ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಕರೋನಾ ವೈರಸ್ ಪರಿಣಾಮ ಕಳೆದ ಕೆಲ ತಿಂಗಳ ಹಿಂದೆ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟ ಪ್ರಮಾಣವು ಇದೇ ಕರೋನಾ ಪರಿಣಾಮವೇ ಭಾರೀ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಳವಾಗಲು ಕಾರಣವಾಗಿದ್ದು, ಟಾಟಾ ಕಾರು ಮಾರಾಟವು ಕಳೆದ ವರ್ಷಕ್ಕಿಂತಲೂ ದುಪ್ಪಟ್ಟು ಹೆಚ್ಚಳವಾಗಿದೆ.

ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಹೌದು, ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳ ಮಾರಾಟ ಪ್ರಮಾಣವು ಈ ವರ್ಷದ ಅಗಸ್ಟ್ ತಿಂಗಳಿನಲ್ಲಿ ಶೇ. 154ರಷ್ಟು ಏರಿಕೆಯಾಗಿದ್ದು, ಅಗಸ್ಟ್ ತಿಂಗಳಿನಲ್ಲಿ ಒಟ್ಟು 18,538 ಯುನಿಟ್ ಮಾರಾಟ ಮಾಡುವ ಮೂಲಕ ಮೂರನೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿ ಹೊರಹೊಮ್ಮಿದೆ. 2019ರ ಅಗಸ್ಟ್ ಅವಧಿಯಲ್ಲಿ ಕೇವಲ 7,316 ಯನಿಟ್ ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ 18,538 ಯುನಿಟ್ ಮಾರಾಟ ಮಾಡಿದೆ.

ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಕರೋನಾ ವೈರಸ್‌ನಿಂದಾಗಿ ಆರಂಭದಲ್ಲಿ ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಕರೋನಾ ವೈರಸ್‌ನಿಂದಾಗಿ ಹೊಸ ವಾಹನಗಳ ಮಾರಾಟದಲ್ಲಿ ಅತ್ಯಧಿಕ ಬೇಡಿಕೆ ಪಡೆದುಕೊಳ್ಳುತ್ತಿದ್ದು, ವೈರಸ್ ಭೀತಿಯಿಂದಾಗಿ ಬಹುತೇಕರು ಸ್ವಂತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿರುವುದು ಈ ಬೆಳವಣಿಗೆ ಪ್ರಮುಖ ಕಾರಣವಾಗಿದೆ.

ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಪರಿಷ್ಕರಣೆ ಮಾಡಿದ್ದು, ಆಲ್‌ಟ್ರೊಜ್ ಮತ್ತು ನೆಕ್ಸಾನ್ ಕಾರುಗಳ ನಂತರ ಟಿಗೋರ್, ಟಿಯಾಗೋ ಕಾರುಗಳ ಬೆಲೆಯಲ್ಲೂ ಪ್ರಮುಖ ಬದಲಾವಣೆ ಮಾಡಿದೆ.

ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಹೊಸದಟ್ಟಿಯಲ್ಲಿ ಟಾಟಾ ಕಂಪನಿಯು ಟಿಗೋರ್ ಕಾರಿನ ಬೆಲೆಯನ್ನು ಕಡಿಮೆ ಮಾಡಿದ್ದಲ್ಲಿ ಟಿಯಾಗೋ ಕಾರಿನ ಬೆಲೆ ಹೆಚ್ಚಳ ಮಾಡಲಾಗಿದ್ದು, ಉತ್ಪಾದನಾ ವೆಚ್ಚಗಳ ಆಧಾರದ ಮೇಲೆ ಹೊಸ ಕಾರುಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡಿದೆ. ಟಾಟಾ ಬಹುತೇಕ ಕಾರುಗಳು ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಬಿಎಸ್-6 ಎಂಜಿನ್ ಜೋಡಣೆ ನಂತರ ಇದು ಎರಡನೇ ಬಾರಿಯ ಬೆಲೆ ಹೆಚ್ಚಳವಾಗಿದೆ.

ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಹೊಸ ದರ ಪಟ್ಟಿಯಲ್ಲಿ ಟಿಯಾಗೋ ಹ್ಯಾಚ್‌ಬ್ಯಾಕ್ ಕಾರು ರೂ.9 ಸಾವಿರದಿಂದ ರೂ.13 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಲ್ಲಿ, ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು ರೂ.10 ಸಾವಿರದಿಂದ ರೂ.36 ಸಾವಿರ ತನಕ ಬೆಲೆ ಕಡಿತ ಮಾಡಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಲಾಕ್‌ಡೌನ್ ನಂತರ ಕಾರು ಉತ್ಪಾದನಾ ವೆಚ್ಚದಲ್ಲಿ ಭಾರೀ ಬದಲಾವಣೆಯಾಗಿದ್ದು, ಬಹುತೇಕ ವಾಹನ ಮಾದರಿಗಳು ಬೆಲೆ ಹೆಚ್ಚಳ ಪಡೆದುಕೊಂಡಿವೆ. ಟಾಟಾ ಮತ್ತು ಮಹೀಂದ್ರಾ ಸೇರಿದಂತೆ ಕೆಲವೇ ಕೆಲವು ಕಾರು ಕಂಪನಿಗಳು ಪ್ರಮುಖ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಪೈಪೋಟಿ ನೀಡುವ ತವಕದಲ್ಲಿವೆ.

ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಟಾಟಾ ಕೂಡಾ ಇದೇ ನಿಟ್ಟಿನಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯಾದ ಟಿಯಾಗೋ ಕಾರಿನ ಬೆಲೆ ಹೆಚ್ಚಳ ಮಾಡುವುದರೊಂದಿಗೆ ಟಿಗೋರ್ ಕಾರಿನ ಬೆಲೆ ಇಳಿಕೆ ಮೂಲಕ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿದಾರರನ್ನು ಸೆಳೆಯಲು ಯತ್ನಿಸಿದ್ದು, ಕರೋನಾ ವೈರಸ್ ಪರಿಣಾಮ ಸಂಪೂರ್ಣವಾಗಿ ನೆಲಕಚ್ಚಿದ್ದ ಕಾರು ಮಾರಾಟವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದು ಆಟೋ ಕಂಪನಿಗಳಿಗೆ ಬಲಬಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕರೋನಾ ಎಫೆಕ್ಟ್: ಟಾಟಾ ಕಾರು ಮಾರಾಟದಲ್ಲಿ ಭಾರೀ ಹೆಚ್ಚಳ

ಹೀಗಾಗಿ ಬೆಲೆ ಪರಿಷ್ಕರಣೆ ಮೂಲಕ ಕಾರು ಮಾರಾಟದಲ್ಲಿ ಪ್ರಮುಖ ಬದಲಾವಣೆಯ ನೀರಿಕ್ಷೆಯಲ್ಲಿರುವ ಆಟೋ ಕಂಪನಿಗಳು ಮುಂಬರುವ ದಿನಗಳಲ್ಲಿ ಕಾರು ಮಾರಾಟವು ಮೂಲಸ್ಥಿತಿಗೆ ಮರಳುವ ವಿಶ್ವಾಸದಲ್ಲಿದ್ದು, ಟಾಟಾ ಕೂಡಾ ಕಳೆದ ಎರಡು ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಕಾರುಗಳ ಮಾರಾಟ ಮಾಡುವ ಮೂಲಕ ಮುಂಚೂಣಿ ಸಾಧಿಸುತ್ತಿದೆ.

Most Read Articles

Kannada
English summary
Tata Motors Posted 18,583 Unit Sales In 2020 August. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X