ಕಾರುಗಳ ಸ್ಯಾನಿಟೈಜ್ ಗಾಗಿ ಹೊಸ ಅಭಿಯಾನವನ್ನು ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ತನ್ನ ಕಾರುಗಳ ಮಾರಾಟದ ಜೊತೆಗೆ ಸ್ಯಾನಿಟೈಸ್ಡ್ ಬೈ ಟಾಟಾ ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ, ಕಂಪನಿಯು ಪ್ರತಿಯೊಂದು ಹೊಸ ಕಾರನ್ನು ಸ್ವಚ್ವಗೊಳಿಸುತ್ತದೆ.

ಕಾರುಗಳ ಸ್ಯಾನಿಟೈಜ್ ಗಾಗಿ ಹೊಸ ಅಭಿಯಾನವನ್ನು ಆರಂಭಿಸಿದ ಟಾಟಾ ಮೋಟಾರ್ಸ್

ಈ ಮೂಲಕ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಕರೋನಾ ಸೋಂಕು ಹರಡದಂತೆ ನೋಡಿಕೊಳ್ಳಲಿದೆ. ಟಾಟಾ ಶೋರೂಂನಲ್ಲಿ ಪ್ರತಿ ವಾಹನವನ್ನು ಸ್ವಚ್ವಗೊಳಿಸಲಾಗುತ್ತದೆ. ಕಾರನ್ನು ಸ್ವಚ್ವಗೊಳಿಸಿದ ನಂತರ ಆ ಕಾರುಗಳಲ್ಲಿ ಸ್ಯಾನಿಟೈಸ್ಡ್ ಬೈ ಟಾಟಾ ಎಂಬ ಸ್ಟಿಕ್ಕರ್ ಅನ್ನು ಅಂಟಿಸಲಾಗುತ್ತದೆ. ಇದರ ಜೊತೆಗೆ ಕಾರುಗಳ ವಿತರಣೆ ಮಾಡುವಾಗ ಕಾರುಗಳ ಕೀಗಳನ್ನು ಸ್ವಚ್ವಗೊಳಿಸಿದ ಬಾಕ್ಸ್ ನೊಳಗಿಟ್ಟು ನೀಡಲಾಗುತ್ತದೆ.

ಕಾರುಗಳ ಸ್ಯಾನಿಟೈಜ್ ಗಾಗಿ ಹೊಸ ಅಭಿಯಾನವನ್ನು ಆರಂಭಿಸಿದ ಟಾಟಾ ಮೋಟಾರ್ಸ್

ಇತ್ತೀಚೆಗಷ್ಟೇ ಟಾಟಾ ಮೋಟಾರ್ಸ್ ತನ್ನ ಟಿಯಾಗೊ, ಟಿಗೋರ್, ಆಲ್ಟ್ರೋಜ್ ಹಾಗೂ ನೆಕ್ಸಾನ್ ಕಾರುಗಳ ಬೆಲೆಯನ್ನು ಪರಿಷ್ಕರಿಸಿದೆ. ಮಾಹಿತಿಗಳ ಪ್ರಕಾರ, ಟಾಟಾ ಟಿಗೋರ್ ಕಾರಿನ ಬೆಲೆಯನ್ನು ಕಡಿಮೆಗೊಳಿಸಲಾಗಿದ್ದರೆ, ಟಿಯಾಗೊ ಕಾರಿನ ಬೆಲೆಯನ್ನು ಹೆಚ್ಚಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರುಗಳ ಸ್ಯಾನಿಟೈಜ್ ಗಾಗಿ ಹೊಸ ಅಭಿಯಾನವನ್ನು ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಟಿಯಾಗೊ ಕಾರಿನ ಬೆಲೆಯನ್ನು ರೂ.9,000ದಿಂದ ರೂ.13,000ಗಳವರೆಗೆ ಹೆಚ್ಚಿಸಲಾಗಿದ್ದರೆ, ಟಿಗೋರ್ ಸೆಡಾನ್ ಕಾರಿನ ಬೆಲೆಯನ್ನು ರೂ.10,000ದಿಂದ ರೂ.36,000ಗಳವರೆಗೆ ಕಡಿಮೆ ಮಾಡಲಾಗಿದೆ. ಟಾಟಾ ಟಿಯಾಗೊ ಟಾಟಾ ಮೋಟಾರ್ಸ್ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ.

ಕಾರುಗಳ ಸ್ಯಾನಿಟೈಜ್ ಗಾಗಿ ಹೊಸ ಅಭಿಯಾನವನ್ನು ಆರಂಭಿಸಿದ ಟಾಟಾ ಮೋಟಾರ್ಸ್

ಇನ್ನು ಟಾಟಾ ಮೋಟಾರ್ಸ್ ನ ಮಾರಾಟದ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಈ ವರ್ಷದ ಜುಲೈ ತಿಂಗಳಿನಲ್ಲಿ 5,337 ಯುನಿಟ್ ಟಿಯಾಗೊ ಕಾರುಗಳನ್ನು ಮಾರಾಟ ಮಾಡಿದೆ, 2019ರ ಜುಲೈ ತಿಂಗಳಿನಲ್ಲಿ 4,689 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಈ ವರ್ಷದ ಜೂನ್ ತಿಂಗಳಿನಲ್ಲಿ 4,000 ಯುನಿಟ್ ಗೂ ಹೆಚ್ಚು ಟಿಯಾಗೊ ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಟಾಟಾ ಟಿಯಾಗೊ ಕಾರ್ ಅನ್ನು ಸದ್ಯಕ್ಕೆ ಬಿಎಸ್ 6 ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಟಾಟಾ ಟಿಯಾಗೊ ಕಾರಿನ ಮೂಲ ಮಾದರಿಯಾದ ಎಕ್ಸ್‌ಇ ಬೆಲೆಯನ್ನು ರೂ.9,000ಗಳಷ್ಟು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ ಟಿಯಾಗೊ ಎಕ್ಸ್‌ಇ ಬಿಎಸ್ 6 ಕಾರಿನ ಬೆಲೆ ರೂ.4.60 ಲಕ್ಷಗಳಿಂದ 4.68 ಲಕ್ಷಗಳಾಗಿದೆ.

ಕಾರುಗಳ ಸ್ಯಾನಿಟೈಜ್ ಗಾಗಿ ಹೊಸ ಅಭಿಯಾನವನ್ನು ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಆಲ್ಟ್ರೋಜ್ ಕಾರಿನ ಬೆಲೆಯನ್ನು ರೂ.3,000ಗಳಿಂದ ರೂ.54,000ಗಳವರೆಗೆ ಹೆಚ್ಚಿಸಲಾಗಿದೆ. ಆಲ್ಟ್ರೋಜ್ ಕಾರಿನ ಎಕ್ಸ್‌ಟಿ ಲಕ್ಸ್ ಡೀಸೆಲ್ ಮಾದರಿಯ ಬೆಲೆಯನ್ನು ರೂ.54,000ಗಳವರೆಗೆ ಏರಿಸಲಾಗಿದ್ದರೆ, ಎಕ್ಸ್‌ಇ ರಿದಮ್ ಮಾದರಿಯ ಬೆಲೆಯನ್ನು ರೂ.16,000ಗಳವರೆಗೆ ಹೆಚ್ಚಿಸಲಾಗಿದೆ.

Article Published On: Wednesday, August 12, 2020, 19:02 [IST]
English summary
Tata motors launches new sanitisation campaign. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+