ಅಕ್ರಮ ಫಾಸ್ಟ್‌ಟ್ಯಾಗ್‌ಗಳ ಮೇಲೆ ಬೀಳಲಿದೆ ದುಪ್ಪಟ್ಟು ಶುಲ್ಕ

ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ.

ಅಕ್ರಮ ಫಾಸ್ಟ್‌ಟ್ಯಾಗ್‌ಗಳ ಮೇಲೆ ಬೀಳಲಿದೆ ದುಪ್ಪಟ್ಟು ಶುಲ್ಕ

ಸರ್ಕಾರವು ಫಾಸ್ಟ್‌ಟ್ಯಾಗ್‌ಗಳ ಶುಲ್ಕವನ್ನು ಹೆಚ್ಚಿಸಿ ವಾಹನ ಸವಾರರಿಗೆ ಶಾಕ್ ನೀಡಿದೆ. ವಾಹನಗಳ ಮೇಲಿರುವ ಕೆಟ್ಟಿರುವ ಹಾಗೂ ಅಕ್ರಮ ಫಾಸ್ಟ್‌ಟ್ಯಾಗ್‌ಗಳಿಗೆ ಡಬಲ್ ಶುಲ್ಕ ವಿಧಿಸಲಾಗುವುದೆಂದು ಸರ್ಕಾರವು ಪ್ರಕಟಿಸಿದೆ. ಈ ಮೊದಲು ಫಾಸ್ಟ್‌ಟ್ಯಾಗ್‌ಗಳ ಮೇಲೆ ದುಪ್ಪಟ್ಟು ಶುಲ್ಕ ವಿಧಿಸುತ್ತಿರಲಿಲ್ಲ, ಈಗ ವಿಧಿಸಲಾಗುತ್ತಿದೆ.

ಅಕ್ರಮ ಫಾಸ್ಟ್‌ಟ್ಯಾಗ್‌ಗಳ ಮೇಲೆ ಬೀಳಲಿದೆ ದುಪ್ಪಟ್ಟು ಶುಲ್ಕ

ಕೇಂದ್ರ ಹೆದ್ದಾರಿ ಇಲಾಖೆಯು ಕೆಟ್ಟಿರುವ ಹಾಗೂ ಅಕ್ರಮ ಫಾಸ್ಟ್‌ಟ್ಯಾಗ್‌ಗಳನ್ನು ಹೊಂದಿರುವ ವಾಹನಗಳು ಫಾಸ್ಟ್‌ಟ್ಯಾಗ್‌ ಲೇನ್‌ಗಳಿಗೆ ಹೋದಾಗ ಟೋಲ್ ಶುಲ್ಕಕ್ಕಿಂತ ಎರಡು ಪಟ್ಟು ಶುಲ್ಕ ವಿಧಿಸಲಾಗುವುದೆಂದು ಹೇಳಿದೆ. ಈ ಶುಲ್ಕ ದ್ವಿಗುಣಗೊಳಿಸುವ ನಿಯಮವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಅಕ್ರಮ ಫಾಸ್ಟ್‌ಟ್ಯಾಗ್‌ಗಳ ಮೇಲೆ ಬೀಳಲಿದೆ ದುಪ್ಪಟ್ಟು ಶುಲ್ಕ

ಸರ್ಕಾರವು 2019ರ ಡಿಸೆಂಬರ್ 15ರಿಂದ ದೇಶಾದ್ಯಂತವಿರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ಅನ್ನು ಕಡ್ಡಾಯಗೊಳಿಸಿತು. ಈ ಗಡುವನ್ನು ಹಲವು ಬಾರಿ ವಿಸ್ತರಿಸಿ ಈ ವರ್ಷದ ಜನವರಿ 15ರಿಂದ ಜಾರಿಗೆ ತರಲಾಯಿತು. ಮೇ ತಿಂಗಳ ವೇಳೆಗೆ ದೇಶದಲ್ಲಿ 1.68 ಕೋಟಿ ಫಾಸ್ಟ್‌ಟ್ಯಾಗ್‌‌ಗಳನ್ನು ಮಾರಾಟ ಮಾಡಲಾಗಿದೆ.

ಅಕ್ರಮ ಫಾಸ್ಟ್‌ಟ್ಯಾಗ್‌ಗಳ ಮೇಲೆ ಬೀಳಲಿದೆ ದುಪ್ಪಟ್ಟು ಶುಲ್ಕ

ಕೇಂದ್ರ ಸರ್ಕಾರವು ಇತ್ತೀಚೆಗೆ ದೇಶದಲ್ಲಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಪುನರಾರಂಭಿಸುವಂತೆ ಎನ್‌ಹೆಚ್‌ಎಐಗೆ ಆದೇಶಿಸಿತ್ತು. ಏಪ್ರಿಲ್ 20 ರಿಂದ ಟೋಲ್ ಸಂಗ್ರಹವನ್ನು ಪುನರಾರಂಭಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಅಕ್ರಮ ಫಾಸ್ಟ್‌ಟ್ಯಾಗ್‌ಗಳ ಮೇಲೆ ಬೀಳಲಿದೆ ದುಪ್ಪಟ್ಟು ಶುಲ್ಕ

ಟೋಲ್ ಸಂಗ್ರಹವನ್ನು ಪುನರಾರಂಭಿಸುವುದರ ಜೊತೆಗೆ ಎನ್‌ಹೆಚ್‌ಎಐ ಟೋಲ್ ಶುಲ್ಕವನ್ನು ಕೂಡ ಹೆಚ್ಚಿಸಿದೆ. ಟೋಲ್ ಶುಲ್ಕವನ್ನು 5%ನಷ್ಟು ಹೆಚ್ಚಿಸಲಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯು ನೆಲ ಕಚ್ಚಿರುವ ಈ ಸಮಯದಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ.

ಅಕ್ರಮ ಫಾಸ್ಟ್‌ಟ್ಯಾಗ್‌ಗಳ ಮೇಲೆ ಬೀಳಲಿದೆ ದುಪ್ಪಟ್ಟು ಶುಲ್ಕ

ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ) ಸರ್ಕಾರದ ಈ ಕ್ರಮವನ್ನು ವಿರೋಧಿಸಿ, ಲಾಕ್‌ಡೌನ್ ಮುಗಿಯುವವರೆಗೂ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದೆ. ಆದರೆ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅಕ್ರಮ ಫಾಸ್ಟ್‌ಟ್ಯಾಗ್‌ಗಳ ಮೇಲೆ ಬೀಳಲಿದೆ ದುಪ್ಪಟ್ಟು ಶುಲ್ಕ

ಲಾಕ್‌ಡೌನ್ ಅವಧಿಯಲ್ಲಿ ನಷ್ಟವನ್ನು ಅನುಭವಿಸಿರುವ ಟೋಲ್ ಆಪರೇಟರ್‌ಗಳಿಗೆ ಪರಿಹಾರ ನೀಡಲು ಎನ್‌ಹೆಚ್‌ಎಐ ಮುಂದಾಗಿದೆ. ಟೋಲ್ ಆಪರೇಟರ್‌ಗಳಿಗೆ ಆಗಿರುವ ನಷ್ಟವನ್ನು ಸರಿಪಡಿಸುವ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದೆಂದು ಕೇಂದ್ರದ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಇತ್ತೀಚಿಗೆ ತಿಳಿಸಿದ್ದರು.

Article Published On: Monday, May 18, 2020, 18:36 [IST]
English summary
Toll fee doubled for vehicles with non functional FasTag. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+