ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಟಾಪ್ 5 ಘಟನೆಗಳಿವು

ಕಳೆದ ವಾರ ಕಾರು ಉದ್ಯಮಕ್ಕೆ ಮೊದಲಿಗಿಂತ ಸ್ವಲ್ಪ ಆಶಾದಾಯಕವಾಗಿತ್ತು. ಉದ್ಯಮವು ಕರೋನಾ ವೈರಸ್ ಪರಿಣಾಮಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕಳೆದ ವಾರ ಹೆಚ್ಚಿನ ಕಂಪನಿಗಳ ಡೀಲರ್‌ಶಿಪ್‌ಗಳು ಮತ್ತೆ ತೆರೆದು, ವಾಹನ ಮಾರಾಟವನ್ನು ಆರಂಭಿಸಿವೆ. ಕಳೆದ ವಾರ ನಡೆದ ಆಟೋ ಮೊಬೈಲ್ ಉದ್ಯಮದ ಐದು ಪ್ರಮುಖ ಘಟನೆಗಳನ್ನು ಈ ಲೇಖನದಲ್ಲಿ ನೋಡೋಣ.

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಟಾಪ್ 5 ಘಟನೆಗಳಿವು

5. ಕಿಯಾ ಸೆಲ್ಟೋಸ್ ಹೋಮ್ ಡೆಲಿವರಿ

ಕಿಯಾ ಮೋಟಾರ್ಸ್ ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ಕಾರು ಮಾರಾಟವನ್ನು ಆರಂಭಿಸಿದೆ. ಕಾರುಗಳನ್ನು ಮನೆಗಳಿಗೆ ಅಥವಾ ಕಚೇರಿಗಳಿಗೆ ಡೆಲಿವರಿ ಮಾಡಲಿದೆ. ಇತ್ತೀಚೆಗೆ ಕಿಯಾ ಸೆಲ್ಟೋಸ್ ಕಾರಿನ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ. ಕಿಯಾ ಸೆಲ್ಟೋಸ್ ಕಾರಿನ ವಿತರಣೆಯು ದೇಶಾದ್ಯಂತ ಆರಂಭವಾಗಿದೆ.

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಟಾಪ್ 5 ಘಟನೆಗಳಿವು

4. ಮಾರುತಿ ಸುಜುಕಿ - ಟೊಯೊಟಾ ವಿಟಾರಾ ಬ್ರೆಝಾ ಒಪ್ಪಂದ

ಮಾರುತಿ ಸುಜುಕಿ ಕಂಪನಿಯು ತನ್ನ ವಿಟಾರಾ ಬ್ರೆಝಾ ಕಾರ್ ಅನ್ನು ಟೊಯೊಟಾ ಕಂಪನಿಯೊಂದಿಗೆ ಹಂಚಿಕೊಂಡಿದೆ. ಇನ್ನು ಮುಂದೆ ಟೊಯೊಟಾ ಕಂಪನಿಯು ವಿಟಾರಾ ಬ್ರೆಝಾ ಕಾರ್ ಅನ್ನು ಉತ್ಪಾದಿಸಿ ಮಾರಾಟ ಮಾಡಲಿದೆ. ಈ ಸಂಬಂಧ ಎರಡೂ ಕಂಪನಿಗಳ ನಡುವೆ 2017ರಲ್ಲಿ ಒಪ್ಪಂದ ಏರ್ಪಟ್ಟಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಟಾಪ್ 5 ಘಟನೆಗಳಿವು

3. ರೆನಾಲ್ಟ್ ಟ್ರೈಬರ್ ಆಟೋಮ್ಯಾಟಿಕ್

ರೆನಾಲ್ಟ್ ಕಂಪನಿಯು ಮೇ 18ರಂದು ಭಾರತದಲ್ಲಿ ಟ್ರೈಬರ್ ಆಟೋಮ್ಯಾಟಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರಿನ ಮಾದರಿಗಳ ಬಗ್ಗೆ ಬಿಡುಗಡೆಯಾಗುವ ಮೊದಲೇ ಮಾಹಿತಿ ಲಭ್ಯವಾಗಿದೆ. ಟ್ರೈಬರ್ ಆಟೋಮ್ಯಾಟಿಕ್ ಕಾರ್ ಅನ್ನು ಭಾರತದಲ್ಲಿ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಟಾಪ್ 5 ಘಟನೆಗಳಿವು

2. 2020ರ ಮಹೀಂದ್ರಾ ಥಾರ್ ಬಿಡುಗಡೆ ಮಾಹಿತಿ

ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ 2020ರ ಹೊಸ ಥಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರ್ ಅನ್ನು ಲಾಕ್‌ಡೌನ್ ಮುಗಿದ ನಂತರ ಬಿಡುಗಡೆಗೊಳಿಸಲಾಗುವುದು. 2020ರ ಮಹೀಂದ್ರಾ ಥಾರ್ ಅನೇಕ ಹೊಸ ಫೀಚರ್ ಹಾಗೂ ಅಪ್‌ಡೇಟ್ ಮಾಡಲಾದ ಎಂಜಿನ್ ಅನ್ನು ಹೊಂದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಟಾಪ್ 5 ಘಟನೆಗಳಿವು

1. ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್

ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ಹೊಸ ಸ್ವಿಫ್ಟ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಕಾರ್ ಅನ್ನು ಇತ್ತೀಚೆಗೆ ಜಪಾನ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಹೊಸ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹಲವಾರು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ.

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಟಾಪ್ 5 ಘಟನೆಗಳಿವು

ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೆಝಾಗಾಗಿ 25 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದಿದೆ. ಎಸ್-ಪ್ರೆಸೊ ಕಾರ್ ಅನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡಲಾಗಿದೆ. ಮಾರುತಿ ಸುಜುಕಿ ಕಂಪನಿಯು ದೇಶಾದ್ಯಂತವಿರುವ ತನ್ನ ಡೀಲರ್‌ಗಳನ್ನು ತೆರೆದಿದ್ದು, ಕಾರುಗಳ ಮಾರಾಟವನ್ನು ಪುನರಾರಂಭಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಳೆದ ವಾರ ಆಟೋ ಮೊಬೈಲ್ ಉದ್ಯಮದಲ್ಲಿ ನಡೆದ ಟಾಪ್ 5 ಘಟನೆಗಳಿವು

ಮುಂದಿನ ದಿನಗಳಲ್ಲಿ ಭಾರತದಲ್ಲಿ ಕಾರುಗಳ ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿವೆ. ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಗಳು ಹೆಚ್ಚಿನ ಸಂಖ್ಯೆಯ ಬುಕ್ಕಿಂಗ್‌ಗಳನ್ನು ಪಡೆದಿವೆ. ಮೇ ತಿಂಗಳಿನಲ್ಲಿ ಕಾರು ಮಾರಾಟದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಏಪ್ರಿಲ್ ತಿಂಗಳಿನಲ್ಲಿ ಕಾರುಗಳ ಮಾರಾಟವು ಶೂನ್ಯವಾಗಿತ್ತು.

Article Published On: Monday, May 18, 2020, 16:07 [IST]
English summary
Top car news of this week. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+