ಹೊಸ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಅಧಿಕೃತ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ. ಇದೀಗ ಟಾಟಾ ಕಂಪನಿಯು ಟಿಯಾಗೋ ಫೇಸ್‍‍ಲಿಫ್ಟ್ ಸೆಡಾನ್ ಕಾರಿನ ಅಧಿಕೃತ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

ಹೊಸ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಅಧಿಕೃತ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಈ ಅಧಿಕೃತ ವೀಡಿಯೋದಲ್ಲಿ ಹಿಂದಿನ ಆವೃತ್ತಿಗೆ ಹೋಲಿಸಿದರೆ ಹೊಸ ಕಾರಿನಲ್ಲಿ ಮಾಡಲಾದ ಬದಲಾವಣೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಈ ಕಾರಿನ ಮುಂಭಾಗದಲ್ಲಿ ಹೊಸ ಬಂಪರ್ ಅನ್ನು ಅಳವಡಿಸಲಾಗಿದೆ. ಇನ್ನೂ ನವೀಕರಿಸಿದ ಏರ್‍‍ಡ್ಯಾಮ್ ಮತ್ತು ಫಾಂಗ್ ಲ್ಯಾಂಪ್ ಗಳನ್ನು ನೀಡಲಾಗಿದೆ. ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗಲ್ಲಿ ಪಾದಚಾರಿಗಳ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ರೈಸಡ್ ಬಾನೆಟ್ ಅನ್ನು ನೀಡಲಾಗಿದೆ.

ಹೊಸ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಅಧಿಕೃತ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಈ ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಟೇಲ್‍‍ಲೈಟ್‍‍ಗಳಿವೆ. ಟಿಗೋರ್ ಫೇಸ್‍‍ಲಿಫ್ಟ್ ಸೆಡಾನ್ ಕಾರಿನ ಇಂಟಿರಿಯರ್ ನಲ್ಲಿ ಫ್ಲಾಟ್ ಬಾಟಮ್ ಸ್ಟೀಯರಿಂಗ್, ಫುಶ್ ಬಟನ್, ಎಸಿ ವೆಂಟ್ಸ್ ಗಳನ್ನು ಹೊಂದಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಹೊಸ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಅಧಿಕೃತ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಈ ಕಾರಿನಲ್ಲಿ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ, ಈ ಕಾರಿನ ಇಂಟಿರಿಯರ್‍ನಲ್ಲಿ ಪ್ರಮುಖ ಬದಲಾವಣೆಗಳಲ್ಲಿ ಇದು ಕೂಡ ಒಂದಾಗಿದೆ. ಇದೀಗ ಪೂರ್ಣ ಪ್ರಮಾಣದ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

ಹೊಸ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಅಧಿಕೃತ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಇದರೊಂದಿಗೆ ಈ ಕಾರಿನ ಇಂಟಿರಿಯರ್‍ನಲ್ಲಿ ಹರ್ಮನ್ ಆಡಿಯೋ, ಕೈಮೆಂಟ್ ಕಂಟ್ರೋಲ್ ಸಿಸ್ಟಂ, ಡ್ರೈವ್ ಮೋಡ್‍‍ಗಳು ಮತ್ತು ಟಚ್‍‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಸ್ಟಂ ಅನ್ನು ಹೊಂದಿದೆ. ಆ‌ಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಹೊಂದಿರುವ ಟಚ್‌ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಕಾರಿನಲ್ಲಿ 15 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹೊಸ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಅಧಿಕೃತ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಇಂಟಿರಿಯರ್‍‍ನಲ್ಲಿ ಫ್ಯಾಬ್ರಿಕ್ ಸೀಟ್‍‍ಗಳನ್ನು ಒಳಗೊಂಡಿದೆ. ಕಾಸ್ಮೆಟಿಕ್ ನವೀಕರಣಗಳನ್ನು ಬದಿಗಿಟ್ಟು ನೋಡಿದರೆ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳ ಪೆಟ್ರೋಲ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಹೊಸ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಅಧಿಕೃತ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಟಿಗೋರ್ ಫೇಸ್‍‍ಲಿಫ್ಟ್ ಸೆಡಾನ್ ಕಾರಿನಲ್ಲಿ 1.2 ಲೀಟರ್ ಮೂರು ಸಿಲಿಂಡರ್ ಬಿಎಸ್-6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿವೆ. ಈ ಎಂಜಿನ್ 86 ಬಿ‍‍ಹೆಚ್‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಟಿಗೋರ್ ಕಾರಿನಲ್ಲಿದ್ದ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ. ಸುರಕ್ಷತೆಗಾಗಿ ಈ ಕಾರಿನಲ್ಲಿ ಸ್ಟ್ಯಾಂಡರ್ಡ್ ಡ್ಯುಯಲ್ ಏರ್‍‍ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಕಾರ್ನರ್ ಸ್ಟಿಬಿಲಿಟಿ ಕಂಟ್ರೋಲ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳಿವೆ.

ಹೊಸ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಅಧಿಕೃತ ವೀಡಿಯೋ ಬಿಡುಗಡೆಗೊಳಿಸಿದ ಟಾಟಾ

ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.75 ಲಕ್ಷಗಳಾಗಿದೆ. ಟಿಗೋರ್ ಫೇಸ್‍‍ಲಿಫ್ಟ್ ಕಾರು ಹ್ಯುಂಡೈ ಒರಾ, ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಝ್ ಮತ್ತು ಪೋರ್ಡ್ ಆಸ್ಪೈರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, April 15, 2020, 11:25 [IST]
English summary
Tata Tigor Facelift: Official video gives you an in-depth view. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+