ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ಯಾಮ್ರಿ ಕಾರು

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಹೊಸ ಕ್ಯಾಮ್ರಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಟೊಯೂಟಾ ಕ್ಯಾಮ್ರಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.37.88 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರು

ಈ ಹೂಸ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಸುಮಾರು ರೂ.93,000 ದಷ್ಟು ಹೆಚ್ಚಿಸಲಾಗಿದೆ. ಹೊಸ ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರಿನಲ್ಲಿ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೇನೆಮೆಂಟ್ ಸಿಸ್ಟಂ, ಜೆಬಿಎಲ್ ಆಡಿಯೊ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಆಗಿ ಹೋಂದಾಣಿಕೆ ಮಾಡಬಹುದಾದ ಫ್ರಂಟ್ ಪ್ಯಾಸೆಂಜರ್ ಸೀಟ್ ಮತ್ತು ಡ್ರೈವರ್ ಸೀಟ್ ಮತ್ತು ಹೆಡ್-ಅಪ್ ಡಿಸ್ ಪ್ಲೇಯನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರು

ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಪವರ್-ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ಕಾಲಂ, ಹಿಂಭಾಗದ ಸನ್-ಬ್ಲೈಂಡ್ಸ್ ಮತ್ತು ಪ್ಯಾನರೊಮಿಕ್ ಸನ್‌ರೂಫ್ ಅನ್ನು ಸಹ ಒಳಗೊಂಡಿದೆ.

MOST READ: ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರು

ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ ಎಂದು ಹೇಳಬಹುದು. ಈ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಒಂಬತ್ತು ಏರ್‌ಬ್ಯಾಗ್‌ಗಳು, ಎಬಿಎಸ್ ವಿಥ್ ಇಬಿಡಿ, ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್‌ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಫಂಕ್ಷನ್ ಅನ್ನು ಅಳವಡಿಸಿದೆ.

ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರು

ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಅದೇ 2.5-ಲೀಟರ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದು ಸೆಟಪ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿರುವ 4×4 ಆಫ್ ರೋಡ್ ಎಸ್‍ಯುವಿಗಳಿವು

ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರು

ಇದರಲ್ಲಿ ಪೆಟ್ರೋಲ್ ಎಂಜಿನ್ 176 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಇನ್ನು ಎಲೆಕ್ಟ್ರಿಕ್ ಮೋಟಾರ್ 118 ಬಿಹೆಚ್‍ಪಿ ಪವರ್ ಮತ್ತು 202 ಎನ್ಎಂ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರು

ಹೊಸ ಟೊಯೊಟಾ ಕ್ಯಾಮ್ರಿ ಕಾರು ವೈಟ್, ಸ್ವಿಲರ್, ರೆಡ್, ಬ್ರೌನ್, ಗ್ರಾಫೈಟ್ ಮತ್ತು ಶೇಡ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹೊಸ ಟೊಯೊಟಾ ಕ್ಯಾಮ್ರಿ ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಸೂಪರ್ಬ್ ಟಿಎಸ್‌ಐ ಕಾರಿಗೆ ಪೈಫೋಟಿ ನೀಡುತ್ತದೆ.

MOST READ: ಬಿಡುಗಡೆಯಾಯ್ತು ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಟಿಎಸ್‌ಐ ಲಿಮಿಟೆಡ್ ಎಡಿಷನ್ ಮಾದರಿಗಳು

ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರು

ಇದರೊಂದಿಗೆ ಟೊಯೊಟಾ ಕಂಪನಿಯು ಫಾರ್ಚೂನರ್ ಫೇಸ್‌ಲಿಫ್ಟ್‌ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಫಾರ್ಚೂನರ್ ಫೇಸ್‌ಲಿಫ್ಟ್‌ ಕಾರನ್ನು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ರಾಮ್ರಿ ಕಾರು

ಈ ಹೂಸ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಸುಮಾರು ರೂ.93,000 ದಷ್ಟು ಹೆಚ್ಚಿಸಿದ್ದಾರೆ. ಹೊಸ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ಎಂಜಿನ್ ನವೀಕರಣದೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ.

More from DriveSpark

Article Published On: Wednesday, May 13, 2020, 17:07 [IST]
English summary
New (2020) Toyota Camry BS6 Launched In India. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+