ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ಆರ್ಥಿಕ ಪರಿಸ್ಥಿತಿಗಳ ಆಧಾರ ಮೇಲೆ ಸ್ವಂತ ವಾಹನ ಖರೀದಿಗಿಂತ ಲೀಸ್ ವಾಹನಗಳ ಆಯ್ಕೆಯು ಸಾಕಷ್ಟು ಪ್ರಾಮುಖ್ಯತೆ ಹೊಂದಿದ್ದು, ಟಾಟಾ ಮೋಟಾರ್ಸ್ ಕೂಡಾ ತನ್ನ ಇವಿ ಕಾರು ಮಾದರಿಯಾದ ನೆಕ್ಸಾನ್ ಎಲೆಕ್ಟ್ರಿಕ್ ಮಾದರಿಯನ್ನು ಲೀಸ್ ಕಾರುಗಳ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ಕರೋನಾ ವೈರಸ್‌ನಿಂದಾಗಿ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ವಾಹನಗಳ ಲೀಸ್ ಆಯ್ಕೆ ಮೇಲೆ ಹೆಚ್ಚು ಗಮನಹರಿಸಿದ್ದು, ಟಾಟಾ ಮೋಟಾರ್ಸ್ ಸೇರಿದಂತೆ ವಿವಿಧ ಕಾರು ಕಂಪನಿಗಳು ಪ್ರಮುಖ ಕಾರು ಮಾದರಿಗಳ ಮೇಲೆ ಲೀಸ್ ಆಯ್ಕೆಯನ್ನು ಆಫರ್ ನೀಡುತ್ತಿದೆ. ಟಾಟಾ ಮೋಟಾರ್ಸ್ ಕಂಪನಿಯು ಸಹ ದೇಶದ ಪ್ರಮುಖ ನಗರಗಳಲ್ಲಿ ನೆಕ್ಸಾನ್ ಇವಿ ಮಾದರಿಯನ್ನು ಮಾಸಿಕ ದರಗಳಿಗೆ ಅನ್ವಯಿಸುವಂತೆ ಲೀಸ್ ಆಯ್ಕೆ ನೀಡುತ್ತಿದ್ದು, ಸ್ವಂತ ಕಾರು ಖರೀದಿ ಸಾಧ್ಯವಿಲ್ಲದ ಸಂದರ್ಭದಲ್ಲಿ ಗ್ರಾಹಕರು ತಮ್ಮ ಅಗತ್ಯ ಸಂದರ್ಭಕ್ಕೆ ಅನುಗುಣವಾಗಿ ಇಂತಿಷ್ಟು ತಿಂಗಳು ಕಾಲ ಕಾರು ಮಾಲೀಕ್ವವನ್ನು ಹೊಂದಬಹುದಾಗಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ಮುಂಬೈ ಮೂಲದ ಓರಿಕ್ಸ್ ಆಟೋ ಇನ್ಫ್ರಾಸ್ಟ್ರಕ್ಚರ್ ಸರ್ವೀಸ್ ಕಂಪನಿಯ ಜೊತೆಗೂಡಿರುವ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮೇಲೆ ಲೀಸ್ ಆಯ್ಕೆ ನೀಡುತ್ತಿದ್ದು, ವೈರಸ್ ಪರಿಣಾಮ ಸ್ವಂತ ವಾಹನಗಳ ಬಳಕೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಲೀಸ್ ಕಾರುಗಳ ಆಯ್ಕೆ ಹೆಚ್ಚುತ್ತಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ಸ್ವಂತ ವಾಹನ ಖರೀದಿಯ ಬದಲಾಗಿ ಲೀಸ್ ಆಧಾರದ ಮೇಲೆ ಮಾಲೀಕತ್ವ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತ ತುಸು ಭಿನ್ನವಾಗಿರಲಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ಅಗತ್ಯ ಸಂದರ್ಭ ಹೊರತುಪಡಿಸಿ ನಮಗೆ ಕಾರಿನ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ಲೀಸ್ ವಾಹನಗಳನ್ನು ವಾಪಸ್ ನೀಡಬಹುದಾದ ಆಯ್ಕೆಯಿರುತ್ತದೆ. ಆದರೆ ಹೊಸ ವಾಹನ ಖರೀದಿ ನಂತರ ಆರ್ಥಿಕ ಹೊರೆಯಾದರೂ ನೀವು ಅದನ್ನು ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿರುತ್ತದೆ. ಹೀಗಾಗಿ ಲೀಸ್ ಕಾರುಗಳು ಅವಶ್ಯಕ ಸಂದರ್ಭಗಳಲ್ಲಿ ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ಸದ್ಯ ದೇಶದ ಪ್ರಮುಖ ಮಾಹಾನಗರಗಳಲ್ಲಿ ಲೀಸ್ ವಾಹನಗಳ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಕೂಡಾ ಕಳೆದ ಅಗಸ್ಟ್ ತಿಂಗಳಿನಲ್ಲಿಯೇ ನೆಕ್ಸಾನ್ ಇವಿ ಮೇಲೆ ಲೀಸ್ ಆಯ್ಕೆ ನೀಡುತ್ತಿದ್ದು, ಮಾಸಿಕ ದರವನ್ನು ರೂ. 41,900 ನಿಗದಿ ಮಾಡಿತ್ತು. ಆದರೆ ಇದೀಗ ಲೀಸ್ ಆಯ್ಕೆಯನ್ನು ಮತ್ತಷ್ಟು ಸರಳಗೊಳಿಸುವ ಮೂಲಕ ಮಾಸಿಕ ದರವನ್ನು ಆರಂಭಿಕವಾಗಿ ರೂ.29,500 ಬೆಲೆ ನಿಗದಿ ಮಾಡಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ಲೀಸ್ ಆಯ್ಕೆ ಪಡೆಯುವ ಗ್ರಾಹಕರು ಕನಿಷ್ಠ 12 ತಿಂಗಳಿನಿಂದ ಬೇಡಿಕೆ ಅನುಸಾರವಾಗಿ 24 ತಿಂಗಳು ಮತ್ತು 36 ತಿಂಗಳಿಗೆ ಲೀಸ್ ಪಡೆಯಬಹುದಾಗಿದೆ. ಲೀಸ್ ದರವು ಪ್ರತಿ ತಿಂಗಳ ಆಧಾರದ ಮೇಲೆ ನಿಗದಿಯಾಗಲಿದ್ದು, ಲೀಸ್ ಪಡೆಯುವ ಅವಧಿಯು ಕೂಡಾ ಚಂದಾ ದರ ಏರಿಳಿತವಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ರೂ.29,500 ಮಾಸಿಕ ದರವನ್ನು ಸೀಮಿತ ಅವಧಿಗೆ ಘೋಷಣೆ ಮಾಡಿರುವ ಟಾಟಾ ಕಂಪನಿಯು ಶೀಘ್ರದಲ್ಲೇ ಮತ್ತೆ ಬೆಲೆ ಹೆಚ್ಚಳ ಘೋಷಣೆ ಮಾಡಲಿದ್ದು, ಆಫರ್ ಅವಧಿ ಮುಗಿದ ನಂತರ ಮತ್ತೆ ಚಂದಾ ದರವು ವೆರಿಯೆಂಟ್ ಅನುಗುಣವಾಗಿ ರೂ.34,700 ರಿಂದ ಆರಂಭವಾಗಲಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ಚಂದಾ ದರಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ಏರಿಳಿತವಾಗಲಿದ್ದು, ಕನಿಷ್ಠ 12 ತಿಂಗಳ ಲೀಸ್ ಪಡೆದುಕೊಳ್ಳಬೇಕಾಗುತ್ತದೆ. ಮಾಸಿಕ ಚಂದಾ ದರದಲ್ಲೇ ಕಾರಿನ ನೋಂದಣಿ, ರಸ್ತೆ ತೆರಿಗೆ, ನಿರ್ವಹಣಾ ವೆಚ್ಚ, ರೋಡ್ ಸೈಡ್ ಅಸಿಸ್ಟ್ ಸೇರಿದಂತೆ ಫಾಸ್ಟ್ ಚಾರ್ಜಿಂಗ್ ಸೆಟ್ಅಪ್ ವೆಚ್ಚವು ಸಹ ಸೇರ್ಪಡೆಗೊಂಡಿರುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಲೀಸ್ ದರದಲ್ಲಿ ಇಳಿಕೆ ಮಾಡಿದ ಟಾಟಾ ಮೋಟಾರ್ಸ್

ನೆಕ್ಸಾನ್ ಇವಿ ಲೀಸ್ ಕಾರುಗಳ ಸೌಲಭ್ಯವು ಸದ್ಯ ದೆಹಲಿ/ಎನ್‌ಸಿಆರ್, ಮುಂಬೈ, ಪುಣೆ, ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲಿ ಮಾತ್ರ ಲಭ್ಯವಿದ್ದು, ಲೀಸ್ ಕಾರುಗಳ ಆಯ್ಕೆಯು ಪರಿಸ್ಥಿತಿಗೆ ಅನುಗುಣವಾಗಿ ಪಡೆದುಕೊಳ್ಳುವುದು ಆರ್ಥಿಕವಾಗಿ ಉತ್ತಮ ನಿರ್ಧಾರವಾಗಿದೆ.

Most Read Articles

Kannada
English summary
Tata Motors Reduce Subscription Prices For Nexon EV. Read in Kannada.
Story first published: Wednesday, December 9, 2020, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X