ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಇದಕ್ಕಾಗಿ ತನ್ನ ಜನಪ್ರಿಯ ಮಾದರಿಗಳನ್ನು ಅಪ್ಡೆಡ್ ಮಾಡಿ ಪರಿಚಯಿಸುವುದರ ಜೊತೆಗೆ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಈ ವರ್ಷ ಫೇಸ್‌ಲಿಫ್ಟೆಡ್ ಟಿಯಾಗೊ, ಟೀಗೊರ್ ಮತ್ತು ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಮತ್ತು ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಜೊತೆಗೆ ನವೀಕರಿಸಿದ ಹ್ಯಾರಿಯರ್ ಅನ್ನು ಸಹ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಫೇಸ್‌ಲಿಫ್ಟ್‌ಗಳು ಮತ್ತು ಹೊಸ ಮಾದರಿಗಳು ಕಳೆದ ನಾಲ್ಕು ತಿಂಗಳುಗಳಲ್ಲಿ ಗಮನಾರ್ಹವಾದ ಮಾರಾಟವನ್ನು ದಾಖಲಿಸುವಲ್ಲಿ ಸಹಾಯ ಮಾಡಿವೆ.

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರದ ಕಾರು ಉತ್ಪಾದಕರ ಸ್ಥಾನಗಳಲ್ಲಿ ಮೂರನೇ ಸ್ಥಾನವನ್ನು ಟಾಟಾ ಮೋಟಾರ್ಸ್ ಪಡೆದುಕೊಂಡಿದೆ. ಟಾಟಾ ಕಾರುಗಳ ಮಾರಾಟದಲ್ಲಿ ಉತ್ತಮ ಚೇತರಿಕೆಯನ್ನು ಕಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಳೆದ ತಿಂಗಳು ವಾರ್ಷಿಕ ಮಾರಾಟದಲ್ಲಿ ಶೇ.108 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಅಲ್ಲದೇ ಟಾಟಾ ಸ್ವದೇಶಿ ಬ್ರ್ಯಾಂಡ್ ಆಗಿರುವುದು ಕೂಡ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಮುಂದಿನ ವರ್ಷದ ಪೆಬ್ರವರಿಯಲ್ಲಿ 7-ಸೀಟರ್ ಗ್ರಾವಿಟಾಸ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಗ್ರಾವಿಟಾಸ್ ಎಸ್‍ಯುವಿಯನ್ನು ಫೆಬ್ರವರಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದರು.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಈ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿಯ ಉತ್ಪಾದನೆಯು ಮುಂದಿನ ತಿಂಗಳು ಪ್ರಾರಂಭವಾಗಲಿದೆ. ಈ ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಎಂಜಿ ಹೆಕ್ಟರ್ ಪ್ಲಸ್, ಬಿಡುಗಡೆಯಾಗಲಿರುವ ಜೀಪ್ ಕಂಪಾಸ್ 7 ಸೀಟರ್ ಮತ್ತು ಹ್ಯುಂಡೈ ಕ್ರೆಟಾ 7 ಸೀಟರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಗ್ರಾವಿಟಾಸ್ ಎಸ್‍ಯುವಿಯನ್ನು ತನ್ನದೇ ಸರಣಿಯ ಹ್ಯಾರಿಯರ್ ಎಸ್‍ಯುವಿಗೆ ಹೋಲಿಸಿದರೆ ಹಲವರು ಬದಲಾವಣೆಗಳನ್ನು ಹೊಂದಿದೆ. ಟಾಟಾ ಗ್ರಾವಿಟಾಸ್ ಮೂರು ಸಾಲಿನ ಸೀಟುಗಳ ವಿನ್ಯಾಸದಲ್ಲಿ 7 ಸಿಟುಗಳು ಅಥವಾ 6 ಸೀಟುಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಗ್ರಾವಿಟಾಸ್ ಎಸ್‍ಯುವಿಯು ಹ್ಯಾರಿಯರ್ ಮಾದರಿಯಂತೆ ಎಕ್ಸ್ಇ, ಎಕ್ಸ್ಎಂ, ಎಕ್ಸ್ ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಬಹುದು. ಈ ಎಸ್‍ಯುವಿಯಲ್ಲಿ 16-ಇಂಚಿನ ಅಲಾಯ್ ವ್ಹೀಲ್ಸ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವಿಭಿನ್ನವಾದ ಬೂಟ್ ಲಿಡ್ ಮತ್ತು ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಹೊಸ ಟಾಟಾ ಗ್ರಾವಿಟಾಸ್ ಎಸ್‍ಯುವಿಯಲ್ಲಿ ಫಿಯೆಟ್ ಮೂಲದ ಅದೇ 2.0-ಲೀಟರ್ ಕ್ರೈಟೆಕ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಗ್ರಾವಿಟಾಸ್ ಎಸ್‍ಯುವಿಯನ್ನು ಹೊರತುಪಡಿಸಿ, ಟಾಟಾ ಇನ್ನೂ ಎರಡು ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಶೀಘ್ರದಲ್ಲೇ ಟಾಟಾ ಕಂಪನಿಯು ಟಾಟಾ ಆಲ್‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯ ಮತ್ತು ಹೆಚ್‌ಬಿಎಕ್ಸ್ ಮಿನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಟಾಟಾ ಹೆಚ್‍ಬಿಎಕ್ಸ್ ಮೈಕ್ರೊ ಎಸ್‍‍ಯುವಿಯಲ್ಲಿ ಟಿಯಾಗೋ ಮಾದರಿಯಲ್ಲಿರುವ 1.2 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು.

ತಿಂಗಳಿಗೆ 40,000 ಕಾರು ಮಾರಾಟ ಮಾಡುವ ಗುರಿ ಹೊಂದಿರುವ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಗ್ರಾವಿಟಾಸ್ ಮತ್ತು ಹೆಚ್‌ಬಿಎಕ್ಸ್ ಬಿಡುಗಡೆಯೊಂದಿಗೆ ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವ ಗುರಿ ಹೊಂದಿದೆ. ಮುಂದಿನ ಹಣಕಾಸು ವರ್ಷದಲ್ಲಿ (ಏಪ್ರಿಲ್ 2021 ರಿಂದ ಮಾರ್ಚ್ 2022 ರವರೆಗೆ), ಇದು ಮಾಸಿಕ 40,000 ಯುನಿಟ್‌ಗಳ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

Most Read Articles

Kannada
English summary
Tata Eyeing 40,000 Monthly Car Sales With Hornbill & Gravitas Launch. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X