ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್

ಖ್ಯಾತ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಮುಂಬರುವ ಹಬ್ಬದ ವೇಳೆಗೆ ತನ್ನ ಮಾರಾಟವನ್ನು ಹೆಚ್ಚಿಸಲು ಟಾಟಾ ಹ್ಯಾರಿಯರ್ ಕಾರಿನ ಕ್ಯಾಮೊ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್

ಕಂಪನಿಯು ಈಗಾಗಲೇ ಈ ಆವೃತ್ತಿಯನ್ನು ಟ್ರೇಡ್‌ಮಾರ್ಕ್ ಮಾಡಿದ್ದ ಬಗ್ಗೆ ಮಾಹಿತಿ ನೀಡಲಾಗಿತ್ತು. ಟಾಟಾ ಹ್ಯಾರಿಯರ್ ಕಾರಿನ ಕ್ಯಾಮೊ ಆವೃತ್ತಿಗೆ ಸಂಬಂಧಿಸಿದಂತೆ ಈಗ ಕೆಲವು ಹೊಸ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ದೀಪಾವಳಿಗೆ ಮುನ್ನ ಕಂಪನಿಯು ಈ ಕಾರನ್ನು ಬಿಡುಗಡೆಗೊಳಿಸಬಹುದೆಂದು ಹೇಳಲಾಗಿದೆ. ಮಾಹಿತಿಯ ಪ್ರಕಾರ, ಟಾಟಾ ಹ್ಯಾರಿಯರ್ ಕ್ಯಾಮೊ ಆವೃತ್ತಿಯನ್ನು ಆರು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್

ಈ ಆವೃತ್ತಿಯನ್ನು ಎಕ್ಸ್ ಟಿ, ಎಕ್ಸ್ ಟಿ ಪ್ಲಸ್, ಎಕ್ಸ್ ಝಡ್, ಎಕ್ಸ್ ಝಡ್ಎ, ಎಕ್ಸ್ ಝಡ್ ಪ್ಲಸ್,ಎಕ್ಸ್ ಝಡ್ಎ ಪ್ಲಸ್ ಎಂಬ ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇತ್ತೀಚಿಗಷ್ಟೇ ಟಾಟಾ ಹ್ಯಾರಿಯರ್ ಕಾರಿನ ಡಾರ್ಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್

ಟಾಟಾ ಹ್ಯಾರಿಯರ್ ಕ್ಯಾಮೊ ಆವೃತ್ತಿಯನ್ನು ಸಹ ಅದೇ ಬೆಲೆಗೆ ಮಾರಾಟ ಮಾಡುವ ನಿರೀಕ್ಷೆಗಳಿವೆ. ಕೆಲವು ಮೂಲಗಳ ಪ್ರಕಾರ, ಕ್ಯಾಮೊ ಆವೃತ್ತಿಯನ್ನು ಹೆಚ್ಚಿನ ಬೆಲೆಗೂ ಮಾರಾಟ ಮಾಡುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಹೆಕ್ಸಾ ಹಾಗೂ ಸಫಾರಿ ಕಾರುಗಳ ರೀತಿಯಲ್ಲಿ ಹ್ಯಾರಿಯರ್ ಕ್ಯಾಮೊ ಆವೃತ್ತಿಯನ್ನು ಸಹ ಹೊಸ ಹಸಿರು ಬಣ್ಣದಲ್ಲಿ ಮಾರಾಟ ಮಾಡಲಾಗುವುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್

ಟಾಟಾ ಹ್ಯಾರಿಯರ್ ಕ್ಯಾಮೊ ಆವೃತ್ತಿಯ ಬಾಡಿಯಲ್ಲಿ ಮಾತ್ರವಲ್ಲದೇ, ಕಾರಿನಲ್ಲಿರುವ 17 ಇಂಚಿನ ಅಲಾಯ್ ವ್ಹೀಲ್ ಗಳಲ್ಲಿಯೂ ಹಸಿರು ಬಣ್ಣವನ್ನು ನೀಡಲಾಗುವುದು. ಈ ಕಾರಿನ ಇಂಟಿರಿಯರ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್

ಆದರೆ ಇಂಟಿರಿಯರ್ ಸಹ ಡಾರ್ಕ್ ಆವೃತ್ತಿಯಂತೆಯೇ ಕಪ್ಪು ಬಣ್ಣವನ್ನು ಹೊಂದಿರುವ ಸಾಧ್ಯತೆಗಳಿವೆ. ಈ ಕಾರಿನ ಇಂಟಿರಿಯರ್ ನಲ್ಲಿ ಹಲವಾರು ಅಪ್ ಡೇಟ್ ಗಳನ್ನು ಮಾಡಲಾಗುವುದು. ಆದರೆ ಫೀಚರ್ ಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಕ್ಯಾಮೊ ಎಡಿಷನ್

ಇನ್ನು ಎಂಜಿನ್ ಬಗ್ಗೆ ಹೇಳುವುದಾದರೆ, ಹ್ಯಾರಿಯರ್ ಸ್ಟಾಂಡರ್ಡ್ ಮಾದರಿಯಲ್ಲಿರುವಂತಹ 2.0-ಲೀಟರಿನ ಡೀಸೆಲ್ ಎಂಜಿನ್ ಅನ್ನು ಈ ಆವೃತ್ತಿಯಲ್ಲಿಯೂ ಬಳಸಲಾಗುತ್ತದೆ. ಈ ಎಂಜಿನ್ 168 ಬಿಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6-ಸ್ಪೀಡಿನ ಮ್ಯಾನುವಲ್ ಹಾಗೂ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ನೀಡಲಾಗುತ್ತದೆ.

Article Published On: Thursday, November 5, 2020, 19:07 [IST]
English summary
Tata Motors to launch Harrier Camo Edition soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+