ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ವಿಶ್ವಾದ್ಯಂತ ಪರಿಸರಕ್ಕೆ ಪೂರಕವಾದ ವಾಹನಗಳ ಮಾರಾಟವನ್ನು ಉತ್ತೇಜಿಸುವ ಸಂಬಂಧ ಆಚರಿಸಲಾಗುತ್ತಿರುವ 'ವರ್ಲ್ಡ್ ಇವಿ ಡೇ'ಗೆ ಟಾಟಾ ಮೋಟಾರ್ಸ್ ಕಂಪನಿಯು ಬೆಂಬಲ ವ್ಯಕ್ತಪಡಿಸಿರುವುದಲ್ಲದೆ ವರ್ಲ್ಡ್ ಇವಿ ಡೇ ಆಚರಣೆಯಲ್ಲಿ ಭಾಗಿಯಾಗುತ್ತಿರುವುದಾಗಿ ದೃಡಪಡಿಸಿದೆ.

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಸೆಪ್ಟೆಂಬರ್ 9ರಂದು ವರ್ಲ್ಡ್ ಇವಿ ಡೇ ಆಚರಣೆ ಮಾಡುತ್ತಿರುವುದಾಗಿ ಘೋಷಣೆ ಮಾಡಲಾಗಿದ್ದು, ಇದು ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮತ್ತು ಮಾರಾಟಕ್ಕೆ ಹೊಸ ನಾಂದಿಯಾಗಲಿದೆ. 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಬಳಕೆಗೆ ಸಿದ್ದವಾಗುತ್ತಿದ್ದು, ಈಗಾಗಲೇ ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳೊಂದಿಗೆ ಇವಿ ವಾಹನಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಇದೀಗ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯ ಉದ್ದೇಶಗಳನ್ನು ಗ್ರಾಹಕರಿಗೆ ತಿಳಿಹೇಳಲು ವರ್ಲ್ಡ್ ಇವಿ ಡೇ ಆಚರಿಸಲು ಸಿದ್ದತೆ ನಡೆಸಲಾಗುತ್ತಿದ್ದು, ಸ್ವೀಡಿಷ್ ಮೂಲದ ಎಬಿಬಿ, ಗ್ರೀನ್ ಟಿವಿ ಜೊತೆಗೂಡಿ ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ಹೊಸ ಅಭಿಯಾನದಲ್ಲಿ ಪಾಲಾದಾರ ಕಂಪನಿಯಾಗಿ ಕೈಜೋಡಿಸಿದೆ.

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ವರ್ಲ್ಡ್ ಇವಿ ಡೇ ಆಚರಣೆಯ ಪಾಲಾದಾರ ಕಂಪನಿಯಾಗಿ ಕೈಜೋಡಿಸಿರುವ ಕುರಿತು ಮಾತನಾಡಿರುವ ಟಾಟಾ ಪ್ರಯಾಣಿಕ ವಾಹನಗಳ ಮಾರಾಟ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಅವರು ಇ-ಮೊಬಿಲಿಟಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಮತ್ತು ಭವಿಷ್ಯದ ದಿನಗಳಿಗಾಗಿ ಸುಸ್ಥಿರ ಅಭಿವೃದ್ದಿಗಾಗಿ ನಡೆಯುತ್ತಿರುವ ಹೊಸ ಆಂದೋಲನದಲ್ಲಿ ಭಾಗಿಯಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಸುಸ್ತಿರ ಅಭಿವೃದ್ದಿಗಾಗಿ ಈಗಾಗಲೇ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ.

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನಗಳ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ತಂತ್ರಜ್ಞಾನ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿದ್ದು, ಇವಿ ವಾಹನಗಳ ಮೇಲೆ ಗರಿಷ್ಠ ಎಂಟು ವರ್ಷಗಳ ವಾರಂಟಿ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ ಎನ್ನಬಹುದು.

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಪ್ರಮುಖ ವೆರಿಯೆಂಟ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.15.99 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರೆಯೆಂಟ್‌ಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಫೀಚರ್ಸ್‌ಗಳಿವೆ.

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಸಾಮಾನ್ಯ ಮಾದರಿಯ ನೆಕ್ಸಾನ್ ಫೇಸ್‍‍ಲಿಫ್ಟ್ ಸ್ಟ್ಯಾಂಡರ್ಡ್ ಕಾರಿನ ಆಧಾರದ ಮೇಲೆ ತಯಾರಿಸಲಾಗಿದ್ದು, ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ 95 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ವರ್ಲ್ಡ್ ಇವಿ ಡೇ: ಹೊಸ ಬದಲಾವಣೆಗೆ ಕೈಜೋಡಿಸಿದ ಟಾಟಾ ಮೋಟಾರ್ಸ್

ಎ‍ಆರ್‌ಎಐ ಪ್ರಮಾಣ ಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದಲ್ಲಿ ಗರಿಷ್ಠ 312 ಕಿ.ಮೀವರೆಗೂ ಚಲಿಸುತ್ತದೆ ಎನ್ನಲಾಗಿದ್ದು, ಆದರೆ ನೈಜ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಕಾರು 250 ಕಿ.ಮೀನಿಂದ- 300ಕಿ.ಮೀವರೆಗೂ ಚಲಿಸುವುವುದು ಫಸ್ಟ್ ಡ್ರೈವ್‌ ಟೆಸ್ಟಿಂಗ್‌ನಲ್ಲಿ ಸಾಬೀತಾಗಿದೆ.

Most Read Articles

Kannada
English summary
Tata Motors Joins World EV Day Celebrations: To Be Inaugurated On September 9. Read in Kannada.
Story first published: Monday, September 7, 2020, 21:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X