ನಷ್ಟ ಪರಿಹಾರಕ್ಕೆ ಬೇಡಿಕೆಯಿಟ್ಟ ಟೋಲ್ ಆಪರೇಟರ್‌ಗಳು

ಹೆದ್ದಾರಿ ಪ್ರಾಧಿಕಾರದಿಂದ ಸುಮಾರು ರೂ.650 ಕೋಟಿ ವಸೂಲಿ ಮಾಡಲು ಮಧ್ಯಸ್ಥಿಕೆ ವಹಿಸುವಂತೆ ಹೈವೇ ಟೋಲ್ ಆಪರೇಟರ್‌ಗಳು ಮನವಿ ಮಾಡಿದ್ದಾರೆ. ಟೋಲ್ ಆಪರೇಟರ್‌ಗಳ ಪ್ರಕಾರ, ಲಾಕ್‌ಡೌನ್‌ ಕಾರಣಕ್ಕೆ 25 ದಿನಗಳವರೆಗೆ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿದ್ದ ಕಾರಣಕ್ಕೆ ರೂ.650 ಕೋಟಿ ನಷ್ಟವಾಗಿದೆ.

ನಷ್ಟ ಪರಿಹಾರಕ್ಕೆ ಬೇಡಿಕೆಯಿಟ್ಟ ಟೋಲ್ ಆಪರೇಟರ್‌ಗಳು

ಈ ನಷ್ಟವನ್ನು ಭರಿಸುವಂತೆ ಟೋಲ್ ಆಪರೇಟರ್‌ಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಖಾಸಗಿ ಇಕ್ವಿಟಿ ಹೊಂದಿರುವವರು ಸೇರಿದಂತೆ 162 ಬಿಲ್ಡ್-ಆಪರೇಟ್ ಟ್ರಾನ್ಸ್‌ಫರ್ ಟೋಲ್ ಆಪರೇಟರ್‌ಗಳು ಲಾಕ್‌ಡೌನ್ ಅವಧಿಯಲ್ಲಿ ತಮಗೆ ಉಂಟಾದ ವೆಚ್ಚ ಹಾಗೂ ನಷ್ಟಗಳಿಗೆ ಹಣಕಾಸಿನ ಪರಿಹಾರವನ್ನು ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.

ನಷ್ಟ ಪರಿಹಾರಕ್ಕೆ ಬೇಡಿಕೆಯಿಟ್ಟ ಟೋಲ್ ಆಪರೇಟರ್‌ಗಳು

ಕೋವಿಡ್ -19 ಹರಡದಂತೆ ತಡೆಯಲು ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿತ್ತು. ಗೃಹ ಇಲಾಖೆಯ ಸೂಚನೆ ಮೇರೆಗೆ ಮಾರ್ಚ್ 25ರಿಂದ ಏಪ್ರಿಲ್ 19ರವರೆಗೆ ದೇಶಾದ್ಯಂತ ಟೋಲ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ನಷ್ಟ ಪರಿಹಾರಕ್ಕೆ ಬೇಡಿಕೆಯಿಟ್ಟ ಟೋಲ್ ಆಪರೇಟರ್‌ಗಳು

ಈ ಅವಧಿಯಲ್ಲಿ ದೇಶಾದ್ಯಂತ ಟೋಲ್ ಪ್ಲಾಜಾಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ವಾಹನಗಳಿಂದ ಟೋಲ್ ಶುಲ್ಕವನ್ನು ಸಂಗ್ರಹಿಸುತ್ತಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಸಂಗ್ರಹವನ್ನು ಮುಚ್ಚುವ ಅವಧಿಯನ್ನು ಉಲ್ಲೇಖಿಸದ ಕಾರಣಕ್ಕೆ ರಿಯಾಯಿತಿದಾರರು ಭ್ರಮನಿರಸನಗೊಂಡಿದ್ದಾರೆ ಎಂದು ಹೇಳಲಾಗಿದೆ.

ನಷ್ಟ ಪರಿಹಾರಕ್ಕೆ ಬೇಡಿಕೆಯಿಟ್ಟ ಟೋಲ್ ಆಪರೇಟರ್‌ಗಳು

ಟೋಲ್ ರಸ್ತೆಗಳನ್ನು ನಿರ್ಮಿಸುವವರು ಹಾಗೂ ಆಪರೇಟರ್‌ಗಳಿಗೆ ನೆರವಾಗಲು ಸಾರಿಗೆ ಇಲಾಖೆಯು ಮೇ ತಿಂಗಳಿನಲ್ಲಿ ಕೆಲವು ಯೋಜನೆಗಳನ್ನು ಘೋಷಿಸಿತು. ಈ ಯೋಜನೆಯನ್ವಯ ರಸ್ತೆ ನಿರ್ಮಾಣದ ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸಲು ಹಾಗೂ ಗುತ್ತಿಗೆದಾರರಿಗೆ ತ್ವರಿತವಾಗಿ ಹಣ ಪಾವತಿಸುವಂತೆ ಶಿಫಾರಸು ಮಾಡಲಾಯಿತು.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ನಷ್ಟ ಪರಿಹಾರಕ್ಕೆ ಬೇಡಿಕೆಯಿಟ್ಟ ಟೋಲ್ ಆಪರೇಟರ್‌ಗಳು

ಆದರೆ ಕೆಲಸ ಸ್ಥಗಿತಗೊಂಡ ಕಾರಣಕ್ಕೆ ಹಾಗೂ ಯೋಜನೆಯು ವಿಳಂಬವಾಗುವ ಕಾರಣಕ್ಕೆ ಉಂಟಾಗುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಯಾವುದೇ ಪರಿಹಾರ ಪ್ಯಾಕೇಜ್‌ನ ಭರವಸೆ ನೀಡಲಿಲ್ಲ.

ನಷ್ಟ ಪರಿಹಾರಕ್ಕೆ ಬೇಡಿಕೆಯಿಟ್ಟ ಟೋಲ್ ಆಪರೇಟರ್‌ಗಳು

ವರದಿಗಳ ಪ್ರಕಾರ, ಟೋಲ್ ಆಪರೇಟರ್‌ಗಳು ಮಧ್ಯಸ್ಥಿಕೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಸರ್ಕಾರವು ಇದುವರೆಗೂ ಯಾವುದೇ ದೃಢವಾದಕ್ರಮಗಳನ್ನು ಕೈಗೊಂಡಿಲ್ಲ.

Most Read Articles

Kannada
English summary
Toll operators demands for compensation from NHAI. Read in Kannada.
Story first published: Tuesday, July 7, 2020, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X