ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ಕರೋನಾ ವೈರಸ್ ಪರಿಣಾಮ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ಹಬ್ಬದ ಋುತುವಿನಲ್ಲಿ ನೀರಿಕ್ಷೆಗೂ ಮೀರಿ ಹೊಸ ವಾಹನ ಮಾರಾಟ ಕೈಗೊಂಡಿದ್ದು, ದುಬಾರಿ ಬೆಲೆಗಳ ನಡುವೆಯೂ ಟೊಯೊಟಾ ಕಾರುಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿದೆ.

ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ಹೊಸ ವಾಹನಗಳ ಬೇಡಿಕೆಯು ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಲೇ ಇದ್ದು, ಬೆಂಗಳೂರು ಹೊರವಲಯದ ಬಿಡದಿಯಲ್ಲಿ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಟೊಯೊಟಾ ಕಂಪನಿಯು ಉತ್ತರ ಭಾರತದ ರಾಜ್ಯಗಳಲ್ಲಿ ಬೇಡಿಕೆಯನ್ನು ನಿಗದಿತ ಅವಧಿಯಲ್ಲಿ ಪೂರೈಸಲು ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ಬೇಡಿಕೆಯನ್ನು ನಿಗದಿತ ಸಮಯದಲ್ಲಿ ಪೂರೈಸುತ್ತಿದ್ದ ಟೊಯೊಟಾ ಕಂಪನಿಯು ಉತ್ತರ ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕ ಹೊಂದಿರದ ಕಾರಣ ಕಾರು ಪೂರೈಕೆಯಲ್ಲಿ ಸಾಕಷ್ಟು ಸಮಯಾವಕಾಶ ತೆಗದುಕೊಳ್ಳುತ್ತಿತ್ತು.

ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ದಕ್ಷಿಣ ಭಾರತದ ರಾಜ್ಯಗಳ ಟೊಯೊಟಾ ಕಾರುಗಳ ಖರೀದಿಯ ಅವಧಿಯು ಬುಕ್ಕಿಂಗ್ ನಂತರ 2 ರಿಂದ 5 ದಿನಗಳಿದ್ದಲ್ಲಿ ಉತ್ತರ ಭಾರತದಲ್ಲಿ ಟೊಯೊಟಾ ಕಾರು ಖರೀದಿಸುವ ಗ್ರಾಹಕರು ಬುಕ್ಕಿಂಗ್ ನಂತರ ಕನಿಷ್ಠ 13 ದಿನಗಳ ಕಾಲ ಕಾಯಬೇಕಿತ್ತು.

ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ಇದು ಕೆಲವೊಮ್ಮೆ ಕಾರು ಖರೀದಿದಾರರನ್ನು ಬದಲಿ ಆಯ್ಕೆಯತ್ತ ಸೆಳೆಯುತ್ತಿತ್ತು. ಈ ಹಿನ್ನಲೆಯಲ್ಲಿ ಅಸ್ಸಾಂ ರಾಜ್ಯದ ಗುವಾಹಾಟಿಯಲ್ಲಿ ಸ್ಟಾಕ್ ಯಾರ್ಡ್ ತೆರೆದಿರುವ ಟೊಯೊಟಾ ಕಂಪನಿಯು ಉತ್ತರ ಭಾರತದ ಪ್ರಮುಖ ರಾಜ್ಯಗಳಿಗೆ ಅತಿ ಕಡಿಮೆ ಕಾಯುವಿಕೆ ಅವಧಿಯಲ್ಲಿ ಹೊಸ ಕಾರುಗಳನ್ನು ಪೂರೈಕೆ ಮಾಡಲಿದೆ.

ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ಬಂಗಾಳ ಕೊಲ್ಲಿ ಮೂಲಕ ಗುವಾಹಾಟಿಯಲ್ಲಿರುವ ಸ್ಟಾಕ್ ಯಾರ್ಡ್‌ಗೆ ಹಡುಗಿನ ಮೂಲಕ ಕಾರುಗಳನ್ನು ಪೂರೈಕೆ ಮಾಡುವ ಟೊಯೊಟಾ ಕಂಪನಿಯು ರಸ್ತೆ ಸಾರಿಗೆಯ ವೆಚ್ಚಗಳನ್ನು ತಗ್ಗಿಸಲಿದ್ದು, ಗ್ರಾಹಕರು ಬುಕ್ಕಿಂಗ್ ಮಾಡಿದ ನಂತರ ಕೇವಲ 2 ದಿನಗಳ ಒಳಗಾಗಿ ಹೊಸ ಕಾರುಗಳನ್ನು ಪೂರೈಕೆ ಮಾಡಲಿದೆ.

ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ಇದರೊಂದಿಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ಗ್ರಾಹಕ ಸೇವೆಗಳನ್ನು ಸಮರ್ಥವಾಗಿ ಪೂರೈಸಲು ಹೊಸದಾಗಿ ಪ್ರೊ ಸರ್ವಿಸ್ ಸೆಂಟರ್‌ಗಳ ಸ್ಥಾಪನೆಗೆ ಚಾಲನೆ ನೀಡಿದ್ದು, ಹೊಸ ಸರ್ವಿಸ್ ಸೆಂಟರ್‌ಗಳು ಎರಡನೇ ಮತ್ತು ಮೂರನೇ ದರ್ಜೆಗಳಲ್ಲಿ ಸ್ಥಾಪನೆಗೊಳ್ಳುತ್ತಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ಹೊಸ ವಾಹನಗಳ ಮಾರಾಟ ಹೆಚ್ಚಿದಂತೆ ಅದಕ್ಕೆ ಪೂರಕವಾಗಿ ಗ್ರಾಹಕರ ಸೇವೆಗಳನ್ನು ಸಹ ಸಮರ್ಥವಾಗಿ ಪೂರೈಸುವುದು ಆಟೋ ಕಂಪನಿಗಳ ಜವಾಬ್ದಾರಿಯಾಗಿದ್ದು, ಟೊಯೊಟಾ ಕಂಪನಿಯು ಸಹ ಇದೀಗ ಮಹಾನಗರಗಳನ್ನು ಹೊರತುಪಡಿಸಿ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲೂ ಗ್ರಾಹಕರ ಸೇವೆಗಳನ್ನು ನಿಗದಿತ ಸಮಯದಲ್ಲಿ ಪೂರೈಸುವುದಕ್ಕಾಗಿ ಹೊಸ ಮಾದರಿಯ ಪ್ರೊ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದೆ.

ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ಈ ವರ್ಷದ ಮೊದಲ ತಿಂಗಳಿನಲ್ಲಿಯೇ ಮೊದಲ ಪ್ರೊ ಸರ್ವಿಸ್ ಸೆಂಟರ್ ಸ್ಥಾಪಿಸಿದ್ದ ಟೊಯೊಟಾ ಕಂಪನಿಯು ಇದೀಗ ದೇಶದ ಪ್ರಮುಖ 80 ನಗರಗಳಲ್ಲಿ ಹೊಸ ಮಾದರಿಯ ಸರ್ವಿಸ್ ಸೆಂಟರ್‌ಗಳನ್ನು ವಿಸ್ತರಿಸಿದ್ದು, ಹೊಸ ಸರ್ವಿಸ್ ಸೆಂಟರ್‌ಗಳು ಆಯಾ ಭಾಗದ ಮುಖ್ಯ ಸರ್ವಿಸ್ ಸೆಂಟರ್‌ಗಳೊಂದಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಾರು ಮಾರಾಟದಲ್ಲಿ ಹೆಚ್ಚಳ- ಸ್ಟಾಕ್ ಯಾರ್ಡ್ ನಿರ್ಮಾಣ ಮಾಡಿದ ಟೊಯೊಟಾ

ಮಾಹಾನಗರಗಳಲ್ಲಿರುವ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್‌ಗಳೊಂದಿಗೆ ಕಾರ್ಯನಿರ್ವಹಿಸುವ ಪ್ರೊ ಸರ್ವಿಸ್ ಸೆಂಟರ್‌ಗಳು ಯಾವುದೇ ರೀತಿಯಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿಲ್ಲವಾದರೂ ಮುಖ್ಯ ಸರ್ವಿಸ್ ಸೆಂಟರ್ ಲಭ್ಯವಾಗುವ ಎಲ್ಲಾ ಅಧಿಕೃತ ಬಿಡಿಭಾಗಗಳು ಪ್ರೊ ಸರ್ವಿಸ್ ಸೆಂಟರ್‌ಗಳಲ್ಲಿ ದೊರೆಯಲಿವೆ.

Most Read Articles

Kannada
Read more on ಟೊಯೊಟಾ toyota
English summary
Toyota Launches First Regional Stockyard in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X