ದೀಪಾವಳಿ ಸಂಭ್ರಮ: ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ದಸರಾ ಸಂಭ್ರಮದ ವೇಳೆ ನೀರಿಕ್ಷೆಗೂ ಮೀರಿ ಹೊಸ ವಾಹನಗಳನ್ನು ಮಾರಾಟ ಮಾಡಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಮುಂಬರುವ ದೀಪಾವಳಿ ಸಂಭ್ರಮದಲ್ಲೂ ಹೆಚ್ಚಿನ ಮಟ್ಟದ ವಾಹನ ಮಾರಾಟ ನೀರಿಕ್ಷೆಯಲ್ಲಿದ್ದು, ಹೊಸ ಖರೀದಿಯನ್ನು ಆಕರ್ಷಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿವೆ.

ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ಲಾಕ್‌ಡೌನ್‌ ವಿಧಿಸಿದ್ದ ಅವಧಿಯಿಂದಲೂ ಹೊಸ ವಾಹನಗಳ ಮಾರಾಟದಲ್ಲಿ ನಷ್ಟ ಅನುಭವಿಸುತ್ತಲೇ ಬಂದಿದ್ದ ಆಟೋ ಉತ್ಪಾದನಾ ಕಂಪನಿಗಳಿಗೆ ದಸರಾ ಸಂಭ್ರಮವು ನೀರಿಕ್ಷೆಗೂ ಮೀರಿ ಆದಾಯ ತಂದುಕೊಟ್ಟಿದ್ದು, ಕಳೆದ ತಿಂಗಳು ಹೊಸ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಟೊಯೊಟಾ ಕಂಪನಿಯು ಕೂಡಾ ಅಕ್ಟೋಬರ್ ಅವಧಿಯಲ್ಲಿ ಭಾರೀ ಪ್ರಮಾಣದ ವಾಹನ ಮಾರಾಟ ಮಾಡಿದ್ದು, ಕಳೆದ ತಿಂಗಳಿಗಿಂತಲೂ ಶೇ.52ರಷ್ಟು ಹೆಚ್ಚಿನ ಪ್ರಮಾಣದ ಕಾರು ಮಾರಾಟ ಮಾಡಿದೆ.

ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ದಸರಾ ಪ್ರಯುಕ್ತ ಘೋಷಣೆ ಮಾಡಲಾಗಿದ್ದ ವಿವಿಧ ಡಿಸ್ಕೌಂಟ್‌ಗಳು ಮತ್ತು ಸರಳ ಸಾಲಸೌಲಭ್ಯಗಳು ಹೊಸ ವಾಹನ ಮಾರಾಟ ಸುಧಾರಣೆಗೆ ಪ್ರಮುಖ ಕಾರಣವಾಗಿದ್ದು, ಇದೀಗ ದೀಪಾವಳಿ ಸಂಭ್ರಮದಲ್ಲೂ ಹೆಚ್ಚಿನ ಮಟ್ಟದ ವಾಹನ ಮಾರಾಟ ನೀರಿಕ್ಷೆಗಳಿವೆ.

ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ದೀಪಾವಳಿ ವಿಶೇಷತೆಗಾಗಿ ಮತ್ತಷ್ಟು ಹೊಸ ಆಫರ್‌ಗಳನ್ನು ಘೋಷಣೆ ಮಾಡಿರುವ ಟೊಯೊಟಾ ಕಂಪನಿಯು ಆಯ್ದ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಯ್ಕೆಗಳೊಂದಿಗೆ ಡಿಸ್ಕೌಂಟ್ ಆಫರ್ ನೀಡುತ್ತಿದ್ದು, ಹೊಸದಾಗಿ ಬಿಡುಗಡೆಯಾದ ಗ್ಲಾಂಝಾ ಕಾರು ಮಾದರಿಯ ಮೇಲೂ ಆಫರ್ ಘೋಷಣೆ ಮಾಡಲಾಗಿದೆ. ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಗರಿಷ್ಠ ರೂ. 65 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ಗ್ಲಾಂಝಾ ಕಾರು ಖರೀದಿ ಮೇಲೆ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.10 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5 ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಲಭ್ಯವಿದ್ದಲ್ಲಿ ಯಾರಿಸ್ ಸೆಡಾನ್ ಕಾರು ಖರೀದಿ ಮೇಲೆ ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 20 ಕಾರ್ಪೊರೇಟ್ ಡಿಸ್ಕೌಂಟ್‌ ಲಭ್ಯವಿದೆ.

ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಖರೀದಿ ಮೇಲೆ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.30 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 20 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಸೀಮಿತ ಅವಧಿ ಮಾತ್ರ ಅನ್ವಯವಾಗಲಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ಹಾಗೆಯೇ ಇತ್ತೀಚೆಗೆ ಬಿಡುಗಡೆಗೆ ಮಾಡಲಾದ ಮತ್ತೊಂದು ರೀಬ್ಯಾಡ್ಜ್ ಕಾರು ಮಾದರಿಯಾದ ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಮೇಲೆ ರೂ.20 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತಿದ್ದು, ಯಾವುದೇ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿಲ್ಲ.

ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ಹಾಗೆಯೇ ದುಬಾರಿ ಕಾರುಗಳ ಮೇಲೂ ಯಾವುದೇ ಆಫರ್ ಇಲ್ಲವಾದರೂ ಆಕರ್ಷಕ ಇಎಂಐ ಮರು ಪಾವತಿ ಆಯ್ಕೆಯಿಂದಾಗಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ 3 ತಿಂಗಳು ವಿನಾಯ್ತಿ ಸಿಗಲಿದ್ದು, ಹೊಸ ಕಾರನ್ನು ಇದೀಗ ಖರೀದಿ ಮಾಡಿ 3 ತಿಂಗಳು ನಂತರ ಇಎಂಐ ಮರುಪಾವತಿಯನ್ನು ಆರಂಭಿಸಬಹುದಾದ ಸೌಲಭ್ಯ ನೀಡಲಾಗಿದೆ.

MOST READ: ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..!

ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ

ಇಎಂಐ ಮರುಪಾವತಿಯ ಆಯ್ಕೆಯಲ್ಲಿ ಮತ್ತೊಂದು ವಿಧಾನವಿದ್ದು, ಟೊಯೊಟಾ ಕಾರು ಖರೀದಿಸಿದ ಆರು ತಿಂಗಳ ತನಕ ಇಎಂಐ ದರದಲ್ಲಿ ಅರ್ಧ ಮೊತ್ತವನ್ನು ಮಾತ್ರ ಪಾವತಿಸಬಹುದಾಗಿದೆ. ವಿನಾಯ್ತಿ ಪಡೆದ ಇಎಂಐ ದರವು ಇನ್ನುಳಿದ ಇಎಂಐ ದರಗಳಲ್ಲಿ ಸೇರ್ಪಡೆಗೊಂಡಿರಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹೊಸ ಕಾರು ಖರೀದಿಯನ್ನು ಸರಳಗೊಳಿಸಲು ಈ ಆಫರ್ ಸಾಕಷ್ಟು ಅನುಕೂಲಕರ ಎನ್ನಬಹುದು.

Article Published On: Sunday, November 8, 2020, 8:45 [IST]
English summary
Discounts up to Rs 65,000 on Toyota Cars in November 2020. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+