ಆಟೋಮೊಬೈಲ್ ಉದ್ಯಮದ ಟಾಪ್ 5 ಸುದ್ದಿಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಕಳೆದ ಈ ವಾರವೂ ಸಹ ಹಲವಾರು ವಾಹನಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರ ಜೊತೆಗೆ ಹಲವು ಹೊಸ ವಾಹನಗಳ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ವಾಹನಗಳ ಬುಕ್ಕಿಂಗ್ ಕೂಡ ಆರಂಭಿಸಲಾಗಿದೆ. ಮುಂದಿನ ತಿಂಗಳು ಹಲವಾರು ವಾಹನಗಳು ಬಿಡುಗಡೆಯಾಗಲಿವೆ.

ಆಟೋಮೊಬೈಲ್ ಉದ್ಯಮದ ಟಾಪ್ 5 ಸುದ್ದಿಗಳಿವು

5. ಹೊಸ ಸ್ಕೋಡಾ ಆಕ್ಟೇವಿಯಾ

ಸ್ಕೋಡಾ ಕಂಪನಿಯು ಭಾರತದಲ್ಲಿ ಹೊಸ ಆಕ್ಟೇವಿಯಾ ಕಾರಿನ ಸ್ಪಾಟ್ ಟೆಸ್ಟ್ ಆರಂಭಿಸಿದೆ. ಬಹಿರಂಗವಾಗಿರುವ ಚಿತ್ರಗಳಲ್ಲಿ, ಹೊಸ ಆಕ್ಟೇವಿಯಾ ಕಾರಿನ ವಿನ್ಯಾಸವನ್ನು ಕಾಣಬಹುದು. ಪುಣೆಯಲ್ಲಿ ಟೆಸ್ಟ್ ಮಾಡುವ ಸಂದರ್ಭದಲ್ಲಿ ಈ ಕಾರಿನ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಹೊಸ ಆಕ್ಟೇವಿಯಾ ಆರ್ ಎಸ್ ಕಾರ್ ಅನ್ನು 2021ರ ಆರಂಭದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಆಟೋಮೊಬೈಲ್ ಉದ್ಯಮದ ಟಾಪ್ 5 ಸುದ್ದಿಗಳಿವು

4. ಹೊಸ ಟೊಯೊಟಾ ಫಾರ್ಚೂನರ್

ಹೊಸ ಟೊಯೊಟಾ ಫಾರ್ಚೂನರ್ ಕಾರ್ ಅನ್ನು ಕೆಲ ದಿನಗಳ ಹಿಂದಷ್ಟೇ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರು ಹಲವಾರು ಬದಲಾವಣೆಗಳನ್ನು ಹೊಂದಿರಲಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಆಟೋಮೊಬೈಲ್ ಉದ್ಯಮದ ಟಾಪ್ 5 ಸುದ್ದಿಗಳಿವು

3. ಮಾರುತಿ ಸುಜುಕಿ ಎಸ್-ಕ್ರಾಸ್

ಮಾರುತಿ ಸುಜುಕಿ ಕಂಪನಿಯು ದೇಶಾದ್ಯಂತ ಎಸ್-ಕ್ರಾಸ್ ಪೆಟ್ರೋಲ್ ಕಾರಿನ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಈ ಕಾರ್ ಅನ್ನು ದೇಶಾದ್ಯಂತವಿರುವ 370ಕ್ಕೂ ಹೆಚ್ಚು ನೆಕ್ಸಾ ಡೀಲರ್ ಶಿಪ್ ಗಳಲ್ಲಿ ಅಥವಾ ಕಂಪನಿಯ ವೆಬ್‌ಸೈಟ್‌ ಮೂಲಕ ರೂ.11,000 ಪಾವತಿಸಿ ಬುಕ್ ಮಾಡಬಹುದು.

ಆಟೋಮೊಬೈಲ್ ಉದ್ಯಮದ ಟಾಪ್ 5 ಸುದ್ದಿಗಳಿವು

2. ಕಿಯಾ ಸೊನೆಟ್

ಕಿಯಾ ಸೊನೆಟ್ ಆಗಸ್ಟ್ 7ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಈ ಕಾರಿನ ಮೊದಲ ಟೀಸರ್ ಬಿಡುಗಡೆಗೊಳಿಸಲಾಗಿದೆ. ಇತ್ತೀಚೆಗಷ್ಟೇ ಕಿಯಾ ಸೊನೆಟ್ ನ ಪ್ರೊಡಕ್ಷನ್ ರೆಡಿ ಫೋಟೋಗಳನ್ನು ಬಹಿರಂಗಪಡಿಸಲಾಗಿತ್ತು. ಈ ಫೋಟೋಗಳಲ್ಲಿ ಕಾರಿನ ಹಿಂಭಾಗದ ಪ್ರೊಫೈಲ್ ಅನ್ನು ಕಾಣಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆಟೋಮೊಬೈಲ್ ಉದ್ಯಮದ ಟಾಪ್ 5 ಸುದ್ದಿಗಳಿವು

1. ಹೊಸ ಹ್ಯುಂಡೈ ವೆನ್ಯೂ ಬಿಡುಗಡೆ

ಹ್ಯುಂಡೈ ಕಂಪನಿಯು ಹೊಸ ವೆನ್ಯೂವನ್ನು ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ಹ್ಯುಂಡೈ ವೆನ್ಯೂ ಕಾರ್ ಅನ್ನು ಎಸ್‌ಎಕ್ಸ್ ಹಾಗೂ ಎಸ್‌ಎಕ್ಸ್ (ಒ) ಮಾದರಿಗಳಲ್ಲಿ ಐಎಂಟಿ ಗೇರ್‌ಬಾಕ್ಸ್‌ನೊಂದಿಗೆ ಮಾರಾಟ ಮಾಡಲಾಗುವುದು. ಎಸ್‌ಎಕ್ಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.99 ಲಕ್ಷಗಳಾದರೆ, ಎಸ್‌ಎಕ್ಸ್ (ಒ) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.11.08 ಲಕ್ಷಗಳಾಗಿದೆ.

ಆಟೋಮೊಬೈಲ್ ಉದ್ಯಮದ ಟಾಪ್ 5 ಸುದ್ದಿಗಳಿವು

ಇದರ ಜೊತೆಗೆ ಕಂಪನಿಯು ವೆನ್ಯೂವಿನ ಸ್ಪೋರ್ಟ್ ಮಾದರಿಯನ್ನು ಸಹ ಬಿಡುಗಡೆಗೊಳಿಸಿದೆ. ಪೆಟ್ರೋಲ್ ಮಾದರಿಯ ಹ್ಯುಂಡೈ ವೆನ್ಯೂ ಸ್ಪೋರ್ಟ್ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.20 ಲಕ್ಷಗಳಾದರೆ, ಡೀಸೆಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.11.52 ಲಕ್ಷಗಳಾಗಿದೆ. ಸ್ಪೋರ್ಟ್ ಮಾದರಿಯನ್ನು ಎಸ್ಎಕ್ಸ್, ಎಸ್ಎಕ್ಸ್ (ಒ) ಹಾಗೂ ಎಸ್ಎಕ್ಸ್ ಪ್ಲಸ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

Most Read Articles

Kannada
English summary
Top five news of the auto mobile industry during last week. Read in Kannada.
Story first published: Monday, July 27, 2020, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X