Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ ಕಾರುಗಳಿವು
ಭಾರತದಲ್ಲಿ ಕಾರು ಖರೀದಿಸುವ ಹೆಚ್ಚಿನ ಸಂಖ್ಯೆಯ ಗ್ರಾಹಕರು ಮೊದಲು ನೋಡುವುದು ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂದು. ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಮೈಲೇಜ್ ನೀಡುವ ಕಾರುಗಳಿಗೆ ಬೇಡಿಕೆಯು ಹೆಚ್ಚಾಗಿರುತ್ತದೆ.

ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೇ ಇಂಧನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಿರುವಾಗ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಅದರಲ್ಲಿಯು ಕೆಲವು ಗ್ರಾಹಕರು ಡೀಸೆಲ್ ಕಾರನ್ನು ಇಷ್ಟಪಡುತ್ತಾರೆ. ನೀವು ಡೀಸೆಲ್ ಕಾರು ಪ್ರಿಯರಾಗಿ ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ ಕಾರಿನ ಹುಡುಕಾಟದಲ್ಲಿರುವೀರಾ? ಇಲ್ಲಿವೆ ಎಆರ್‌ಎನ್ಐ ಮಾನ್ಯತೆಯ ಪ್ರಕಾರ ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ ಕಾರುಗಳ ಮಾಹಿತಿ.

ಹ್ಯುಂಡೈ ಒರಾ
ಹ್ಯುಂಡೈ ಒರಾ ಕಾರಿನಲ್ಲಿ 1.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಹ್ಯುಂಡೈ ಒರಾ ಕಾಂಪ್ಯಾಕ್ಟ್ ಸೆಡಾನ್ ಮಾದರಿಯಾಗಿದೆ. ಎಆರ್‌ಎನ್ಐ ಮಾನ್ಯತೆಯ ಪ್ರಕಾರ ಹ್ಯುಂಡೈ ಡೀಸೆಲ್ ವೆರಿಯೆಂಟ್ ಪ್ರತಿ ಲೀಟರ್‌ಗೆ 25.40 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಇನ್ನು ಹ್ಯುಂಡೈ ಒರಾ ಮ್ಯಾನುವಲ್ ವೆರಿಯೆಂಟ್ ಪ್ರತಿ ಲೀಟರ್‌ಗೆ 25.53 ಮೈಲೇಜ್ ಅನ್ನು ನೀಡುತ್ತದೆ. ಪ್ರಸ್ತುತ ಈ ಹ್ಯುಂಡೈ ಒರಾ ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.7.80 ದಿಂದ ರೂ.9.28 ಲಕ್ಷಗಳಾಗಿದೆ.

ಹ್ಯುಂಡೈ ಐ20
ಮೂರನೇ ತಲೆಮಾರಿನ ಹ್ಯುಂಡೈ ಐ20 ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಈ ಹೊಸ ಹ್ಯುಂಡೈ ಐ20 ಕಾರಿನಲ್ಲಿ 1.5 ಲೀಟರ್, ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಎಆರ್‌ಎನ್ಐ ಮಾನ್ಯತೆಯ ಪ್ರಕಾರ, ಹೊಸ ಹ್ಯುಂಡೈ ಐ20 ಕಾರು ಪ್ರತಿ ಲೀಟರ್‌ಗೆ 25.2 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೊಸ ಹ್ಯುಂಡೈ ಐ20 ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.8.20 ದಿಂದ ರೂ.10.60 ಲಕ್ಷಗಳಾಗಿದೆ.

ಟಾಟಾ ಆಲ್‌ಟ್ರೊಜ್
ದೇಶಿಯ ಬ್ರ್ಯಾಂಡ್ ಟಾಟಾ ಸಂಸ್ಥೆಯ ಆಲ್‌ಟ್ರೊಜ್ ಅತಿ ಉತ್ತಮ ಡೀಸೆಲ್ ಮಾದರಿಗಳಲ್ಲಿ ಒಂದಾಗಿದೆ. ಈ ಹೊಸ ಟಾಟಾ ಆಲ್‌ಟ್ರೊಜ್ ಕಾರಿನಲ್ಲಿ 1.5 ಲೀಟರ್ ಎಂಜಿನ್ ಅನ್ನು ಅಳಡಿಸಲಾಗಿದೆ. ಈ ಎಂಜಿನ್ ಅನ್ನು 5-ಸ್ಫೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಎಆರ್‌ಎನ್ಐ ಮಾನ್ಯತೆಯ ಪ್ರಕಾರ, ಹೊಸ ಟಾಟಾ ಆಲ್‌ಟ್ರೊಜ್ ಕಾರು ಪ್ರತಿ ಲೀಟರ್‌ಗೆ 25.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್
ಹ್ಯುಂಡೈ ಕಂಪನಿಯ ಗ್ರ್ಯಾಂಡ್ ಐ 10 ನಿಯೋಸ್ ಕಾರಿನಲ್ಲಿ 1.2-ಲೀಟರ್ ಯು2 ಸಿಆರ್ಡಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 75 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಬರುತ್ತದೆ.

ಎಆರ್‌ಎನ್ಐ ಮಾನ್ಯತೆಯ ಪ್ರಕಾರ, ಹೊಸ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಮ್ಯಾನುವಲ್ ವೆರಿಯೆಂಟ್ ಪ್ರತಿ ಲೀಟರ್‌ಗೆ 25.1 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆದರೆ ಡೀಸೆಲ್-ಎಎಂಟಿ ವೆರಿಯೆಂಟ್ ಮೈಲೇಜ್ ಅಂಕಿ ಅಂಶವು ಇನ್ನು ಬಹಿರಂಗವಾಗಿಲ್ಲ.

ಹ್ಯುಂಡೈ ವೆರ್ನಾ
ಹ್ಯುಂಡೈ ಕಂಪನಿಯ ಮಿಡ್ ಸೆಡಾನ್ ಆದ ವೆರ್ನಾ ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಂಜಿನ್ ನೊಂದಿಗೆ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರು ಪ್ರತಿ ಲೀಟರ್‌ಗೆ 25 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ.

ಮೈಲೇಜ್ ವಿಷಯಕ್ಕೆ ಬಂದರೆ ಮಾರುತಿ ಸುಜುಕಿ ಕಂಪನಿಯ ಕಾರುಗಳೇ ಅಗ್ರಸ್ಥಾನಾದಲ್ಲಿರುತ್ತದೆ. ಆದರೆ ಮಾರುತಿ ಸುಜುಕಿ ಕಾರುಗಳು ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಹ್ಯುಂಡೈ ಕಾರುಗಳು ಅತಿ ಹೆಚ್ಚು ಮೈಲೇಜ್ ಡೀಸೆಲ್ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಹೇಳಬಹುದು.