ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

2020ರ ಜನವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಪಟ್ಟಿ ಬಹಿರಂಗವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಕಳೆದ ಜನವರಿ ತಿಂಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಪಟ್ಟಿ ಇಲ್ಲಿವೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಡಿಜೈರ್

ಈ ಕಾಂಪ್ಯಾಕ್ಟ್ ಸೆಡಾನ್ ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಜನವರಿ ತಿಂಗಳಲ್ಲಿ ಈ ಕಾಂಪ್ಯಾಕ್ಟ್ ಸೆಡಾನ್‍ನ ಒಟ್ಟು 22,406 ಯು‍‍ನಿಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಜನವರಿಗೆ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ.17ರಷ್ಟು ಬೆಳವಣಿಗೆ ಸಾಧಿಸಿದೆ. ಕಳೆದ ಎರಡು ವರ್ಷಗಳಿಂದ ಪ್ರತಿ ತಿಂಗಳು ಮಾರುತಿ ಡಿಜೈರ್ ಕಾರು ಟಾಪ್-5 ಸ್ಥಾನಗಳಲ್ಲಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಅಮೇಜ್ ಮತ್ತು ಫೋಕ್ಸ್ ವ್ಯಾಗನ್ ಅಮಿಯೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಮಾರುತಿ ಬಾಲೆನೊ

ಮಾರುತಿ ಬಾಲೆನೊ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರ್ಯಾಂಡ್‍‍ನ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಆಗಿದೆ. ಕಳೆದ ಜನವರಿ ತಿಂಗಳಲ್ಲಿ ಈ ಕಾರಿನ 20,485 ಯು‍‍ನಿಟ್‍‍ಗಳು ಮಾರಾಟವಾಗಿವೆ. ಕಳೆದ ಜನವರಿ ತಿಂಗಳಿಗೆ ಹೋಲಿಸಿದರೆ ಶೇ.23 ರಷ್ಟು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದೆ. ಮಾರುತಿ ಬಾಲೆನೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಗ್ಲಾಂಝಾ, ಫೋಕ್ಸ್ ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಸ್ವಿಫ್ಟ್ ದೇಶದ ಅತ್ಯಂತ ಜನಪ್ರಿಯ ಹ್ಯಾಚ್‍‍ಬ್ಯಾಕ್‍‍ಗಳಲ್ಲಿ ಒಂದಾಗಿದೆ. ಕಳೆದ ಜನವರಿ ತಿಂಗಳಲ್ಲಿ ಮಾರುತಿ ಸ್ವಿಫ್ಟ್ ಕಾರಿನ 19,981 ಯುನಿ‍‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ ಶೇ.6 ರಷ್ಟು ಮಾರಾಟದಲ್ಲಿ ಬೆಳವಣಿಗೆ ಕಂಡಿದೆ. ಹೊಸ ಸ್ವಿಫ್ಟ್ ಹೈಬ್ರಿಡ್ ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪರಿಚಯಿಸಿದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಆಲ್ಟೋ

ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಆದ ಮಾರುತಿ ಸುಜುಕಿ ಆಲ್ಟೋ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಕಳೆದ ಜನವರಿ ತಿಂಗಳಲ್ಲಿ ಈ ಕಾರಿನ 23,360 ಯು‍‍ನಿ‍‍ಟ್‍‍ಗಳು ಮಾರಾಟವಾಗಿವೆ. ಆದರೆ ಕಳೆದ ವರ್ಷದ ಜನವರಿಗೆ ತಿಂಗಳಿಗೆ ಹೋಲಿಸಿದರೆ ಶೇ.19ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಈ ಮಾರುತಿ ಆಲ್ಟೋ ಕಾರು ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕ್ವಿಡ್ ಮತ್ತು ದಟ್ಸನ್ ರೆಡಿ-ಗೋ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಮಾರುತಿ ವ್ಯಾಗನ್‍ಆರ್

ಈ ಟಾಲ್ ಬಾಯ್ ಎಂದು ಕರೆಯಲ್ಪಡುವ ವ್ಯಾಗನ್‍ಆರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಕಳೆದ ಜನವರಿ ತಿಂಗಳಲ್ಲಿ ಈ ಕಾರಿನ 15,232 ಯು‍‍ನಿಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ ಶೇ.52ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಕಿಯಾ ಸೆಲ್ಟೋಸ್

ಈ ಕಾಂಪ್ಯಾಕ್ಟ್ ಎಸ್‍‍ಯುವಿಯನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕಿಯಾ ಸೆಲ್ಟೋಸ್ ಬಿಡುಗಡೆಯಾದ ನಂತರ ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿತು. ಸೆಲ್ಟೋಸ್ ಎಸ್‍ಯುವಿಯ ಸ್ಪೋರ್ಟಿ ಲುಕ್, ನೂತನ ಫೀಚರ್ಸ್‍‍ಗಳು ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಎಂಜಿನ್‍ ಅನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರ ಗಮನಸೆಳೆಯಿತು. ಕಳೆದ ಜನವರಿ ತಿಂಗಳಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯ 15,000 ಯುನಿ‍‍ಟ್‍‍ಗಳು ಮಾರಾಟವಾಗಿವೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಕೋ

ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಮಾರುತಿ ಇಕೋ ಏಳನೇ ಸ್ಥಾನವನ್ನು ಪಡೆದಿದೆ. ಕಳೆದ ಜನವರಿ ತಿಂಗಳಲ್ಲಿ ಇಕೋ ಕಾರಿನ 12,324 ಯುನಿ‍‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ.36ರಷ್ಟು ಬೆಳವಣಿಗೆಯನ್ನು ಕಂಡಿದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಈ ಕಾಂಪ್ಯಾಕ್ಟ್ ಎಸ್‍ಯುವಿಯ ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ಜನವರಿಗೆ ತಿಂಗಳಲ್ಲಿ ಮಾರುತಿ ವಿಟಾರಾ ಬ್ರೆಝಾ ಎಸ್‍‍ಯುವಿಯ 10,134 ಯುನಿ‍ಟ್‍‍ಗಳ ಮಾರಾಟವಾಗಿವೆ. ಕಳೆದ ವರ್ಷದ ಜನವರಿ ತಿಂಗಳ ಮಾರಾಟವನ್ನು ಹೋಲಿಸಿದರೆ ಶೇ. 23ರಷ್ಟು ಕುಸಿತ ಕಂಡಿದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಹ್ಯುಂಡೈ ಗ್ರ್ಯಾಂಡ್ ಐ10

ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳ ಪಟ್ಟಿಯಲ್ಲಿ ಹ್ಯುಂಡೈ ಗ್ರ್ಯಾಂಡ್ ಐ10 ಸ್ಥಾನ ಪಡೆಯುವಲ್ಲಿ ಯಶ್ವಸಿಯಾಗಿದೆ. ಕಳೆದ ಜನವರಿಗೆ ತಿಂಗಳಲ್ಲಿ ಗ್ರ್ಯಾಂಡ್ ಐ10 ಹ್ಯಾಚ್‍‍ಬ್ಯಾಕ್‍‍ನ 8774 ಯು‍‍ನಿ‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಜನವರಿ ತಿಂಗಳ ಮಾರಾಟವನ್ನು ಹೋಲಿಸಿದರೆ ಶೇ.15ರಷ್ಟು ಕುಸಿತ ಕಂಡಿದೆ. ಕಳೆದ ತಿಂಗಳು ಹ್ಯುಂಡೈ ಕಂಪನಿಯ ಕಾರುಗಳ ಸರಣಿಯಲ್ಲಿ ಹೆಚ್ಚು ಮಾರಾಟವಾದ ಮಾದರಿ ಇದಾಗಿದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಹ್ಯುಂಡೈ ಎಲೈಟ್ ಐ20

ಕಳೆದ ಎರಡು ತಿಂಗಳುಗಳಲ್ಲಿ ಹ್ಯುಂಡೈ ಎಲೈಟ್ ಐ20 ಕಾರಿನ ಮಾರಾಟವು ತೀವ್ರವಾಗಿ ಕುಸಿದಿದೆ. ಕಳೆದ ಜನವರಿ ತಿಂಗಳಲ್ಲಿ ಹ್ಯುಂಡೈ ಎಲೈಟ್ ಐ20 ಕಾರಿನ 8,137 ಯುನಿ‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಜನವರಿ ತಿಂಗಳಲ್ಲಿ ಹ್ಯುಂಡೈ ಎಲೈಟ್ ಕಾರಿನ ಮಾರಾಟವು ಶೇ.31ರಷ್ಟು ಕುಸಿದಿದೆ.

ಕಾರು ಮಾರಾಟದಲ್ಲಿ ಪಾರುಪತ್ಯ ಮುಂದುವರೆಸಿದ ಮಾರುತಿ ಸುಜುಕಿ

ಒಟ್ಟಾರೆಯಾಗಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಹಲವಾರು ಜನಪ್ರಿಯ ಕಾರು ಉತ್ಪಾದನಾ ಕಂಪನಿಗಳು ಹಲವು ಮಾದರಿಗಳನ್ನು ಪ್ರದರ್ಶಿಸಿದೆ. ಈ ಮಾದರಿಗಳು ಬಿಡುಗಡೆಯ ಬಳಿಕ ಮಾರುತಿ ಸುಜುಕಿ ಕಂಪನಿಗೆ ಉತ್ತಮ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
Top-Selling Cars In India For January 2020: Kia Seltos Regains Best-Selling SUV Title. Read in Kannada.
Story first published: Tuesday, February 11, 2020, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X