ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕರೋನಾ ವೈರಸ್ ಎಂಬ ಮಾರಣಾಂತಿಕ ವೈರಸ್ ವಿಶ್ವದ್ಯಾಂತ ದೊಡ್ಡ ಅನಾಹುತವನ್ನು ಸೃಷ್ಟಿಸಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದರೂ, ಜನರು ಭಯಭೀತರಾಗಿರುವುದು ಸ್ಪಷ್ಟ.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕರೋನಾ ವೈರಸ್ ಹೊಂದಿರುವ ಹೆಚ್ಚಿನ ಜನರು ನಮಗೆ ಸೋಂಕು ಇದೆ ಎಂದು ತಿಳಿಯದೆ ಇತರರಿಗೆ ಸೋಂಕು ಹರಡುತ್ತಿದ್ದಾರೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಈ ವೈರಸ್ ಬೇರೆಯವರಿಗೆ ಹರಡುತ್ತದೆ. ಕರೋನಾ ವೈರಸ್ ನಿಂದ ಬರುವ ಕಾಯಿಲೆಗೆ ಯಾವುದೇ ಔಷಧಿಯಿಲ್ಲ. ಈ ರೋಗ ಬರದಂತೆ ತಡೆಯುವುದೊಂದೇ ಇದಕ್ಕಿರುವ ಮದ್ದು.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕರೋನಾ ವೈರಸ್ ಹರಡುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚಿನ ಜನಸಂಖ್ಯೆ ಇರುವ ದೇಶಗಳಲ್ಲಿ ಮಾತ್ರವಲ್ಲದೆ ಜನಸಂಖ್ಯೆ ಕಡಿಮೆ ಇರುವ ಇಟಲಿಯಂತಹ ದೇಶಗಳಲ್ಲೂ ಭಾರಿ ಪರಿಣಾಮ ಬೀರುತ್ತಿದೆ. ಈ ಮಹಾಮಾರಿ ವೈರಸ್ ನಿಂದ ಜನರನ್ನು ಕಾಪಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಆಯಾ ರಾಜ್ಯ ಸರ್ಕಾರಗಳೂ ಕೈಜೋಡಿಸಿವೆ.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಈಗ ದೇಶವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ದೇಶೀಯ ಹಾಗೂ ಅಂತರ್ ರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ. ಇದರ ಜೊತೆಗೆ ಎಲ್ಲಾ ಸಾರಿಗೆ ಸೌಲಭ್ಯಗಳನ್ನು ಸಹ ರದ್ದುಪಡಿಸಲಾಗಿದೆ.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡರೆ ಕರೋನಾ ವೈರಸ್ ಹರಡದಂತೆ ತಡೆಯಬಹುದು ಎಂಬ ಕಾರಣಕ್ಕೆ ಏಪ್ರಿಲ್ 14ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಎಲ್ಲಾ ಬಂದ್ ಆಗಿದ್ದರೂ ಜನರು ಹೊರಗೆ ತಿರುಗಾಡುವುದನ್ನು ಕಡಿಮೆ ಮಾಡಿಲ್ಲ.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಈ ರೀತಿ ಹೊರಗೆ ತಿರುಗಾಡುತ್ತಿದ್ದ ಜನರಿಗೆ ನಿನ್ನೆ ಒಂದು ಅಚ್ಚರಿ ಎದುರಾಗಿತ್ತು. ಅಂದ ಹಾಗೆ ಈ ಘಟನೆ ನಡೆದಿರುವುದು ಚೆನ್ನೈನ ಅನ್ನಾ ರಸ್ತೆಯಲ್ಲಿ. ಸಾಮಾನ್ಯವಾಗಿ ಈ ರಸ್ತೆಯಲ್ಲಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕರೋನಾ ವೈರಸ್ ನಿಂದಾಗಿ ವಾಹನಗಳು ಹೆಚ್ಚಾಗಿ ಓಡಾಡುತ್ತಿಲ್ಲ. ಆದರೆ ಕೆಲವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸುತ್ತಾಡುತ್ತಲೇ ಇದ್ದಾರೆ. ಚೆನ್ನೈನ ಸ್ಪೆನ್ಸರ್ ಪ್ಲಾಜಾ ಸಿಗ್ನಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸರು ಕರೋನಾ ವೈರಸ್ ನ ಗಂಭೀರತೆಯನ್ನು ಅರಿತುಕೊಳ್ಳದೆ ಜನರು ಸುತ್ತಾಡುತ್ತಿರುವುದನ್ನು ನೋಡಿ ಗಾಬರಿಯಾಗಿದ್ದಾರೆ.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕೆಲವು ವಾಹನ ಸವಾರರ ಬಳಿ ತೆರಳಿದ ಸಂಚಾರಿ ಪೊಲೀಸರು ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ವಿಶ್ವದ ಹಲವು ದೇಶಗಳಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಕರೋನಾ ವೈರಸ್ ನಿಂದ ತೊಂದರೆಯಾದರೆ ಹೆಚ್ಚು ಸಾವು ನೋವುಗಳಾಗುತ್ತವೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ದಯವಿಟ್ಟು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಕಾಲಿಗೆ ಬೀಳುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ತಪ್ಪಿನ ಅರಿವಾದ ನಂತರ ಅಲ್ಲಿದ್ದ ವಾಹನ ಸವಾರನೊಬ್ಬ ಪೊಲೀಸರ ಕಾಲಿಗೆ ಬಿದ್ದಿದ್ದಾನೆ.

ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಈ ವೀಡಿಯೋ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಹಾಗೂ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ. ಟ್ರಾಫಿಕ್ ಪೊಲೀಸರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

More from DriveSpark

Article Published On: Thursday, March 26, 2020, 10:37 [IST]
English summary
Traffic police requesting public to stay at home. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+