ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಕಾರುಗಳಿವು
ಕರೋನಾ ವೈರಸ್ ಇಡೀ ಪ್ರಪಂಚಕ್ಕೆ ಹಾನಿಯನ್ನುಂಟುಮಾಡಿದೆ. ಲಕ್ಷಾಂತರ ಜನರಿಗೆ ಈ ವೈರಸ್ ಸೋಂಕು ತಗುಲಿದೆ. ಈ ವೈರಸ್‌ನಿಂದಾಗಿ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯು ಕುಸಿದಿದೆ. ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದರೆ, ಕಂಪನಿಗಳು ದಿವಾಳಿಯಾಗಿವೆ.

ಭಾರತದಲ್ಲಿಯೂ ಈ ವೈರಸ್ ವೇಗವಾಗಿ ಹಾರಾಡುತ್ತಿದೆ. ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮಾರ್ಚ್ 24ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿತ್ತು. ಈ ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆಯು ಕುಸಿದಿದೆ.

ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಕೇಂದ್ರ ಸರ್ಕಾರವು ಕೆಲವು ಷರತ್ತುಗಳೊಂದಿಗೆ ಕೈಗಾರಿಕೆಗಳ ಕಾರ್ಯಾಚರಣೆಗೆ ಅವಕಾಶ ನೀಡಿತು. ಈ ಕಾರಣಕ್ಕೆ ಆಟೋಮೊಬೈಲ್ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ವಾಹನ ಉತ್ಪಾದನೆಯ ಜೊತೆಗೆ ವಾಹನ ತಯಾರಕ ಕಂಪನಿಗಳು ದೇಶದ ಅನೇಕ ಭಾಗಗಳಲ್ಲಿ ಮಾರಾಟವನ್ನು ಪುನರಾರಂಭಿಸಿದವು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಎಲ್ಲಾ ವಾಹನ ತಯಾರಕ ಕಂಪನಿಗಳು ಮೇ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿವೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಿನಲ್ಲಿ ಆಟೋ ಮೊಬೈಲ್ ಕಂಪನಿಗಳು ಭಾರೀ ಕುಸಿತವನ್ನು ಅನುಭವಿಸಿವೆ. ಆದರೂ ಮೇ ತಿಂಗಳಿನಲ್ಲಿ ಅನೇಕ ವಾಹನಗಳು ಮಾರಾಟವಾಗಿವೆ.

ಈ ಲೇಖನದಲ್ಲಿ ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಎಂಪಿವಿಗಳ ಬಗ್ಗೆ ನೋಡೋಣ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಮೊದಲ ಸ್ಥಾನದಲ್ಲಿದೆ. ಮೇ ತಿಂಗಳಿನಲ್ಲಿ ಈ ಕಾರಿನ 2,353 ಯುನಿಟ್‌ಗಳು ಮಾರಾಟವಾಗಿದ್ದರೆ, 2019ರ ಮೇ ತಿಂಗಳಿನಲ್ಲಿ 8,864 ಯುನಿಟ್‌ಗಳು ಮಾರಾಟವಾಗಿದ್ದವು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಎರಡನೇ ಸ್ಥಾನದಲ್ಲಿರುವ ಮಹೀಂದ್ರಾ ಬೊಲೆರೊದ 1,715 ಯುನಿಟ್‌ಗಳು ಮೇ ತಿಂಗಳಿನಲ್ಲಿ ಮಾರಾಟವಾಗಿವೆ. 2019ರ ಮೇ ತಿಂಗಳಿನಲ್ಲಿ ಈ ಕಾರಿನ ಒಟ್ಟು 5,947 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಮಾರಾಟ ಪ್ರಮಾಣವು 71%ನಷ್ಟು ಕಡಿಮೆಯಾಗಿದೆ.
| ಸ್ಥಾನ | ಮಾದರಿ | ಮೇ 2020 | ಮೇ 2019 | ಏರಿಕೆ ಪ್ರಮಾಣ (%) |
| 1 | ಮಾರುತಿ ಎರ್ಟಿಗಾ | 2,353 | 8,864 | -73 |
| 2 | ಮಹೀಂದ್ರಾ ಬೊಲೆರೋ | 1,715 | 5,947 | -71 |
| 3 | ರೆನಾಲ್ಟ್ ಟ್ರೈಬರ್ | 931 | 0 | - |
| 4 | ಟೊಯೊಟಾ ಇನೋವಾ ಕ್ರಿಸ್ಟಾ | 759 | 5,631 | -87 |
| 5 | ಮಾರುತಿ ಎಕ್ಸ್‌ಎಲ್ 6 | 711 | 0 | - |
| 6 | ದಟ್ಸನ್ ಗೋ ಪ್ಲಸ್ | 62 | 242 | -74 |
| 7 | ಕಿಯಾ ಕಾರ್ನಿವಾಲ್ | 50 | 0 | - |
| 8 | ಟೊಯೊಟಾ ವೆಲ್‌ಫೈರ್ | 32 | 0 | - |
| 9 | ಮಹೀಂದ್ರಾ ಮರಾಜೋ | 0 | 1,381 | -100 |
| 10 | ಮಹೀಂದ್ರಾ ಜೈಲೋ | 0 | 312 | -100 |
| 11 | ಟಾಟಾ ಹೆಕ್ಸಾ | 0 | 301 | -100 |
| 12 | ಹೋಂಡಾ ಬಿಆರ್-ವಿ | 0 | 255 | -100 |
| 13 | ರೆನಾಲ್ಟ್ ಲಾಡ್ಜಿ | 0 | 49 | -100 |

931 ಯುನಿಟ್‌ಗಳ ಮಾರಾತದೊಂದಿಗೆ ರೆನಾಲ್ಟ್ ಟ್ರೈಬರ್ 3ನೇ ಸ್ಥಾನದಲ್ಲಿದ್ದರೆ, 759 ಯುನಿಟ್ ಮಾರಾಟದೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ಮಾರುತಿ ಎಕ್ಸ್‌ಎಲ್ 6ನ ಒಟ್ಟು 711 ಯುನಿಟ್‌ಗಳು ಮೇ ತಿಂಗಳಿನಲ್ಲಿ ಮಾರಾಟವಾಗಿವೆ.
Source: Autopunditz.com


Click it and Unblock the Notifications