ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

2020ರ ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಎಸ್‍ಯುವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‍ಯುವಿಗಳ ಪಟ್ಟಿಯಲ್ಲಿ ಕಿಯಾ ಸೆಲ್ಟೋಸ್ ಪಾರುಪತ್ಯ ಸಾಧಿಸಿದೆ.

ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್

ಕಳೆದ ಮಾರ್ಚ್ ತಿಂಗಳಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯ 7,466 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಭಾರತದ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಕಿಯಾ ಸೆಲ್ಟೋಸ್ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಕಿಯಾ ಸೆಲ್ಟೊಸ್ ಎಸ್‍ಯುವಿಯು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು 81,784 ಯುನಿಟ್‌ಗಳು ಮಾರಾಟವಾಗಿವೆ.

ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

ಹ್ಯುಂಡೈ ಕ್ರೆಟಾ

ಹೆಚ್ಚು ಮಾರಾಟವಾಗುವ ಟಾಪ್-10 ಎಸ್‍ಯುವಿಗಳ ಪಟ್ಟಿಯಲ್ಲಿ ಕಿಯಾ ಸೆಲ್ಟೋಸ್ ನಂತರದ ಸ್ಥಾನವನ್ನು ಹ್ಯುಂಡೈ ಕ್ರೆಟಾ ಎಸ್‍ಯುವಿಯು ಪಡೆದುಕೊಂಡಿದೆ. ಹ್ಯುಂಡೈ ಕಂಪನಿಯು ಹೊಸ ತಲೆಮಾರಿನ ಕ್ರೆಟಾ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯ 6,706 ಯುನಿಟ್‌ಗಳು ಮಾರಾಟವಾಗಿವೆ.

ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

ಹ್ಯುಂಡೈ ವೆನ್ಯೂ

ಟಾಪ್-10 ಎಸ್‍ಯುವಿಗಳ ಮಾರಾಟದ ಪಟ್ಟಿಯಲ್ಲಿ ಹ್ಯುಂಡೈ ವೆನ್ಯೂ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ, ಹ್ಯುಂಡೈ ವೆನ್ಯೂ ಭಾರತದ ಅತ್ಯುತ್ತಮ ಕಾಂಪ್ಯಾಕ್ಟ್ ಎಸ್‍ಯುವಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಹ್ಯುಂಡೈ ವೆನ್ಯೂ ಎಸ್‍ಯುವಿಯ 6,127 ಯುನಿಟ್‌ಗಳು ಮಾರಾಟವಾಗಿವೆ. ಹ್ಯುಂಡೈ ವೆನ್ಯೂ ತನ್ನ ಪ್ರತಿಸ್ಪರ್ಧಿ ಮಾರುತಿ ವಿಟಾರಾ ಬ್ರೆಝಾ ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿದೆ.

ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

ಮಾರುತಿ ವಿಟಾರಾ ಬ್ರೆಝಾ ಎಸ್‍ಯುವಿ

ಮಾರುತಿ ವಿಟಾರಾ ಬ್ರೆಝಾ ಎಸ್‍ಯುವಿಯು ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಕಂಪನಿಯು ವಿಟಾರಾ ಬ್ರೆಝಾ ಎಸ್‍ಯುವಿಯ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಮಾರುತಿ ವಿಟಾರಾ ಬ್ರೆಝಾ ಎಸ್‍ಯುವಿಯ 5,513 ಯುನಿಟ್‌ಗಳು ಮಾರಾಟವಾಗಿವೆ.

ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

ಟಾಟಾ ನೆಕ್ಸಾನ್

ಟಾಟಾ ಕಂಪನಿಯು ಹೊಸ ನೆಕ್ಸಾನ್ ಎಸ್‍ಯುವಿಯನ್ನು ನವೀಕರಿಸಿ ಬಿಡುಗಡೆಗೊಳಿಸಲಾಗಿದೆ. ಇನ್ನು ಟಾಪ್-10 ಎಸ್‍ಯುವಿಗಳ ಮಾರಾಟದ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಎಸ್‍ಯುವಿಯು ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಟಾಟಾ ನೆಕ್ಸಾನ್ ಎಸ್‍ಯುವಿಯ 2,646 ಯುನಿಟ್‌ಗಳು ಮಾರಾಟವಾಗಿವೆ.

ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

ಫೋರ್ಡ್ ಇಕೋಸ್ಪೋರ್ಟ್

ಅತಿ ಹೆಚ್ಚುಮಾರಾಟವಾಗುವ ಎಸ್‍ಯುವಿಗಳ ಪಟ್ಟಿಯಲ್ಲಿ ಪೋರ್ಡ್ ಇಕೋಸ್ಪೋರ್ಟ್ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಇಕೋಸ್ಪೋರ್ಟ್ ಎಸ್‍ಯುವಿಯ 2,197 ಯುನಿಟ್‌ಗಳು ಮಾರಾಟವಾಗಿವೆ.

ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

ಎಂಜಿ ಹೆಕ್ಟರ್

ಈ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಎಂ.ಜಿ ಹೆಕ್ಟರ್ ಪಡೆದುಕೊಂಡಿದೆ. ಕಿಯಾ ಸೆಲ್ಟೋಸ್ ಎಸ್‍ಯುವಿಯ ಪ್ರತಿಸ್ಪರ್ಥಿಯಾ ಎಂಜಿ ಹೆಕ್ಟರ್ ಎಸ್‍ಯುವಿಯ 1,402 ಯುನಿಟ್‌ಗಳು ಮಾರಾಟವಾಗಿವೆ.

ಎಸ್‍ಯುವಿ ಸೆಗ್‍ಮೆಂಟ್ ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ ಕಿಯಾ ಸೆಲ್ಟೋಸ್

ಈ ಪಟ್ಟಿಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಎಕ್ಸ್‌ಯುವಿ 300 ಮತ್ತು ಟಾಟಾ ಹ್ಯಾರಿಯರ್ ಎಸ್‍ಯುವಿಗಳು ಕ್ರಮವಾಗಿ ಕೊನೆಯ ಮೂರು ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಟೂಯೊಟಾ ಫಾರ್ಚೂನರ್, ಎಸ್‍ಯುವಿಯ 1,100 ಯುನಿಟ್‌ಗಳು, ಮಹೀಂದ್ರಾ ಎಕ್ಸ್‌ಯುವಿ 300 ಎಸ್‍ಯುವಿಯ 814 ಯುನಿಟ್‌ಗಳು ಮತ್ತು ಟಾಟಾ ಹ್ಯಾರಿಯರ್ ಎಸ್‍ಯುವಿಯ 632 ಯುನಿಟ್‌ಗಳು ಮಾರಾಟವಾಗಿವೆ.

Article Published On: Saturday, April 4, 2020, 18:15 [IST]
English summary
Top-Selling SUVs In India In March 2020: Kia Seltos Continues To Dominate. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+