ಕೈಗೆಟಕುವ ಬೆಲೆಯಲ್ಲಿ ದೊರೆಯುವ ಬಿ‌ಎಸ್ 6 ಕಾರುಗಳಿವು

ಭಾರತದಲ್ಲಿ ಬಿಎಸ್ 6 ಮಾಲಿನ್ಯ ನಿಯಮಗಳನ್ನು 2020ರ ಏಪ್ರಿಲ್ 1ರಿಂದ ಜಾರಿಗೊಳಿಸಲಾಗಿದೆ. ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯ ಬಿಎಸ್ 6 ವಾಹನಗಳನ್ನು ಈ ನಿಯಮಗಳು ಜಾರಿಗೆ ಬರುವ ಮೊದಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದವು. ಉಳಿದ ಕಂಪನಿಗಳು ಇತ್ತೀಚೆಗೆ ತಮ್ಮ ಬಿಎಸ್ 6 ವಾಹನಗಳನ್ನು ಬಿಡುಗಡೆಗೊಳಿಸಿವೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಬಿ‌ಎಸ್ 6 ಕಾರುಗಳಿವು

ದೇಶಿಯ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ಕಾರುಗಳನ್ನು ಬಿಎಸ್ 6 ಎಂಜಿನ್‌ನೊಂದಿಗೆ ಅಪ್‌ಗ್ರೇಡ್‌ಗೊಳಿಸಿವೆ. ಬಿಎಸ್ 6 ಎಂಜಿನ್‌ನೊಂದಿಗೆ ಅಪ್‌ಗ್ರೇಡ್‌ ಆದ ನಂತರ ಈ ವಾಹನಗಳ ಬೆಲೆಯಲ್ಲಿ ಏರಿಕೆಯಾಗಿದೆ. ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಬಿಎಸ್ 6 ಕಾರುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಬಿ‌ಎಸ್ 6 ಕಾರುಗಳಿವು

5. ಹ್ಯುಂಡೈ ಸ್ಯಾಂಟ್ರೊ ಬಿಎಸ್ 6

ಹೊಸ ತಲೆಮಾರಿನ ಹ್ಯುಂಡೈ ಸ್ಯಾಂಟ್ರೊ ಕಾರಿನ ಬೆಲೆ ಎಕ್ಸ್ ಶೋ ರೂಂ ರೂ.4.57 ಲಕ್ಷದಿಂದ ರೂ.6.2 ಲಕ್ಷಗಳಾಗಿದೆ. ಈ ಕಾರಿನಲ್ಲಿ 1.1-ಲೀಟರ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ನೀಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಬಿ‌ಎಸ್ 6 ಕಾರುಗಳಿವು

4. ಮಾರುತಿ ಸುಜುಕಿ ಸೆಲೆರಿಯೊ ಬಿಎಸ್ 6

ಸೆಲೆರಿಯೊ, ಬಿ 1 ಸೆಗ್‌ಮೆಂಟಿನಲ್ಲಿ ಮಾರುತಿ ಸುಜುಕಿ ಕಂಪನಿಯು ಬಿಡುಗಡೆಗೊಳಿಸಿರುವ ಮೊದಲ ಕಾರ್ ಆಗಿದೆ. ಈ ಕಾರಿನಲ್ಲಿ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಈ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರಿನ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.4.41 ಲಕ್ಷದಿಂದ ರೂ.5.58 ಲಕ್ಷಗಳಾಗಿದೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಬಿ‌ಎಸ್ 6 ಕಾರುಗಳಿವು

3. ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಬಿಎಸ್ 6

ಮಾರುತಿ ಸುಜುಕಿ ಕಂಪನಿಯ ಆಲ್ಟೊ ಕಾರಿಗೆ ಪೈಪೋಟಿ ನೀಡಲು ರೆನಾಲ್ಟ್ ಕಂಪನಿಯು ಕ್ವಿಡ್ ಕಾರ್ ಅನ್ನು ಬಿಡುಗಡೆಗೊಳಿಸಿತು. ಈ ಕಾರು 0.8-ಲೀಟರ್ ಹಾಗೂ 1.0-ಲೀಟರ್ ಪೆಟ್ರೋಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಕಾರಿನ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.2.92 ಲಕ್ಷದಿಂದ ರೂ.5.01 ಲಕ್ಷಗಳಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಬಿ‌ಎಸ್ 6 ಕಾರುಗಳಿವು

2. ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಕಂಪನಿಯು ಎಸ್-ಪ್ರೆಸ್ಸೊ ಕಾರನ್ನು ಹಾರ್ಟ್‌ಟ್ರಾಕ್ ಪ್ಲಾಟ್‌ಫಾರಂನಲ್ಲಿ ತಯಾರಿಸಿದೆ. ಈ ಕಾರಿನಲ್ಲಿ 1.0-ಲೀಟರ್ ಕೆ-ಸರಣಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗಿದೆ. ಈ ಕಾರಿನ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.3.7 ಲಕ್ಷದಿಂದ ರೂ.4.99 ಲಕ್ಷಗಳಾಗಿದೆ.

ಕೈಗೆಟಕುವ ಬೆಲೆಯಲ್ಲಿ ದೊರೆಯುವ ಬಿ‌ಎಸ್ 6 ಕಾರುಗಳಿವು

1. ಮಾರುತಿ ಸುಜುಕಿ ಆಲ್ಟೊ

ಆಲ್ಟೊ ಮಾರುತಿ ಸುಜುಕಿ ಕಂಪನಿಯ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ಕಂಪನಿಯು ಈ ಕಾರಿನಲ್ಲಿ 796 ಸಿಸಿ ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಈ ಕಾರಿನ ಎಂಜಿನ್ ಮೇಂಟೆನೆನ್ಸ್ ಕಡಿಮೆಯಿದ್ದು, ವಿಶ್ವಾಸಾರ್ಹವಾಗಿದೆ. ಈ ಕಾರಿನ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.2.94 ಲಕ್ಷದಿಂದ ರೂ.4.36 ಲಕ್ಷಗಳಾಗಿದೆ.

More from DriveSpark

Article Published On: Monday, April 27, 2020, 17:05 [IST]
English summary
Top 5 affordable BS 6 cars in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+