80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಭಾರತ ಮೂಲದ ಕೆಲವು ಕಾರು ತಯಾರಕ ಕಂಪನಿಗಳು ವಿಶ್ವದ ಇತರ ಕಂಪನಿಗಳಿಗೆ ಸರಿಸಮನಾಗಿ ಕಾರುಗಳನ್ನು ತಯಾರಿಸಬಹುದು ಎಂಬುದನ್ನು ಸಾಬೀತುಪಡಿಸುತ್ತಿವೆ. ಇವುಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಒಂದು ಕೈ ಮೇಲೆ ಎಂದೇ ಹೇಳಬಹುದು.

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಟಾಟಾ ಮೋಟಾರ್ಸ್ ಕಾರುಗಳು ಡಿಸೈನ್ ಹಾಗೂ ಟೆಕ್ನಾಲಜಿಯಲ್ಲಿ ಮಾತ್ರವಲ್ಲದೆ ಸುರಕ್ಷತಾ ಮಾನದಂಡಗಳಲ್ಲೂ ಅತ್ಯುತ್ತಮವಾಗಿವೆ ಎಂದು ಕಾಲಕಾಲಕ್ಕೆ ಸಾಬೀತಾಗಿದೆ. ಇದನ್ನು ಮತ್ತೆ ಸಾಬೀತು ಪಡಿಸುವ ವೀಡಿಯೊವೊಂದನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ವೀಡಿಯೊವನ್ನು ಪ್ರತೀಕ್ ಸಿಂಗ್ ಎಂಬ ಚಾನೆಲ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಟಿಯಾಗೋ ಟಾಟಾ ಕಂಪನಿಯ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಟೆಸ್ಟ್ ನಲ್ಲಿ ಈ ಕಾರು ದಾಖಲೆ ಎನ್ನಲಾದ 4 ಸ್ಟಾರ್ ಗಳನ್ನು ಪಡೆದಿದೆ.

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಸುರಕ್ಷತೆಯ ಬಗೆಗಿನ ಖಚಿತತೆ ಎಂಬಂತೆ ಟಿಯಾಗೋ ತನ್ನ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದೆ. ಸುಮಾರು 100 ಕಿ.ಮೀ ವೇಗದಲ್ಲಿ ಪ್ರಯಾಣಿಸುತ್ತಿದ್ದ ಟಾಟಾ ಟಿಯಾಗೋ ಕಾರು ಪಲ್ಟಿ ಹೊಡೆದು 80 ಮೀಟರ್ ಮೇಲಿನಿಂದ ಉರುಳಿ ಬಿದ್ದಿದೆ. ಆದರೂ ಒಳಗಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಈ ಘಟನೆಯ ನಂತರ ಭಾರತದ ಆಟೋಮೊಬೈಲ್ ಉದ್ಯಮದಲ್ಲಿ ಟಾಟಾ ಕಾರುಗಳು ಅಷ್ಟು ಸುರಕ್ಷಿತವೇ ಎಂಬ ಪ್ರಶ್ನೆ ಮೂಡಿದೆ. ಟಾಟಾ ಕಾರುಗಳು ಪ್ರಯಾಣಿಕರನ್ನು ಈ ರೀತಿಯ ದೊಡ್ಡ ಅಪಘಾತಗಳಿಂದ ರಕ್ಷಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಟಾಟಾ ಕಾರುಗಳು ಪ್ರಯಾಣಿಕರನ್ನು ನಂಬಲಾಗದ ರೀತಿಯ ಅಪಘಾತಗಳಿಂದ ಪಾರು ಮಾಡಿದ್ದವು.

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಟಾಟಾ ಕಂಪನಿಯ ಅತ್ಯಂತ ಸುರಕ್ಷಿತ ಕಾರು ಎಂದು ಪರಿಗಣಿಸಲ್ಪಡುವ ನೆಕ್ಸಾನ್ ಹಲವಾರು ಫೀಚರ್ ಗಳನ್ನು ಹೊಂದಿದೆ. ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ನೆಕ್ಸಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನು ಕಾರು ಪಲ್ಟಿ ಹೊಡೆದು ರಸ್ತೆಯ ಮೇಲೆ ಹಲವಾರು ಬಾರಿ ಉರುಳಿಬಿದ್ದರೂ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಈ ಕಾರಿನಲ್ಲಿದ್ದ ಎಂಜಿನ್ ಬೇ ಹಲವು ಮೀಟರ್ ಗಳಷ್ಟು ದೂರ ಬಿದ್ದಿದೆ. ಕಾರಿನ ಮುಂಭಾಗವು ಗುರುತಿಸಲಾಗದಷ್ಟು ಹಾಳಾಗಿದೆ. ಆದರೂ ಟಾಟಾ ನೆಕ್ಸಾನ್ ಕಾರು ಪ್ರಯಾಣಿಕನನ್ನು ರಕ್ಷಿಸುವ ಮೂಲಕ ತನ್ನ ಸುರಕ್ಷತೆಯನ್ನು ಸಾಬೀತುಪಡಿಸಿದೆ.

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಈಗ ಟಾಟಾ ಟಿಯಾಗೋ ಕಾರು 100 ಕಿ.ಮೀ ವೇಗದಲ್ಲಿ ಸಾಗಿದರೂ 80 ಮೀಟರ್ ಮೇಲಿಂದ ಬಿದ್ದರೂ ಒಳಗಿದ್ದ ಪ್ರಯಾಣಿಕರನ್ನು ರಕ್ಷಿಸಿದೆ. ಈ ಘಟನೆ ಒರಿಸ್ಸಾದ ದಿಯೊಗಢದಲ್ಲಿ ನಡೆದಿದೆ. ಕಾರಿನ ಮಾಲೀಕ ದೇಬಿ ಪ್ರಸಾದ್ ದಾಸ್ ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಅನಿರೀಕ್ಷಿತವಾಗಿ ಎದುರಾದ ಟರ್ನಿಂಗ್ ನಲ್ಲಿ ಕಾರನ್ನು ರಸ್ತೆಯ ಬದಿಗೆ ಸರಿದಿದೆ. ಈ ಕಾರಣಕ್ಕೆ ಕಾರು 7ಕ್ಕೂ ಹೆಚ್ಚು ಬಾರಿ ಉರುಳಿದೆ. ಇದರಿಂದಾಗಿ ಕಾರಿನ ಮುಂಭಾಗ ಹಾಗೂ ರೂಫ್ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಸಹ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಚೇತರಿಸಿಕೊಂಡಿದ್ದಾರೆ.

ಟಾಟಾ ಟಿಯಾಗೋ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ರಿಮ್ಯಾಂಡರ್, ಸ್ಪೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಎಬಿಎಸ್ ಬ್ರೇಕಿಂಗ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ. ಈ ಕಾರು ಸುರಕ್ಷತೆಗಾಗಿ ಗ್ಲೋಬಲ್ ಎನ್‌ಸಿಎಪಿಯಿಂದ 4 ಸ್ಟಾರ್ ಗಳನ್ನು ಪಡೆದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಈ ಕಾರಿನಲ್ಲಿ ಅಳವಡಿಸಲಾಗಿರುವ 1.2 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಇನ್ ಲೈನ್ 3 ಪೆಟ್ರೋಲ್ ಎಂಜಿನ್ 85 ಬಿಹೆಚ್ ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

80 ಮೀಟರ್ ಮೇಲಿಂದ ನೆಲಕ್ಕುರುಳಿದರೂ ಬದುಕುಳಿದ ಟಾಟಾ ಟಿಯಾಗೋ ಪ್ರಯಾಣಿಕರು

ಈ ಕಾರು 5 ಸ್ಪೀಡಿನ ಮ್ಯಾನುವಲ್ ಹಾಗೂ 5 ಸ್ಪೀಡಿನ ಎಎಂಜಿ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.4.6 ಲಕ್ಷದಿಂದ ರೂ.6.59 ಲಕ್ಷಗಳಾಗಿದೆ.

Article Published On: Wednesday, July 22, 2020, 18:05 [IST]
English summary
Tata Tiago proves its safety. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+