ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಟೊಯೊಟಾ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

ಟೊಯೊಟಾ ಸಂಸ್ಥೆಯು ಪ್ರೀಮಿಯಂ ಕಾರು ಮಾದರಿಗಳ ಹೆಚ್ಚು ಗಮನಹರಿಸುತ್ತಿದ್ದು, ಗ್ರಾಹಕರ ಬೇಡಿಕೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಇಟಿಯಾಸ್ ಸೆಡಾನ್ ಮತ್ತು ಇಟಿಯಾಸ್ ಲಿವಾ ಹ್ಯಾಚ್‌ಬ್ಯಾಕ್ ಕಾರುಗಳನ್ನು ಸದ್ಯದಲ್ಲೇ ಸ್ಥಗಿತಗೊಳಿಸುವ ಸುಳಿವು ನೀಡಿದೆ.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

2011ರಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಇಟಿಯಾಸ್ ಸೆಡಾನ್ ಮತ್ತು ತದನಂತರ ಬಂದ ಇಟಿಯಾಸ್ ಲಿವಾ ಹ್ಯಾಚ್‌ಬ್ಯಾಕ್ ಕಾರುಗಳು ಮೊದಮೊದಲ ಉತ್ತಮ ಬೇಡಿಕೆ ಪಡೆದುಕೊಂಡರೂ ಇತ್ತೀಚೆಗೆ ಬಂದ ಹೊಸ ಮಾದರಿಯ ಕಾರುಗಳ ಅಬ್ಬರ ಮುಂದೆ ತೀವ್ರಗತಿಯಲ್ಲಿ ಕುಸಿತ ಕಂಡಿವೆ. ಕಳೆದ ವರ್ಷ ವಾರ್ಷಿಕವಾಗಿ ಇಟಿಯಾಸ್ ಕಾರು 17 ಸಾವಿರ ಯುನಿಟ್ ಮಾರಾಟಗೊಂಡಿದ್ದರೆ ಇಟಿಯಾಸ್ ಲಿವಾ ಹ್ಯಾಚ್‌ಬ್ಯಾಕ್ ಕಾರು ಕೇವಲ 9 ಸಾವಿರ ಯುನಿಟ್ ಮಾಡಿಗೊಂಡಿದ್ದವು.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

ಈ ಹಿನ್ನಲೆಯಲ್ಲಿ ಇಟಿಯಾಸ್, ಇಟಿಯಾಸ್ ಲಿವಾ ಮತ್ತು ಹೊಸ ಆವೃತ್ತಿಯಾದ ಇಟಿಯಾಸ್ ಕ್ರಾಸ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲು ಮುಂದಾಗಿರುವ ಟೊಯೊಟಾ ಸಂಸ್ಥೆಯು ಹೊಸ ಕಾರು ಉತ್ಪನ್ನಗಳ ಬಿಡುಗಡೆ ಆಸಕ್ತಿ ವಹಿಸಿದೆ.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

ಇದಲ್ಲದೇ ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಜಾರಿಗೆ ಬರುತ್ತಿರುವುದು ಕೂಡಾ ಇಟಿಯಾಸ್ ಸರಣಿ ಕಾರುಗಳ ಸ್ಥಗಿತಕ್ಕೆ ಪ್ರಮುಖ ಕಾರಣವಾಗಿದ್ದು, ಹೊಸ ಎಂಜಿನ್ ಅನ್ನು ಇದುವರೆಗೂ ಉನ್ನತೀಕರಿಸಿಲ್ಲ.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

ಒಂದು ವೇಳೆ ಹೊಸ ಎಂಜಿನ್ ಅನ್ನು ಬಿಎಸ್-6 ನಿಯಮ ಅನುಸಾರ ಉನ್ನತೀಕರಿಸಿದರೂ ಸಹ ಕಾರುಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದ್ದು, ಪ್ರತಿಸ್ಪರ್ಧಿ ಕಾರುಗಳ ಬೆಲೆ ಪೈಪೋಟಿಯಲ್ಲಿ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಇದರಿಂದ ಹೊಸ ಕಾರುಗಳ ಬಿಡುಗಡೆ ಬಗೆಗೆ ಆಸಕ್ತಿ ವಹಿಸಿರುವ ಟೊಯೊಟಾ ಸಂಸ್ಥೆಯು ಪ್ರೀಮಿಯಂ ಫೀಚರ್ಸ್ ಮಾದರಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಬಿಎಸ್-6 ಜಾರಿಯಾಗುವ ತನಕ ಮಾತ್ರವೇ ಹಳೆಯ ಸ್ಟಾಕ್ ಮಾರಾಟ ಮಾಡಲಿದೆ.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

1.3-ಲೀಟರ್ ಡೀಸೆಲ್ ಎಂಜಿನ್‌ಗೆ ಬ್ರೇಕ್..!

ಫಿಯೆಟ್ ನಿರ್ಮಾಣದ 1.3-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯೇ ದೇಶದ ಪ್ರಮುಖ ಕಾರುಗಳಲ್ಲಿ ಬಳಕೆಯಾಗುತ್ತಿದ್ದು, ಇದೀಗ ಹಳೆಯ ಎಂಜಿನ್ ಮಾದರಿಯನ್ನು ಫಿಯೆಟ್ ಕ್ಲೈಸರ್ ಇಂಡಿಯಾ ಸಂಸ್ಥೆಯು ಬಂದ್ ಮಾಡಿದೆ.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

ಟೊಯೊಟಾ ಇಟಿಯಾಸ್ ಸರಣಿಯಲ್ಲಿ ಮಾತ್ರವಲ್ಲದೇ ಸದ್ಯ ಮಾರುಕಟ್ಟೆಯಲ್ಲಿರುವ ಪ್ರಮುಖ 14 ಕಾರುಗಳಲ್ಲಿ ಫಿಯೆಟ್ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನೇ ನೆಚ್ಚಿಕೊಂಡಿದ್ದು, ಇದೀಗ ಹಳೆಯ ಎಂಜಿನ್ ಬಂದ್ ಮಾಡಿರುವುದು ಮಾರುತಿ ಸುಜುಕಿಗೂ ಭಾರೀ ಹಿನ್ನಡೆಯಾಗಲಿದೆ.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

ಮಾರುತಿ ಸುಜುಕಿ ಸಹ ತನ್ನ ಜನಪ್ರಿಯ ಕಾರು ಮಾದರಿಗಳಾದ ವಿಟಾರಾ ಬ್ರೆಝಾ, ಬಲೆನೊ, ಡಿಜೈರ್, ಎಸ್-ಕ್ರಾಸ್ ಕಾರುಗಳಲ್ಲೂ 1.3-ಲೀಟರ್ ಡೀಸೆಲ್ ಎಂಜಿನ್ ಬಳಕೆ ಮಾಡುತ್ತಿದ್ದು, ಬಿಎಸ್-6 ಜಾರಿ ನಂತರ ಮಾರುತಿ ಸುಜುಕಿ ಕೂಡಾ 1.3-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಹೊಸ ಎಂಜಿನ್ ಪರಿಚಯಿಸಲಿದೆ.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

ಇದು ಟೊಯೊಟಾ ಮತ್ತು ಮಾರುತಿ ಸುಜುಕಿ ಮಾತ್ರವಲ್ಲದೇ ಫಿಯೆಟ್ ಎಂಜಿನ್ ಹೊಂದಿರುವ ಪ್ರಮುಖ ಕಾರ್ ಬ್ರಾಂಡ್ ಸ್ಥಗಿತಕ್ಕೂ ಕಾರಣವಾಗಿದ್ದು, ಬಿಎಸ್-6 ನಿಯಮದಂತೆ ಈ ಎಂಜಿನ್ ಉನ್ನತೀಕರಿಸಿದರೂ ಪ್ರಸ್ತುತ ಬೆಲೆಗಿಂತ ಹೆಚ್ಚುವರಿಯಾಗಿ ರೂ.90 ಸಾವಿರದಿಂದ ರೂ. 1.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ.

ಬಿಎಸ್-6 ಎಫೆಕ್ಟ್: ಶೀಘ್ರದಲ್ಲೇ ಸ್ಥಗಿತಗೊಳ್ಳಲಿವೆ ಇಟಿಯಾಸ್ ಮತ್ತು ಇಟಿಯಾಸ್ ಲಿವಾ

ಇದರೊಂದಿಗೆ ಟೊಯೊಟಾ ಸಂಸ್ಥೆಯು ಮಾರುತಿಯಿಂದ ರೀಬ್ಯಾಡ್ಜ್ ಮಾಡಲಾದ ಗ್ಲಾಂಝಾ ಹೊರತುಪಡಿಸಿ ಸಣ್ಣ ಗಾತ್ರದ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ಮಿಡ್ ಸೈಜ್ ಎಸ್‌ಯುವಿ ಸೇರಿದಂತೆ ಎರ್ಟಿಗಾ ಮತ್ತು ಬ್ರೆಝಾ ರೀಬ್ಯಾಡ್ಜ್ ಕಾರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

Article Published On: Saturday, February 15, 2020, 14:30 [IST]
English summary
Toyota Etios And Liva Discontinued In India. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+