ಭವಿಷ್ಯದ ಅಗತ್ಯತೆಗಾಗಿ ಹೊಸ ಕಮರ್ಷಿಯಲ್ ವಾಹನಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಮರ್ಷಿಯಲ್ ಸರಣಿಯ ವಾಹನಗಳನ್ನು ಬಿಡುಗಡೆಗೊಳಿಸಿದೆ. ಈ ವಾಹನಗಳು ಹಲವಾರು ಫೀಚರ್ ಗಳನ್ನು ಹೊಂದಿವೆ. ಇವುಗಳಲ್ಲಿ 1 ಟನ್ ನಿಂದ 55 ಟನ್ ಸಾಮರ್ಥ್ಯದವರೆಗಿನ ಕಮರ್ಷಿಯಲ್ ವಾಹನಗಳು ಸೇರಿವೆ.

ಭವಿಷ್ಯದ ಅಗತ್ಯತೆಗಾಗಿ ಹೊಸ ಕಮರ್ಷಿಯಲ್ ವಾಹನಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಈ ಎಲ್ಲಾ ವಾಹನಗಳನ್ನು ಹೊಸ ಎಂಜಿನ್ ಹಾಗೂ ಸಾಮರ್ಥ್ಯಗಳೊಂದಿಗೆ ಸಜ್ಜುಗೊಳಿಸಿದೆ. ಹೊಸ ಸರಣಿಯ ಕಮರ್ಷಿಯಲ್ ವಾಹನಗಳಲ್ಲಿ ವಾಹನಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ಸರಣಿಯ ಪಿಕಪ್ ಟ್ರಕ್‌ಗಳು ಹಾಗೂ ದೊಡ್ಡ ವಾಹನಗಳು ಈಗ ಮೊದಲಿಗಿಂತ ಹೆಚ್ಚಿನ ಮೈಲೇಜ್ ಹಾಗೂ ಸೌಲಭ್ಯವನ್ನು ಒದಗಿಸುತ್ತವೆ. ಇದರ ಜೊತೆಗೆ ಈ ವಾಹನಗಳಲ್ಲಿ ಕನೆಕ್ಟೆಡ್ ಫೀಚರ್ ಗಳನ್ನು ಸಹ ಒದಗಿಸಲಾಗಿದ್ದು, ಇವುಗಳು ಚಾಲಕರಿಗೆ ವಾಹನಗಳ ಮೇಲೆ ಹೆಚ್ಚು ನಿಯಂತ್ರಣವನ್ನು ನೀಡುತ್ತವೆ.

ಭವಿಷ್ಯದ ಅಗತ್ಯತೆಗಾಗಿ ಹೊಸ ಕಮರ್ಷಿಯಲ್ ವಾಹನಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಹೊಸ ವಾಹನಗಳ ಬಳಕೆಯು ಇನ್ನು ಮುಂದೆ ಹೆಚ್ಚಾಗಲಿದೆ ಎಂಬುದು ಟಾಟಾ ಕಂಪನಿಯ ನಂಬಿಕೆಯಾಗಿದೆ. ಈ ವಾಹನಗಳು ಮೊದಲಿಗಿಂತ ಹೆಚ್ಚಿನ ಕನೆಕ್ಟಿವಿಟಿ ಹಾಗೂ ಪರ್ಫಾಮೆನ್ಸ್ ಹೊಂದಿವೆ. ಹೊಸ ವಾಹನಗಳು ಸುಲಭವಾದ ಗೇರ್‌ಶಿಫ್ಟ್, ಮಲ್ಟಿಪಲ್ ಡ್ರೈವಿಂಗ್ ಮೋಡ್ ಹಾಗೂ ಪವರ್ ಉತ್ಪಾದನೆಯೊಂದಿಗೆ ಹೆಚ್ಚಿನ ಸುರಕ್ಷತೆಯನ್ನು ಹೊಂದಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಭವಿಷ್ಯದ ಅಗತ್ಯತೆಗಾಗಿ ಹೊಸ ಕಮರ್ಷಿಯಲ್ ವಾಹನಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಹೊಸ ವಾಹನಗಳನ್ನು ಡ್ರೈವರ್ ಕ್ಯಾಬಿನ್‌ಗಳ ದೃಢತೆಯನ್ನು ಪರೀಕ್ಷಿಸಲು ಕ್ರ್ಯಾಶ್ ಟೆಸ್ಟ್ ಗಳಿಗೆ ಒಳಪಡಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಭಾರತದ ಆಟೋಮೊಬೈಲ್ ಉದ್ಯಮವು ಹೊಸ ಮಾಲಿನ್ಯ ನಿಯಮಗಳನ್ನು ಅನುಸರಿಸುತ್ತಿದೆ. ಈ ಸವಾಲನ್ನು ಒಂದು ಅವಕಾಶವಾಗಿ ನೋಡಿ, ವಾಹನಗಳನ್ನು ಸುಧಾರಿಸಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಭವಿಷ್ಯದ ಅಗತ್ಯತೆಗಾಗಿ ಹೊಸ ಕಮರ್ಷಿಯಲ್ ವಾಹನಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಜಾಗತಿಕ ಮಾನದಂಡಗಳಿಗೆ ಅನುಸಾರವಾಗಿ ವಾಹನಗಳನ್ನು ತಯಾರಿಸಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್ ಕಂಪನಿ ಹೇಳಿದೆ. ನಮ್ಮ ಕಂಪನಿಯ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ದೊಡ್ಡ ದೊಡ್ಡ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡುತ್ತಿವೆ. ನಾವು ಉನ್ನತ ಹಾಗೂ ಜಾಗತಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಾಹನಗಳನ್ನು ತಯಾರಿಸುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಭವಿಷ್ಯದ ಅಗತ್ಯತೆಗಾಗಿ ಹೊಸ ಕಮರ್ಷಿಯಲ್ ವಾಹನಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಟಾಟಾದ ಹೊಸ ಕಮರ್ಷಿಯಲ್ ವಾಹನಗಳ ಸರಣಿಯು ಮೂರು ವರ್ಗದ ವಾಹನಗಳನ್ನು ಒಳಗೊಂಡಿದೆ. ಇವುಗಳಲ್ಲಿ ಟಾಟಾ ಏಸ್, ಇಂಟ್ರಾ ಹಾಗೂ ವಾರಿಯರ್ ವಾಹನಗಳು 750-1200 ಕೆ.ಜಿ ಸಾಮರ್ಥ್ಯವನ್ನು ಹೊಂದಿವೆ. ಮಧ್ಯಮ ಸರಣಿಯ ಕಮರ್ಷಿಯಲ್ ವಾಹನಗಳಲ್ಲಿ ಟಾಟಾದ ಪಿಕಪ್ ಟ್ರಕ್‌ಗಳು ಸೇರಿವೆ. ಹೆವಿ ವೆಹಿಕಲ್ ವಿಭಾಗದಲ್ಲಿ ಹೊಸ ಶಕ್ತಿಯುತ ಟ್ರಕ್‌ಗಳು ಸೇರಿವೆ.

ಭವಿಷ್ಯದ ಅಗತ್ಯತೆಗಾಗಿ ಹೊಸ ಕಮರ್ಷಿಯಲ್ ವಾಹನಗಳನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಪ್ರಯಾಣಿಕರ ಕಮರ್ಷಿಯಲ್ ವಾಹನಗಳಲ್ಲಿ ಹಲವಾರು ಹೊಸ ಫೀಚರ್ ಹಾಗೂ ಸುರಕ್ಷತಾ ಸಾಧನಗಳನ್ನು ಹೊಂದಿರುವ ಹೊಸ ಪ್ಲಾಟ್‌ಫಾರಂ ಆಧಾರಿತ ಬಸ್‌ಗಳು ಸೇರಿವೆ. ಈ ಬಸ್‌ಗಳಲ್ಲಿ ಕಣ್ಗಾವಲು ಕ್ಯಾಮೆರಾ, ಜಿಪಿಎಸ್ ಟ್ರ್ಯಾಕರ್‌ ಹಾಗೂ ಆರ್‌ಎಫ್‌ಡಿಐ ಆಧಾರಿತ ರಿಜಿಸ್ಟ್ರೇಷನ್ ಸಿಸ್ಟಂಗಳನ್ನು ನೀಡಲಾಗಿದೆ.

Most Read Articles

Kannada
English summary
Tata motors launches new range of commercial vehicles. Read in Kannada.
Story first published: Friday, August 28, 2020, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X