ಕರೋನಾ ವೈರಸ್ ಭೀತಿಯ ನಡುವೆಯೂ ಹೊಸ ಮೈಲಿಗಲ್ಲು ಸಾಧಿಸಿದ ಟೆಸ್ಲಾ
ಈಗ ಪ್ರಪಂಚದೆಲ್ಲೆಡೆ ಕರೋನಾ ವೈರಸ್ ಕುರಿತ ಒಂದೇ ಮಾತು. ಕರೋನಾ ವೈರಸ್ ಈಗ ಭಾರತಕ್ಕೂ ಕಾಲಿಟ್ಟಿದೆ. ಸರ್ಕಾರವು ಈ ವೈರಸ್ ಬಗ್ಗೆ ಯಾವುದೇ ಭಯ ಪಡದಂತೆ ಪ್ರಚಾರ ಮಾಡುತ್ತಿದೆ. ಆದರೂ ಜನರು ಭಯಗೊಂಡಿರುವುದು ನಿಜ.

ಪ್ರಪಂಚದ ಬಹುತೇಕ ಎಲ್ಲಾ ದೇಶಗಳನ್ನು ಕಾಡುತ್ತಿರುವ ಈ ಮಾರಣಾಂತಿಕ ವೈರಸ್‍ಗೆ ಈಗಾಗಲೇ 3,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಪ್ರತಿದಿನ ಹಲವು ಹೊಸ ಪ್ರಕರಣಗಳು ದಾಖಲಾಗುತ್ತಲೇ ಇವೆ. ಕರೋನಾ ವೈರಸ್‍ನಿಂದ ಮನುಷ್ಯರು ಮಾತ್ರವಲ್ಲದೇ ಹಲವಾರು ಉದ್ಯಮಗಳೂ ಸಹ ಸಂಕಷ್ಟವನ್ನು ಅನುಭವಿಸುತ್ತಿವೆ.

ಅದರಲ್ಲೂ ಚೀನಾ ಮೂಲದ ಆಟೋಮೊಬೈಲ್ ಕಂಪನಿಗಳು ಹೆಚ್ಚಿನ ಸಂಕಷ್ಟವನ್ನು ಅನುಭವಿಸುತ್ತಿವೆ. ಪ್ರಪಂಚದ ಎಲ್ಲೆಡೆ ಚೀನಾ ಕಂಪನಿಗಳ ಬಿಡಿಭಾಗಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕರೋನಾ ವೈರಸ್ ಮೊದಲಿಗೆ ಕಾಣಿಸಿಕೊಂಡ ವುಹಾನ್ ನಗರದಲ್ಲಿರುವ ಆಟೋಮೊಬೈಲ್ ಕಂಪನಿಗಳಿಗೆ ಹೆಚ್ಚಿನ ತೊಂದರೆಯುಂಟಾಗಿದೆ.

ಚೀನಾದ ಪ್ರಮುಖ ನಗರದಿಂದ ಕಾರ್ಯಾಚರಣೆ ನಡೆಸುವ ಟೆಸ್ಲಾ ಕಂಪನಿಯ ಬಿಡಿಭಾಗಗಳಿಗೆ ಹಾಗೂ ಉತ್ಪನ್ನಗಳಿಗೆ ಬೇಡಿಕೆಯುಂಟಾಗಿದೆ. ಇದನ್ನು ಸ್ವತಃ ಟೆಸ್ಲಾ ಕಂಪನಿಯೇ ಹೇಳಿಕೊಂಡಿದೆ. ಟೆಸ್ಲಾ ಕಂಪನಿಯ ಈ ಹೇಳಿಕೆ ಚೀನಾದ ಆಟೋಮೊಬೈಲ್ ಉದ್ಯಮವನ್ನು ತಲ್ಲಣಗೊಳಿಸಿದೆ.

ಕೊವಿಡ್ 19 ವೈರಸ್‍ನಿಂದಾಗಿ ಇಡೀ ಚೀನಾದ ಆಟೋಮೊಬೈಲ್ ಉದ್ಯಮ ಬೆಚ್ಚಿಬಿದ್ದಿದೆ. ಇಂತಹ ಸನ್ನಿವೇಶದಲ್ಲಿ ಟೆಸ್ಲಾ ಆಟೋಮ್ಯಾಟಿಕ್ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯು ತನ್ನ ಫ್ರೆಮಾಂಟ್ ಘಟಕದಿಂದ ತಾನು ಉತ್ಪಾದಿಸಿರುವ 10 ಲಕ್ಷ ಯುನಿಟ್ ವಾಹನವನ್ನು ಹೊರತರುವುದಾಗಿ ತಿಳಿಸಿದೆ.

ಈ ವಿಷಯವನ್ನು ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ರವರು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಟೆಸ್ಲಾ ಕಂಪನಿಯು ಮಾಡೆಲ್ ಎಸ್, ಮಾಡೆಲ್ ಎಕ್ಸ್, ಮಾಡೆಲ್ 3, ಮಾಡೆಲ್ ವೈ ಹಾಗೂ ಜೆನ್ ರೋಡ್‍ಸ್ಟರ್ ಎಂಬ ಐದು ಮಾದರಿಗಳನ್ನು ಮಾರಾಟ ಮಾಡುತ್ತದೆ.

ಶೀಘ್ರದಲ್ಲಿಯೇ ಟೆಸ್ಲಾ ಕಂಪನಿಯು ಸೈಬರ್ ಟ್ರಕ್ ಎಂಬ ಪಿಕ್‍ಅಪ್ ಟ್ರಕ್ ಅನ್ನು ಬಿಡುಗಡೆಗೊಳಿಸಲಿದೆ. ಟೆಸ್ಲಾ ಕಂಪನಿಯು ಕ್ಯಾಲಿಫೋರ್ನಿಯಾದಲ್ಲಿರುವ ಫ್ರೆಮಾಂಟ್ ಉತ್ಪಾದನಾ ಘಟಕದ ಹೊರತಾಗಿ ಚೀನಾದ ಶಾಂಘೈನಲ್ಲಿಯೂ ಉತ್ಪಾದನಾ ಘಟಕವನ್ನು ಹೊಂದಿದೆ.

ಟೆಸ್ಲಾ ಈ ಉತ್ಪಾದನಾ ಘಟಕದಲ್ಲಿ ಪ್ರತಿ ವರ್ಷ ಎರಡೂವರೆ ಲಕ್ಷ ಯುನಿಟ್‍ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ವಿಶ್ವದೆಲ್ಲೆಡೆ ಕರೋನಾ ವೈರಸ್ ಭೀತಿಯಿದ್ದರೂ ಟೆಸ್ಲಾ ಕಂಪನಿಯು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಟೆಸ್ಲಾ ಪ್ರಪಂಚದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಬಿಎಂಡಬ್ಲ್ಯು ಕಾರುಗಳ ಆಧಾರದ ಮೇಲೆ ತಯಾರಿಸಲಾಗಿದೆ. ಟೆಸ್ಲಾ ಕಾರುಗಳು ಅಮೆರಿಕಾದಂತಹ ದೇಶಗಳಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಾಗಿವೆ.

ಟೆಸ್ಲಾ ಕಂಪನಿಯಲ್ಲಿರುವ ಎಲ್ಲಾ ಮಾದರಿಗಳ ಕಾರುಗಳು ಪ್ರಪಂಚದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಟೆಸ್ಲಾ ಕಂಪನಿಯ ಆಟೋಮ್ಯಾಟಿಕ್ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಇನ್ನೂ ಬಿಡುಗಡೆಗೊಳಿಸಿಲ್ಲ.


Click it and Unblock the Notifications








