಲಿದ್ದು, ಕಳೆದ ಕೆಲ ವರ್ಷಗಳಿಂದ ಟಾಟಾ ಕಾರುಗಳ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಟಾಟಾ ಮೋಟಾರ್ಸ್

2005ರಲ್ಲಿ 10 ಲಕ್ಷ ಕಾರುಗಳ ನಿರ್ಮಾಣವನ್ನು ಪೂರ್ಣಗೊಳಿಸಿದ್ದ ಟಾಟಾ ಕಂಪನಿಯು 2015ರಲ್ಲಿ 30 ಲಕ್ಷ ಮತ್ತು 2020ರ ಕೊನೆಯಲ್ಲಿ 40 ಲಕ್ಷ ಕಾರುಗಳ ನಿರ್ಮಾಣವನ್ನು ಪೂರ್ಣಗೊಳಿಸಿದ್ದು, ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Tata Motors completes production milestone of 40 lakh passenger cars. Read in Kannada.
Story first published: Sunday, October 25, 2020, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X