ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್

ಬಿಎಸ್-6 ಎಂಜಿನ್‌ನೊಂದಿಗೆ ಹ್ಯಾರಿಯರ್ ಎಸ್‌ಯುವಿ ಈ ಬಾರಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಮ್ಯಾನುವಲ್ ಆವೃತ್ತಿಗಿಂತಲೂ ಹೆಚ್ಚು ಮಾರಾಟವಾಗುತ್ತಿದೆ.

ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್

ಟಾಟಾ ಮೋಟಾರ್ಸ್ ಕಂಪನಿಯು ಜುಲೈ ಅವಧಿಯಲ್ಲಿ ಹ್ಯಾರಿಯರ್ ಮಾದರಿಯಲ್ಲಿ 986 ಯುನಿಟ್ ಮಾರಾಟ ಮಾಡುವ ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದಕೊಂಡಿದ್ದು, ಅಗಸ್ಟ್ ತಿಂಗಳಿನಲ್ಲಿ ಮಾರಾಟ ಹೆಚ್ಚಳ ನೀರಿಕ್ಷೆಯಲ್ಲಿದೆ. ಹೀಗಾಗಿ ಹೊಸ ಕಾರಿನ ಮೇಲೆ ಸೀಮಿತ ಅವಧಿಗಾಗಿ ಕೆಲವು ಡಿಸ್ಕೌಂಟ್ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಡೀಸೆಲ್ ಆಟೋಮ್ಯಾಟಿಕ್ ಕಾರು ಖರೀದಿ ಮೇಲೆ ಗರಿಷ್ಠ ರೂ. 1 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದೆ.

ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್

ಮಾಹಿತಿಗಳ ಪ್ರಕಾರ, ಎಕ್ಸ್ಎಂಎ ಮತ್ತು ಎಕ್ಸ್‌ಜೆಡ್ಎ ಆಟೋಮ್ಯಾಟಿಕ್ ವರ್ಷನ್‌ಗಳ ಆಫರ್ ನೀಡಲಾಗುತ್ತಿದ್ದು, ಇನ್ನುಳಿದ ವೆರಿಯೆಂಟ್‌ಗಳ ಮೇಲೆ ರೂ.1 ಲಕ್ಷ ಡಿಸ್ಕೌಂಟ್ ಲಭ್ಯವಿಲ್ಲವಾದರೂ ಡೀಲರ್ಸ್ ಮಟ್ಟದಲ್ಲಿ ಕೆಲವು ಆಫರ್‌ಗಳು ಲಭ್ಯವಿವೆ ಎನ್ನಲಾಗಿದೆ.

ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್

ಇನ್ನು ಪ್ರತಿ ಸ್ಪರ್ಧಿ ಕಾರು ಮಾದರಿಗಳಾದ ಮಹೀಂದ್ರಾ ಎಕ್ಸ್‌ಯುವಿ 500, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಹ್ಯಾರಿಯರ್ ಕಾರು ವಿಶೇಷ ಫೀಚರ್ಸ್‌ಗಳೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ಹೊಸ ಕಾರು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮಾದರಿಯನ್ನು ಪಡೆದುಕೊಂಡಿದೆ.

ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಆವೃತ್ತಿಯಾದ ಹ್ಯಾರಿಯರ್ ಕಾರು ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಬಿಎಸ್‌-6 ಎಂಜಿನ್ ಉನ್ನತೀಕರಣದ ನಂತರ ಮತ್ತೆರಡು ಹೊಸ ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್

ಹ್ಯಾರಿಯರ್ ಕಾರು ಮಾದರಿಯಲ್ಲಿ ಹೊಸದಾಗಿ ಎಕ್ಸ್‌ಟಿಎ ಮತ್ತು ಎಕ್ಸ್‌ಟಿ ಪ್ಲಸ್ ವೆರಿಯೆಂಟ್‌ಗಳನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ವೆರಿಯೆಂಟ್‌ಗಳು ಕಾರಿನ ಮಧ್ಯಮ ಶ್ರೇಣಿಯಲ್ಲಿನ ಬೇಡಿಕೆ ಪೂರೈಕೆಗೆ ಸಹಕಾರಿಯಾಗಲಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಹ್ಯಾರಿಯರ್ ಕಾರು ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ 16 ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ವೆರಿಯೆಂಟ್‌ಗಳು ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ನಡುವಿನ ಬೆಲೆ ಅಂತರವನ್ನು ಸರಿದೂಗಿಸಲಿದ್ದು, ಹೊಸ ವೆರಿಯೆಂಟ್‌ಗಳು ಪನೊರಮಿಕ್ ಸನ್‌ರೂಫ್ ಸೇರಿದಂತೆ ಕೆಲವು ಹೊಸ ತಾಂತ್ರಿಕ ಸೌಲಭ್ಯದೊಂದಿಗೆ ಮುಂದಿನ ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್

ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಆರಂಭಿಕವಾಗಿ ರೂ. 13.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.25 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದರಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.25 ಲಕ್ಷದಿಂದ ಆರಂಭಗೊಳ್ಳಲಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಹ್ಯಾರಿಯರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ಭರ್ಜರಿ ಆಫರ್

ಬ್ಲ್ಯಾಕ್ ಎಡಿಷನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.17.07 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.25 ಲಕ್ಷ ಬೆಲೆ ಹೊಂದಿದೆ.

Article Published On: Saturday, August 8, 2020, 11:48 [IST]
English summary
Tata Offers Massive Discounts On BS6 Harrier Automatic. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+