Just In
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾರದ ಪ್ರಮುಖ ಆಟೋ ಸುದ್ದಿ: ವಾಹನಗಳ ಬೆಲೆ ಹೆಚ್ಚಳ, ಬದಲಾಗಲಿವೆ ಟೋಲ್ ಚಿತ್ರಣ, ಕಾರು ಘಟಕ ಮುಚ್ಚಿದ ಹೋಂಡಾ..
ಕರೋನಾ ವೈರಸ್ ಹಾವಳಿಯ ನಡುವೆಯೂ ಚೇತರಿಕೆ ಕಂಡಿರುವ ಭಾರತೀಯ ಆಟೋ ಉದ್ಯಮವು ಈ ವರ್ಷದಲ್ಲಿ ಹಲವಾರು ಏರಿಳಿತಗೆ ಸಾಕ್ಷಿಯಾಗಿದೆ. ಹೊಸ ವಾಹನಗಳ ಮಾರಾಟವು ಕೆಲವು ತಿಂಗಳಿನಿಂದ ಉತ್ತಮ ಬೆಳವಣಿಗೆ ಸಾಧಿಸಿದ್ದು, ಇದೀಗ ವರ್ಷಾಂತ್ಯದಲ್ಲಿ ಬೆಲೆ ಏರಿಕೆಯಲ್ಲಿ ಸಿದ್ದತೆಯಲ್ಲಿವೆ.

ಹೊಸ ವಾಹನಗಳ ಬೆಲೆ ಏರಿಕೆಯ ಜೊತೆಗೆ ಸಾರಿಗೆ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುತ್ತಿರುವ ಕೇಂದ್ರ ಸರ್ಕಾರವು ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಮಾದರಿಯ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೆ ತರಲು ಸಜ್ಜಾಗಿದೆ. ಹಾಗೆಯೇ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಮಾರುತಿ ಸುಜುಕಿ ನಿರ್ಮಾಣ ಮಾಡುತ್ತಿರುವ ಹೊಸ ಕಾರು ಮಾದರಿ, ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ಬಿಡುಗಡೆಗೆ ಸಿದ್ದತೆ, ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯದ ಸುದ್ದಿಗಳು ಕೂಡಾ ಪ್ರಮುಖವಾಗಿವೆ.

ಟೋಲ್ ಪ್ಲಾಜಾ ಮುಕ್ತಗೊಳಿಸಲು ಕೇಂದ್ರ ಸರ್ಕಾರದಿಂದ ಬೃಹತ್ ಪ್ಲ್ಯಾನ್
ಫಾಸ್ಟ್‌ಟ್ಯಾಗ್‌ಗಿಂತಲೂ ವೇಗವಾಗಿ ಶುಲ್ಕ ಸಂಗ್ರಹಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿರ್ಧರಿಸಿರುವ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಟೋಲ್ ಪ್ಲಾಜಾಗಳನ್ನು ತೆಗೆದುಹಾಕಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೊಳಿಸುತ್ತಿದ್ದು, ಹೊಸ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೆ ತರಲು ರಷ್ಯಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಟೋಲ್ ಪ್ಲಾಜಾಗಳಲ್ಲೇ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ತಂತ್ರಜ್ಞಾನ ಸೌಲಭ್ಯ ಅಳವಡಿಸಲಿರುವ ಕೇಂದ್ರ ಸರ್ಕಾರವು ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಕಡಿತಕ್ಕಾಗಿ ಟೋಲ್‌ಗಳಲ್ಲಿ ವಾಹನ ಸವಾರರು ಕಾಯುವುದನ್ನು ತಪ್ಪಿಸಲಿದೆ. ಹೊಸ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಸಂದಾಯವಾಗಲಿದ್ದು, ಜಿಪಿಎಸ್ ಟ್ರ್ಯಾಕರ್ ಈ ಎಲ್ಲಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯ
ಮಹಾರಾಷ್ಟ್ರ ರಾಜ್ಯ ಸರ್ಕಾರವು ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಈ ಹೊಸ ನಿಯಮವು ಕಮರ್ಷಿಯಲ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಅದರಂತೆ, ಶಾಲಾ, ಕಾಲೇಜು ವಾಹನಗಳು, ಟೂರ್ ಬಸ್ಸುಗಳು, ಲಾರಿ, ಟ್ರಕ್ ಸೇರಿದಂತೆ ಎಲ್ಲಾ ಕಮರ್ಷಿಯಲ್ ವಾಹನಗಳು ಟ್ರಾಕರ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ಜಿಪಿಎಸ್ ಸಾಧನಗಳು ವಾಹನಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ನೆರವಾಗುತ್ತಲ್ಲದೆ ಹೊಸ ಸೌಲಭ್ಯದಿಂದ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡುವ ಯೋಜನೆ ಹೊಂದಲಾಗಿದೆ.

ಬೆಲೆ ಹೆಚ್ಚಳಕ್ಕೆ ಸಜ್ಜಾದ ಕಾರು ಕಂಪನಿಗಳು
2021ರ ಜನವರಿ 1ರಿಂದ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮಹೀಂದ್ರಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರುಗಳು ಮತ್ತು ವಾಣಿಜ್ಯ ವಾಹನ ಬೆಲೆಯಲ್ಲಿ ಶೇ.2ರಿಂದ ಶೇ.3ರಷ್ಟು ಹೆಚ್ಚಳಕ್ಕೆ ಮಾಡುವ ಸುಳಿವು ನೀಡಿದೆ.

ಬಿಡಿಭಾಗಗಳ ಬೆಲೆ ಹೆಚ್ಚಳದಿಂದಾಗಿ ಹೊಸ ವಾಹನಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿರುವ ಕಾರು ಉತ್ಪಾದನಾ ಕಂಪನಿಗಳು ಜನವರಿ 1ರಿಂದಲೇ ಹೊಸ ದರ ಜಾರಿಗೊಳಿಸಲಿದ್ದು, ವಿವಿಧ ವೆರಿಯೆಂಟ್ ಮತ್ತು ಮಾದರಿಗಳಿಗೆ ಅನುಗುಣವಾಗಿ ಶೇ.2ರಿಂದ ಶೇ.3ರಷ್ಟು ಹೆಚ್ಚಳ ಮಾಡುವ ನಿರ್ಧಾರ ಮಾಡಿವೆ. ಮಹೀಂದ್ರಾ ಕೂಡಾ ಕಾರುಗಳು ಮತ್ತು ವಾಣಿಜ್ಯ ಬೆಲೆಯಲ್ಲಿ ಹೆಚ್ಚಳ ಮಾಡುವ ನಿರ್ಧಾರ ಪ್ರಕಟಿಸಿದ್ದು, ಹೊಸ ದರ ಪಟ್ಟಿಯನ್ನು ಜನವರಿ 1ರಂದು ಬಿಡುಗಡೆ ಮಾಡಲಿವೆ.

ಉತ್ಪಾದನಾ ಘಟಕ ಮುಚ್ಚಿದ ಹೋಂಡಾ
ಕಳೆದ ವರ್ಷ ಹೋಂಡಾ ಕಾರ್ಸ್ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಒಂದು ಘಟಕವನ್ನು ಸ್ಥಗಿತಗೊಳಿಸಲಿದೆ ಎಂದು ವರದಿಗಳಾಗಿದ್ದವು. ನೋಯ್ಡಾ ಘಟಕವನ್ನು ಮುಚ್ಚಿ ಎಲ್ಲಾ ಕೆಲಸಗಳನ್ನು ತಪುಕರ ಘಟಕಕ್ಕೆ ಸ್ಥಳಾಂತರಿಸಲಾಗುವುದು ಎಂದು ವರದಿಗಳಾಗಿದ್ದವು.

ಘಟಕಗಳನ್ನು ಪುನರ್ ರಚಿಸಲು ಹೋಂಡಾ ಕಂಪನಿಯು ಈ ಕ್ರಮ ಕೈಗೊಂಡಿದೆ. ಕಳೆದ ಎರಡು ದಶಕಗಳಿಂದ ಹೋಂಡಾ ಕಂಪನಿಯ ನೋಯ್ಡಾ ಘಟಕದಲ್ಲಿ ಹೋಂಡಾ ಕಂಪನಿಯ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು. ಆದರೆ ಕಳೆದ ತಿಂಗಳಿನಿಂದ ಈ ಘಟಕದಲ್ಲಿನ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಈ ಘಟಕದಲ್ಲಿ ಸಿಟಿ, ಸಿಆರ್-ವಿ ಹಾಗೂ ಸಿವಿಕ್ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು.

ಹೆಕ್ಟರ್ ಪ್ಲಸ್‍ನಲ್ಲಿ ಬಿಡುಗಡೆಯಾಗಲಿದೆ 7 ಸೀಟರ್ ವರ್ಷನ್
ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಶೀಘ್ರದಲ್ಲೇ ತನ್ನ ಹೆಕ್ಟರ್ ಪ್ಲಸ್ ಮಾದರಿಯಲ್ಲಿ 7 ಸೀಟರ್ ವರ್ಷನ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರು ಸಂಕ್ರಾಂತಿ ಸಂಭ್ರಮಾಚರಣೆ ವೇಳೆಗೆ ಖರೀದಿಗೆ ಲಭ್ಯವಿರಲಿದೆ.

ಹೆಕ್ಟರ್ ಪ್ಲಸ್ ಮಾದರಿಯ ಸದ್ಯ ಮಾರುಕಟ್ಟೆಯಲ್ಲಿ 6 ಆಸನ ಸೌಲಭ್ಯಗಳೊಂದಿಗೆ ಮಾರಾಟವಾಗುತ್ತಿದ್ದು, 2+2+2 ಮಾದರಿಯ ಆಸನ ಸೌಲಭ್ಯ ಪಡೆದುಕೊಂಡಿದೆ. ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ನೀಡಲಾಗಿದ್ದು, ಪ್ರತಿ ಆಸನಗಳು ಪ್ರತ್ಯೇಕ ನಿಯಂತ್ರಣ ಹೊಂದಿವೆ. ಆದರೆ ಬಹುತೇಕ ಗ್ರಾಹಕರು ಹೊಸ ಕಾರಿನಲ್ಲಿ ಏಳು ಆಸನ ಸೌಲಭ್ಯವುಳ್ಳ ಮಾದರಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಗ್ರಾಹಕರ ಬೇಡಿಕೆ ಹೊಸ ಕಾರಿನಲ್ಲಿ ಶೀಘ್ರದಲ್ಲೇ 2+3+2 ಮಾದರಿಯ ಆಸನ ಸೌಲಭ್ಯವನ್ನು ಜೋಡಣೆ ಮಾಡಲಿದೆ.

ಭರ್ಜರಿ ಬೇಡಿಕೆ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ನಿಸ್ಸಾನ್ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಇದೇ ತಿಂಗಳು 2ರಂದು ಬಿಡುಗಡೆಯಾಗಿರುವ ಮ್ಯಾಗ್ನೈಟ್ ಹೊಸ ಕಾರು ಮಾದರಿಯು ಕೇವಲ 2 ವಾರದಲ್ಲಿ ಬರೋಬ್ಬರಿ 15 ಸಾವಿರ ಬುಕ್ಕಿಂಗ್ಸ್ ಪಡೆದುಕೊಂಡಿದ್ದು, ನಿಸ್ಸಾನ್ ಮಾರಾಟ ಮಾಡುವ ಇತರೆ ಕಾರುಗಳ ಈ ವರ್ಷದ ಮಾರಾಟ ಪ್ರಮಾಣವು ಮ್ಯಾಗ್ನೈಟ್ ಮಾದರಿಯ ಬುಕ್ಕಿಂಗ್ ಪ್ರಮಾಣಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ಮಾಗ್ನೈಟ್ ಕಾರು ಮಾದರಿಯ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ನೆಲೆಕಂಡುಕೊಳ್ಳುತ್ತಿರುವ ನಿಸ್ಸಾನ್ ಕಂಪನಿಯು ಹೊಸ ಕಾರಿನೊಂದಿಗೆ ಹಲವು ದಾಖಲೆಗಳಿಗೆ ಕಾರಣವಾಗಲಿದೆ.

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ
ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು ಮುಂಬರುವ 2022ರ ಹೊತ್ತಿಗೆ ಐದು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ನೀರಿಕ್ಷೆಯಲ್ಲಿದ್ದು, ಬಲೆನೊ ಹ್ಯಾಚ್‌ಬ್ಯಾಕ್ ಆಧರಿಸಿ ನಿರ್ಮಾಣವಾಗಲಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮಾರುತಿ ಸುಜುಕಿಗೆ ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ.

ಹೊಸ ಕಾರುಗಳ ಪೈಕಿ ಬಲೆನೊ ಹ್ಯಾಚ್‌ಬ್ಯಾಕ್ ಆಧರಿಸಿ ನಿರ್ಮಾಣ ಮಾಡಲಾಗುತ್ತಿರುವ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಸದ್ಯ ವೈಟಿಬಿ ಕೋಡ್‌ನೆಮ್ ಅಡಿ ಅಭಿವೃದ್ದಿಗೊಳಿಸಲಾಗುತ್ತಿದ್ದು, ಹೊಸ ಕಾರು ಕ್ರಾಸ್ ಓವರ್ ಮತ್ತು ಕೂಪೆ ಕಾರುಗಳ ವಿನ್ಯಾಸದೊಂದಿಗೆ ಪ್ರಮುಖ ಆಕರ್ಷಣೆಯಾಗಲಿದೆ.