ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಟಾಟಾ ಮೋಟಾರ್ಸ್

ದೇಶದಲ್ಲಿ ಲಾಕ್‌ಡೌನ್ ಆಗಿರುವುದು, ಕಾರು ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ, ಈ ಕಾರಣಕ್ಕೆ, ಟಾಟಾ ಮೋಟಾರ್ಸ್ ಆನ್‌ಲೈನ್ ಕಾರು ಮಾರಾಟವನ್ನು ಆರಂಭಿಸಿದೆ. ಇದರಿಂದ ಗ್ರಾಹಕರು ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳನ್ನು ದೇಶದ ಯಾವ ಮೂಲೆಯಿಂದಾದರೂ ಖರೀದಿಸಬಹುದು.

ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕ್ಲಿಕ್ ಟು ಡ್ರೈವ್ ಎಂಬ ಹೊಸ ಆನ್‌ಲೈನ್ ಮಾರಾಟ ಯೋಜನೆಯನ್ನು ಆರಂಭಿಸಿದೆ. ಇದರಿಂದಾಗಿ ಕಂಪನಿಯ 750ಕ್ಕೂ ಹೆಚ್ಚು ಡೀಲರ್‌ಗಳಿಂದ ಕಾರುಗಳನ್ನು ಖರೀದಿಸಬಹುದು. ಮನೆಯಲ್ಲಿ ಕುಳಿತುಕೊಂಡೇ ಕಾರು ಖರೀದಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ.

ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಟಾಟಾ ಮೋಟಾರ್ಸ್

ಕಂಪನಿಯು ಕಾರು ಮಾರಾಟವಾದ ಕೂಡಲೇ ಹೋಮ್ ಡೆಲಿವರಿಯನ್ನು ನೀಡಲಿದೆ. ಕಾರನ್ನು ಖರೀದಿಸಲು, ಗ್ರಾಹಕರು ಕ್ಲಿಕ್ ಟು ಡ್ರೈವ್‌ನಲ್ಲಿ ನೋಂದಾಯಿಸಿಕೊಳ್ಳಬೇಕು, ನಂತರ ಅವರು ತಮ್ಮ ಆಯ್ಕೆಯ ಕಾರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಟಾಟಾ ಮೋಟಾರ್ಸ್

ಇದರ ಜೊತೆಗೆ ಗ್ರಾಹಕರು ಪ್ರತಿಯೊಂದು ಟಾಟಾ ಕಾರಿನ ವೀಡಿಯೊ ಬ್ರೌಷರ್ ಸಹ ವೀಕ್ಷಿಸಬಹುದು. ಇದರಿಂದ ಕಾರಿನ ಬಗ್ಗೆ ಹೆಚ್ಕು ತಿಳಿದುಕೊಳ್ಳಬಹುದಾಗಿದೆ. ಕಾರನ್ನು ಆಯ್ಕೆ ಮಾಡಿದ ನಂತರ, ಗ್ರಾಹಕರು ತಮ್ಮ ಇಷ್ಟದ ಡೀಲರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಟಾಟಾ ಮೋಟಾರ್ಸ್

ಗ್ರಾಹಕರು, ಹೋಮ್ ಡೆಲಿವರಿ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಡೀಲರ್‌ಗಳ ಬಳಿ ನೇರವಾಗಿ ತೆಗೆದುಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾರ್ ಬುಕ್ಕಿಂಗ್ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು. ಪಾವತಿಸಿದ ನಂತರ ಕಂಪನಿಯು ಗ್ರಾಹಕರಿಗೆ ದೃಢಿಕರಣದ ಇ-ಮೇಲ್ ಕಳುಹಿಸುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಟಾಟಾ ಮೋಟಾರ್ಸ್

ಈ ಪ್ರಕ್ರಿಯೆಗಳ ನಂತರ ಟಾಟಾ ಮೋಟಾರ್ಸ್ ಸೇಲ್ಸ್ ಟೀಂ ಹಾಗೂ ಡೀಲರ್‌ಗಳು ಮುಂದಿನ ಪ್ರಕ್ರಿಯೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಾರೆ. ಇವುಗಳ ಜೊತೆಗೆ ಫೈನಾನ್ಸ್ ಹಾಗೂ ಎಕ್ಸ್‌ಚೇಂಜ್ ಸೇವೆಯನ್ನೂ ಪಡೆಯಬಹುದು.

ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಟಾಟಾ ಮೋಟಾರ್ಸ್

ಈ ಸಂಪೂರ್ಣ ಪ್ರಕ್ರಿಯೆಯನ್ನು ಇ-ಮೇಲ್, ವಾಟ್ಸಾಪ್ ಹಾಗೂ ವೀಡಿಯೊ ಕಾಲ್ ಮೂಲಕ ಮಾಡಬಹುದು. ಇದಕ್ಕಾಗಿ ಯಾವುದೇ ವ್ಯಕ್ತಿಯನ್ನು ಭೇಟಿ ಮಾಡುವ ಅವಶ್ಯಕತೆಯಿಲ್ಲ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಆನ್‌ಲೈನ್ ಕಾರು ಮಾರಾಟ ಆರಂಭಿಸಿದ ಟಾಟಾ ಮೋಟಾರ್ಸ್

ಅಲ್ಟ್ರೋಜ್‌ ಕಾರಿಗಾಗಿ ಟಾಟಾ ಮೋಟಾರ್ಸ್, ಆನ್‌ಲೈನ್ ಕಾನ್ಫಿಗರೇಟರ್ ಅನ್ನು ಸಹ ಒದಗಿಸಿದೆ. ಇದರಿಂದಾಗಿ ಗ್ರಾಹಕರು ತಾವು ಖರೀದಿಸುವ ಕಾರಿನ ಮಾದರಿ, ಬಣ್ಣ ಹಾಗೂ ಇತರ ಆಯ್ಕೆಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.

Article Published On: Monday, April 13, 2020, 18:08 [IST]
English summary
Tata Motors introduces online car sales. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+