ಸಾಲದ ಮೇಲೆ ಖರೀದಿ ಮಾಡಲಾದ ಕಾರುಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಿದೆ ಟೊಯೊಟಾ

ವಾಹನಗಳ ಗರಿಷ್ಠ ಸುರಕ್ಷತೆ ನೀಡುವ ಸಂಬಂಧ ಜಿಪಿಎಸ್ ಸೌಲಭ್ಯವನ್ನು ಈಗಾಗಲೇ ಬಜೆಟ್ ಬೆಲೆಯ ವಾಹನಗಳನ್ನು ಸ್ಟ್ಯಾಂಡರ್ಡ್ ಆಗಿ ಬಳಕೆ ಮಾಡಲಾಗುತ್ತಿದ್ದು, ಟೊಯೊಟಾ ಕಂಪನಿಯು ಇದೀಗ ತನ್ನ ವಿವಿಧ ಕಾರು ಮಾದರಿಗಳಿಗೆ ಜಿಪಿಎಸ್ ಸೌಲಭ್ಯವನ್ನು ಕಡ್ಡಾಯವಾಗಿ ಅಳವಡಿಸಲು ಸಿದ್ದವಾಗಿದೆ.

ಕಾರುಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಿದೆ ಟೊಯೊಟಾ

ಜಿಪಿಎಸ್ ಸಾಧನವು ವಾಹನಗಳ ಕಳ್ಳತನಕ್ಕೆ ಬ್ರೇಕ್ ಪ್ರಮುಖ ಅಸ್ತ್ರವಾಗಿದ್ದು, ವಾಹನದ ನಿಖರ ಸ್ಥಳದೊಂದಿಗೆ ಚಲನೆಯನ್ನು ನಿಖರವಾಗಿ ಪತ್ತೆಹಚ್ಚಬಹುದಾಗಿದೆ. ಇದು ಈಗಾಗಲೇ ಹಲವು ಹೊಸ ವಾಹನಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದರೆ ಇನ್ನು ಕೆಲವು ಗ್ರಾಹಕರು ತಮ್ಮ ವಾಹನಗಳ ಭದ್ರತೆಗಾಗಿ ಹೆಚ್ಚುವರಿಯಾಗಿ ಖರೀದಿ ಮಾಡುತ್ತಿರುತ್ತಾರೆ. ಆದರೆ ಟೊಯೊಟಾ ಕಂಪನಿಯು ಮುಂಬರುವ ಹೊಸ ವಾಹನಗಳ ಜೊತೆಗೆ ಫೈನಾನ್ಸ್ ಸೌಲಭ್ಯದೊಂದಿಗೆ ಖರೀದಿ ಮಾಡಲಾದ ವಾಹನಗಳಿಗೂ ಕಡ್ಡಾಯವಾಗಿ ಜಿಪಿಎಸ್ ಸೇರ್ಪಡೆ ಮಾಡಲಿದೆ.

ಕಾರುಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಿದೆ ಟೊಯೊಟಾ

ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ವುಳ್ಳ ಜಿಪಿಎಸ್ ಟ್ರ್ಯಾಕಿಂಗ್ ಸಾಧನವನ್ನು ಸಿದ್ದಪಡಿಸಲು ತನ್ನ ಸಹಭಾಗಿತ್ವದ ಬಿಡಿಭಾಗಗಳ ತಯಾರಿಕಾ ಕಂಪನಿಗಳಿಗೆ ಸೂಚನೆ ನೀಡಿರುವ ಟೊಯೊಟಾ ಕಂಪನಿಗಳು ಶೀಘ್ರದಲ್ಲೇ ಅಳವಡಿಕೆ ಮಾಡಲಿದ್ದು, ಇದು ಗ್ರಾಹಕರಿಗೆ ಗರಿಷ್ಠ ಭದ್ರತೆ ಒದಗಿಸುವುದಲ್ಲದೆ ವಾಹನ ಸಾಲಗಳ ಮರುಪಾವತಿಯನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.

ಕಾರುಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಿದೆ ಟೊಯೊಟಾ

ಹೊಸ ವಾಹನಗಳ ಖರೀದಿ ವೇಳೆ ಶೇ.95 ರಷ್ಟು ಗ್ರಾಹಕರು ಹಣ ಪಾವತಿಸಲು ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿಗಳನ್ನು ಆಯ್ದುಕೊಳ್ಳುವುದು ಸಾಮಾನ್ಯ. ತದನಂತರ ಸಾಲ ಮರುಪಾವತಿ ಸಂದರ್ಭದಲ್ಲಿ ಹಲವಾರು ಗ್ರಾಹಕರು ನಾನಾ ಕಾರಣಗಳಿಂದ ಸಾಲ ಮರುಪಾವತಿ ಮಾಡಲಾಗದೇ ವಾಹನಗಳ ಸಮೇತ ಪರಾರಿಯಾಗುವ ಮೂಲಕ ಹಣಕಾಸು ಸಂಸ್ಥೆಗಳಿಗೆ ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ.

ಕಾರುಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಿದೆ ಟೊಯೊಟಾ

ಇದರಿಂದ ಹಣಕಾಸು ಸಂಸ್ಥೆಗಳ ಸಲಹೆ ಮತ್ತು ಹೆಚ್ಚುತ್ತಿರುವ ವಾಹನಗಳ ಕಳ್ಳತನ ಪ್ರಕರಣಗಳನ್ನು ತಡೆಯಲು ಜಿಪಿಎಸ್ ಸೌಲಭ್ಯವನ್ನು ಕಡ್ಡಾಯವಾಗಿ ಜೋಡಣೆ ಮಾಡಲಾಗುತ್ತಿದ್ದು, ಇದು ಗ್ರಾಹಕರಿಗೆ ನೆರವಾಗುವುದಲ್ಲದೆ ಕಂಪನಿಯ ಹಣಕಾಸು ಸಂಸ್ಥೆಗಳಿಗೂ ಅನುಕೂರವಾಗಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಾರುಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಿದೆ ಟೊಯೊಟಾ

ಇನ್ನು ಟೊಯೊಟಾ ಕಂಪನಿಗಳು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಬಿಎಸ್-6 ಎಮಿಷನ್ ಜಾರಿ ನಂತರ ವಿವಿಧ ಕಾರು ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಿ ಮಧ್ಯಮ ಕ್ರಮಾಂಕದ ಮತ್ತು ಐಷಾರಾಮಿ ಕಾರು ಮಾದರಿಗಳ ಮೇಲೆ ಹೆಚ್ಚು ಗಮನಹರಿಸುತ್ತಿದೆ.

ಕಾರುಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಿದೆ ಟೊಯೊಟಾ

ಬಿಎಸ್-6 ಜಾರಿ ನಂತರ ಇಟಿಯಾಸ್, ಇಟಿಯಾಸ್ ಲಿವಾ, ಇಟಿಯಾಸ್ ಕ್ರಾಸ್ ಕಾರುಗಳ ಮಾದರಿಗಳನ್ನು ಸ್ಥಗಿತಗೊಳಿಸಿದ್ದು, ರೀಬ್ಯಾಡ್ಜ್ ಕಾರುಗಳ ಮಾದರಿಯಾದ ಗ್ಲಾಂಝಾ ಮಾದರಿಯೊಂದಿಗೆ ಯಾರಿಸ್, ಇನೋವಾ ಕ್ರಿಸ್ಟಾ, ಫಾರ್ಚೂನರ್, ಕ್ಯಾಮ್ರಿ, ವೆಲ್‌ಫೈರ್ ಮತ್ತು ಪ್ರಿಯಸ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾರುಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಿದೆ ಟೊಯೊಟಾ

ಟೊಯೊಟಾ ಕಂಪನಿಯು ಗ್ಲಾಂಝಾ ನಂತರ ಎರಡನೇ ರೀಬ್ಯಾಡ್ಜ್ ಕಾರು ಮಾದರಿಯಾದ ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಾರು ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota To Equip GPS In Financed Cars. Read in Kannada.
Story first published: Sunday, September 6, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X