ಲಾಕ್‌ಡೌನ್ ತೆರವುಗೊಂಡ ನಂತರ ಟಾಟಾ ಮಾರಾಟದಲ್ಲಿ ಭಾರೀ ಏರಿಕೆ

ಲಾಕ್‌ಡೌನ್ ವೇಳೆ ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿದ್ದ ಹೊಸ ವಾಹನ ಮಾರಾಟವು ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ಕಾರು ಮಾರಾಟದಲ್ಲಿ ಇದೀಗ ಭರ್ಜರಿ ಮುನ್ನಡೆ ಕಾಯ್ದಕೊಳ್ಳುತ್ತಿದೆ.

ಲಾಕ್‌ಡೌನ್ ತೆರವುಗೊಂಡ ನಂತರ ಟಾಟಾ ಮಾರಾಟದಲ್ಲಿ ಭಾರೀ ಏರಿಕೆ

ಕಳೆದ ಜೂನ್ ತಿಂಗಳಿನಲ್ಲಿ ಒಟ್ಟು 4,515 ಯುನಿಟ್ ಕಾರು ಮಾರಾಟದೊಂದಿಗೆ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ಟಾಟಾ ಕಂಪನಿಯು ಜುಲೈ ಅವಧಿಯಲ್ಲಿ ಬರೋಬ್ಬರಿ 15 ಸಾವಿರ ಯುನಿಟ್ ಮಾರಾಟ ಮಾಡಿದ್ದು, 2019ರ ಜುಲೈ ಅವಧಿಯಲ್ಲಿನ ಕಾರು ಮಾರಾಟ ಪ್ರಮಾಣಕ್ಕಿಂತಲೂ ಶೇ. 43 ರಷ್ಟು ಹೆಚ್ಚುವರಿ ಬೇಡಿಕೆ ಪಡೆದುಕೊಂಡಿದೆ. 2019ರ ಜುಲೈ ಅವಧಿಯಲ್ಲಿ 10,485 ಯುನಿಟ್ ಮಾರಾಟ ಮಾಡಿದ್ದ ಟಾಟಾ ಕಂಪನಿಯು ಇದೀಗ ಆಲ್‌ಟ್ರೊಜ್ ಮತ್ತು ಹ್ಯಾರಿಯರ್ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಲಾಕ್‌ಡೌನ್ ತೆರವುಗೊಂಡ ನಂತರ ಟಾಟಾ ಮಾರಾಟದಲ್ಲಿ ಭಾರೀ ಏರಿಕೆ

ಪ್ರಯಾಣಿಕರ ಕಾರು ಮಾರಾಟದಲ್ಲಿ ಟಾಟಾ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನದಲ್ಲಿರುವ ಟಾಟಾ ಕಂಪನಿಯು ಜೂನ್ 2020ರ ಅವಧಿಗಿಂತಲೂ ಜುಲೈ ಅವಧಿಯಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಸ್ವಂತ ವಾಹನ ಬಳಕೆ ಹೆಚ್ಚುತ್ತಿರುವುದು ವಾಹನ ಮಾರಾಟದಲ್ಲಿ ಬೆಳವಣಿಗೆ ಪ್ರಮುಖ ಕಾರಣವಾಗಿದೆ.

ಲಾಕ್‌ಡೌನ್ ತೆರವುಗೊಂಡ ನಂತರ ಟಾಟಾ ಮಾರಾಟದಲ್ಲಿ ಭಾರೀ ಏರಿಕೆ

ಜೊತೆಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಗೆ ಮೇಡ್ ಇನ್ ಇಂಡಿಯಾ ಅಭಿಯಾನವು ಕೂಡಾ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎನ್ನಬಹುದು.

ಲಾಕ್‌ಡೌನ್ ತೆರವುಗೊಂಡ ನಂತರ ಟಾಟಾ ಮಾರಾಟದಲ್ಲಿ ಭಾರೀ ಏರಿಕೆ

ಹಾಗೆಯೇ ಟಾಟಾ ಕಂಪನಿಯು ಸಹ ಗ್ರಾಹಕರ ಬೇಡಿಕೆಯೆಂತೆ ತನ್ನ ಹೊಸ ಕಾರು ಉತ್ಪನ್ನಗಳ ಅಭಿವೃದ್ದಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ನೆಕ್ಸಾನ್, ಆಲ್‌ಟ್ರೊಜ್, ಟಿಯಾಗೋ, ಟಿಗೋರ್ ಮತ್ತು ಹ್ಯಾರಿಯರ್ ಕಾರುಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಲಾಕ್‌ಡೌನ್ ತೆರವುಗೊಂಡ ನಂತರ ಟಾಟಾ ಮಾರಾಟದಲ್ಲಿ ಭಾರೀ ಏರಿಕೆ

ಇನ್ನು ಕರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವಾರು ಕಾರು ಮಾದರಿಗಳ ಬಿಡುಗಡೆಯು ಮುಂದೂಡಿಕೆಯಾಗಿರುವುದಲ್ಲದೆ ಕೆಲ ಕಾರು ಮಾದರಿಗಳ ಬಿಡುಗಡೆಯ ಯೋಜನೆಯನ್ನೇ ಕೈಬಿಡುವ ಪರಿಸ್ಥಿತಿ ಎದುರಾಗಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬಿಡುಗಡೆ ಯೋಜನೆಯನ್ನು ಮುಂದೂಡಿಕೆ ಮಾಡಿದೆ.

ಲಾಕ್‌ಡೌನ್ ತೆರವುಗೊಂಡ ನಂತರ ಟಾಟಾ ಮಾರಾಟದಲ್ಲಿ ಭಾರೀ ಏರಿಕೆ

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಗ್ರಾವಿಟಾಸ್ ಎಸ್‌ಯುವಿ ಮಾದರಿಯನ್ನು ಇದೇ ಜೂನ್ ಅಥವಾ ಜುಲೈ ಅವಧಿಯಲ್ಲಿ ಬಿಡುಗಡೆಯ ಯೋಜನೆ ಹೊಂದಿತ್ತು. ಆದರೆ ಕರೋನಾ ವೈರಸ್ ಅಬ್ಬರ ಹೆಚ್ಚುತ್ತಿದ್ದಂತೆ ತಾತ್ಕಾಲಿಕವಾಗಿ ಕಾರು ಬಿಡುಗಡೆಯನ್ನು ಮುಂದೂಡಿದ್ದ ಟಾಟಾ ಕಂಪನಿಯು ಮುಂಬರುವ ಸೆಪ್ಟೆಂಬರ್ ಹೊತ್ತಿಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಇದೀಗ ಹೊಸ ಕಾರಿನ ಬಿಡುಗಡೆ ಸದ್ಯಕ್ಕಿಲ್ಲ ಎಂದಿರುವ ಟಾಟಾ ಕಂಪನಿಯು 2021ಕ್ಕೆ ಮುಂದೂಡಿಕೆ ಮಾಡಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬರಲಿರುವ ಹೊಸ ವಿಮಾ ನೀತಿ..

ಲಾಕ್‌ಡೌನ್ ತೆರವುಗೊಂಡ ನಂತರ ಟಾಟಾ ಮಾರಾಟದಲ್ಲಿ ಭಾರೀ ಏರಿಕೆ

ಸದ್ಯ ಪರಿಸ್ಥಿತಿಯಲ್ಲಿ ಹೊಸ ಕಾರುಗಳ ಬಿಡುಗಡೆಯು ಆರ್ಥಿಕವಾಗಿ ಹಿನ್ನಡೆಯುಂಟು ಮಾಡುವ ಸಾಧ್ಯತೆ ಹೆಚ್ಚು ಎಂದು ಪರಿಗಣಿಸಿರುವ ಟಾಟಾ ಕಂಪನಿಯು ಹೊಸ ಕಾರುಗಳ ಬಿಡುಗಡೆಯಿಂದ ಹಿಂದೆ ಸರಿದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನ ಮಾರಾಟ ಸುಧಾರಣೆಯತ್ತ ಗಮನಹರಿಸಲು ನಿರ್ಧರಿಸಿದೆ.

Article Published On: Saturday, August 1, 2020, 21:14 [IST]
English summary
Tata Motors Sales July 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+