ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಕಾರು ಮಾರಾಟದಲ್ಲಿ ಗಣನೀಯವಾಗಿ ಬೆಳವಣಿಗೆ ಕಾಣುತ್ತಿರುವ ಟೊಯೊಟಾ ಕಂಪನಿಯು ವಾಹನಗಳ ಮಾರಾಟದ ನಂತರ ಗ್ರಾಹಕ ಸೇವೆಗಳನ್ನು ಸಮರ್ಥವಾಗಿ ಪೂರೈಸುತ್ತಿದ್ದು, ಇತ್ತೀಚೆಗೆ ಭಾರತದಲ್ಲಿ 401ನೇ ಸರ್ವೀಸ್ ಸೆಂಟರ್‌ಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಹೊಸ ವಾಹನಗಳ ಮಾರಾಟದ ಗ್ರಾಹಕರ ಸೇವೆಗಳು ಪ್ರಮುಖ ವಿಚಾರವಾಗಿದ್ದು, ಟೊಯೊಟಾ ಕಂಪನಿಯು ದೇಶಾದ್ಯಂತ ತನ್ನ ಗ್ರಾಹಕರಿಗೆ ಅತಿ ಕಡಿಮೆ ಅವಧಿಯಲ್ಲಿ ಸೇವೆಗಳನ್ನು ಪೂರೈಸಲು ಪ್ರಮುಖ ನಗರಗಳಲ್ಲಿ ಸರ್ವೀಸ್ ಸೆಂಟರ್‌ಗಳ ಸಂಖ್ಯೆಯನ್ನು ವಿಸ್ತರಿಸುತ್ತಿದೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಬಿಜೆಎಸ್ ಟೊಯೊಟಾ ಡೀಲರ್ಸ್ ಅಡಿಯಲ್ಲಿ 401ನೇ ಸರ್ವಿಸ್ ಸೆಂಟರ್‌ಗೆ ಚಾಲನೆ ನೀಡಲಾಗಿದ್ದು, ಹೊಸ ವಾಹನಗಳ ಮಾರಾಟಕ್ಕೆ ಅನುಗುಣವಾಗಿ ಗ್ರಾಹಕರ ಸೇವಾ ವಿಭಾಗವನ್ನು ಸಹ ಬಲಿಷ್ಠಗೊಳಿಸಲಾಗುತ್ತಿದೆ.

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆಗೂಡಿ ವಿವಿಧ ಜನಪ್ರಿಯ ಕಾರುಗಳನ್ನು ರೀಬ್ಯಾಡ್ಜ್ ಆವೃತ್ತಿಯಾಗಿ ಬಿಡುಗಡೆ ಮಾಡುತ್ತಿರುವುದು ಸಹ ಹೊಸ ಕಾರುಗಳ ಸಂಖ್ಯೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಗ್ರಾಹಕರ ಸೇವೆಗಳಿಗೆ ಪೂರಕವಾಗಿ ಸರ್ವಿಸ್ ಸೆಂಟರ್‌ಗಳ ತೆರೆಯುವುದು ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಿದೆ.

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಇದಲ್ಲದೇ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ಗ್ರಾಹಕ ಸೇವೆಗಳನ್ನು ಸಮರ್ಥವಾಗಿ ಪೂರೈಸಲು ಹೊಸದಾಗಿ ಪ್ರೊ ಸರ್ವಿಸ್ ಸೆಂಟರ್‌ಗಳ ಸ್ಥಾಪನೆಗೆ ಚಾಲನೆ ನೀಡಿದ್ದು, ಹೊಸ ಸರ್ವಿಸ್ ಸೆಂಟರ್‌ಗಳು ಎರಡನೇ ಮತ್ತು ಮೂರನೇ ದರ್ಜೆಗಳಲ್ಲಿ ಸ್ಥಾಪನೆಗೊಳ್ಳುತ್ತಿವೆ.

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಹೊಸ ವಾಹನಗಳ ಮಾರಾಟ ಹೆಚ್ಚಿದಂತೆ ಅದಕ್ಕೆ ಪೂರಕವಾಗಿ ಗ್ರಾಹಕರ ಸೇವೆಗಳನ್ನು ಸಹ ಸಮರ್ಥವಾಗಿ ಪೂರೈಸುವುದು ಆಟೋ ಕಂಪನಿಗಳ ಜವಾಬ್ದಾರಿಯಾಗಿದ್ದು, ಟೊಯೊಟಾ ಕಂಪನಿಯು ಸಹ ಇದೀಗ ಮಹಾನಗರಗಳನ್ನು ಹೊರತುಪಡಿಸಿ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲೂ ಗ್ರಾಹಕರ ಸೇವೆಗಳನ್ನು ನಿಗದಿತ ಸಮಯದಲ್ಲಿ ಪೂರೈಸುವುದಕ್ಕಾಗಿ ಹೊಸ ಮಾದರಿಯ ಪ್ರೊ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದೆ.

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಈ ವರ್ಷದ ಮೊದಲ ತಿಂಗಳಿನಲ್ಲಿಯೇ ಮೊದಲ ಪ್ರೊ ಸರ್ವಿಸ್ ಸೆಂಟರ್ ಸ್ಥಾಪಿಸಿದ್ದ ಟೊಯೊಟಾ ಕಂಪನಿಯು ಇದೀಗ ದೇಶದ ಪ್ರಮುಖ 80 ನಗರಗಳಲ್ಲಿ ಹೊಸ ಮಾದರಿಯ ಸರ್ವಿಸ್ ಸೆಂಟರ್‌ಗಳನ್ನು ವಿಸ್ತರಿಸಿದ್ದು, ಹೊಸ ಸರ್ವಿಸ್ ಸೆಂಟರ್‌ಗಳು ಆಯಾ ಭಾಗದ ಮುಖ್ಯ ಸರ್ವಿಸ್ ಸೆಂಟರ್‌ಗಳೊಂದಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ.

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಮಾಹಾನಗರಗಳಲ್ಲಿರುವ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್‌ಗಳೊಂದಿಗೆ ಕಾರ್ಯನಿರ್ವಹಿಸುವ ಪ್ರೊ ಸರ್ವಿಸ್ ಸೆಂಟರ್‌ಗಳು ಯಾವುದೇ ರೀತಿಯಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿಲ್ಲವಾದರೂ ಮುಖ್ಯ ಸರ್ವಿಸ್ ಸೆಂಟರ್ ಲಭ್ಯವಾಗುವ ಎಲ್ಲಾ ಅಧಿಕೃತ ಬಿಡಿಭಾಗಗಳು ಪ್ರೊ ಸರ್ವಿಸ್ ಸೆಂಟರ್‌ಗಳಲ್ಲಿ ದೊರೆಯಲಿವೆ.

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಸೇಲ್ಸ್ ಮತ್ತು ಸರ್ವಿಸ್ ಸೆಂಟರ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮತ್ತು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಸೇವೆಗಳನ್ನು ನೀಡಲು ಪ್ರೊ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಪ್ರೊ ಸರ್ವಿಸ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸಲು ಟೊಯೊಟಾ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ವಿವಿಧ ಹಂತದ ತರಬೇತಿ ಹೊಂದಿರುವ ಸಿಬ್ಬಂದಿಯನ್ನೇ ನೇಮಕಗೊಳಿಸಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಸಣ್ಣ-ಪುಟ್ಟ ಬಿಡಿಭಾಗಗಳ ರೀಪೆರಿ, ಕಂಪನಿ ವಾರಂಟಿಯಲ್ಲಿನ ನಿಯಮಿತ ಸರ್ವಿಸ್‌ಗಳು ಮತ್ತು ಪೆಟಿಂಗ್ ಸರ್ವಿಸ್‌ಗಳನ್ನು ಪ್ರೊ ಸರ್ವಿಸ್ ಸೆಂಟರ್‌ಗಳಲ್ಲೇ ಪಡೆದುಕೊಳ್ಳಬೇಕಿದ್ದು, ಎಂಜಿನ್ ವಿಭಾಗದಲ್ಲಿನ ಗಂಭೀರ ಸಮಸ್ಯೆಗಳಿದ್ದಲ್ಲಿ ಮಾತ್ರ ಮುಖ್ಯ ಸರ್ವಿಸ್ ಸೆಂಟರ್‌ಗಳಿಗೆ ಕಳುಹಿಸಿಕೊಡಲಾಗುತ್ತದೆ.

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಪ್ರೊ ಸರ್ವಿಸ್ ಸೆಂಟರ್‌ಗಳಲ್ಲಿ ಟೊಯೊಟಾ ಕಂಪನಿಯು ತನ್ನ ಬ್ರಾಂಡ್ ಕಾರು ಮಾದರಿಗಳಿಗೆ ಮಾತ್ರ ಇತರೆ ಕಾರು ಮಾದರಿಗಳಿಗೂ ಸರ್ವಿಸ್ ಒದಗಿಸಲಿದ್ದು, ತನ್ನ ಕಾರುಗಳಿಗೆ ಮಾತ್ರವೇ ಅಧಿಕೃತ ಬಿಡಿಭಾಗಗಳನ್ನು ಪೂರೈಸಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸರ್ವೀಸ್ ಸೆಂಟರ್‌ಗಳ ನಿರ್ಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟೊಯೊಟಾ ಇಂಡಿಯಾ

ಸದ್ಯ ಟೊಯೊಟಾ ಕಂಪನಿಯು ಭಾರತದ ಪ್ರಮುಖ ನಗರಗಳಲ್ಲಿ ವಾಹನ ಮಾರಾಟ ಜಾಲವನ್ನು ವಿಸ್ತರಣೆ ಮಾಡುವುದರ ಜೊತೆಗೆ ಹಲವಾರು ಹೊಸ ಉತ್ಪನ್ನಗಳೊಂದಿಗೆ ಗ್ರಾಹಕರ ಮೆಚ್ಚುಗೆಗೆ ಕಾರಣವಾಗುತ್ತಿದ್ದು, ಮಾರಾಟದಲ್ಲೂ ಕೂಡಾ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಪೈಪೋಟಿಯಾಗಿ ಬೆಳವಣಿಗೆ ಸಾಧಿಸುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Crosses 400 Customer Touchpoints Across India. Read in Kannada.
Story first published: Friday, November 20, 2020, 22:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X