ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಟೊಯೊಟಾ ಫಾರ್ಚೂನರ್ ಎಸ್‍‍‍ಯುವಿಯನ್ನು ಶೀಘ್ರದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ದೇಶಾದ್ಯಂತವಿರುವ ಕೆಲವು ಡೀಲರ್‍‍ಗಳು ಈಗಾಗಲೇ ಈ ಎಸ್‍‍ಯುವಿಯ ಬುಕ್ಕಿಂಗ್‍ಗಳನ್ನು ಸ್ವೀಕರಿಸಲು ಆರಂಭಿಸಿದೆ ಎಂದು ಪುಣೆ ಮೂಲದ ಡೀಲರ್‍‍ಗಳು ಖಚಿತ ಪಡಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಬಿಎಸ್-6 ಟೊಯೊಟಾ ಫಾರ್ಚೂನರ್ ಎಸ್‍‍‍ಯುವಿಗಾಗಿ ರೂ.50 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯು ಅದೇ 2.7 ಲೀಟರ್ ಪೆಟ್ರೋಲ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್‍‍ಗಳನ್ನು ಹೊಂದಿರಲಿದೆ ಎಂದು ಗಾಡಿವಾಡಿ ಬಹಿರಂಗಪಡಿಸಿದೆ. ಹೊಸ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯಲ್ಲಿ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಹೊಸ ಫಾರ್ಚೂನರ್ ಎಸ್‍‍‍ಯುವಿಯಲ್ಲಿ 2.8 ಲೀಟರಿನ ಟರ್ಬೊ ಬಿಎಸ್ 6 ಡೀಸೆಲ್ ಎಂಜಿನ್ ಹಾಗೂ 2.7 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. 2.8 ಲೀಟರಿನ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ 174 ಬಿ‍‍ಹೆಚ್‍‍ಪಿ ಪವರ್ ಹಾಗೂ 450 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಇನ್ನು 2.7 ಲೀಟರಿನ 4 ಸಿಲಿಂಡರ್ ಬಿಎಸ್ 6 ಪೆಟ್ರೋಲ್ ಎಂಜಿನ್ 164 ಬಿ‍‍ಹೆಚ್‍‍ಪಿ ಪವರ್ ಹಾಗೂ 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಡೀಸೆಲ್ ಎಂಜಿನ್‍‍ನಲ್ಲಿ ಆಲ್ ವ್ಹೀಲ್ ಡ್ರೈವ್ ಹಾಗೂ ರೇರ್ ವ್ಹೀಲ್ ಡ್ರೈವ್‍‍ಗಳನ್ನು ನೀಡಲಾಗುವುದು. ಇಂಟಿರಿಯರ್ ಬಗ್ಗೆ ಹೇಳುವುದಾದರೆ ಡ್ಯಾಶ್‍‍ಬೋರ್ಡ್ ಡಾರ್ಕ್ ಬ್ರೌನ್ ಹಾಗೂ ಬೀಜ್ ಬಣ್ಣಗಳನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಇವುಗಳ ಜೊತೆಗೆ ನ್ಯಾವಿಗೇಶನ್ ಹೊಂದಿರುವ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ, ಪೆಡಲ್‍‍ಶಿಫ್ಟರ್, ಏರ್‍‍ಬ್ಯಾಗ್, ಬ್ರೇಕ್ ಅಸಿಸ್ಟ್ ಹೊಂದಿರುವ ವೆಹಿಕಲ್ ಸ್ಟಾಬಿಲಿಟಿ, ಹಿಲ್ ಅಸಿಸ್ಟ್ ಕಂಟ್ರೋಲ್, ಇಬಿಡಿ ಹೊಂದಿರುವ ಎ‍‍ಬಿ‍ಎಸ್ ನೀಡಲಾಗುವುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಫಾರ್ಚೂನರ್ ಎಸ್‍‍ಯುವಿಯ ಬೆಲೆಯು ಬಿ‍ಎಸ್ 4 ಎಂಜಿನ್ ಹೊಂದಿದ್ದ ಎಸ್‍‍ಯುವಿಯ ಬೆಲೆಗಿಂತ ಹೆಚ್ಚಿನ ಪ್ರಮಾಣದಲ್ಲಿರಲಿದೆ. ಟೊಯೊಟಾ ಇನೊವಾ ಡೀಸೆಲ್ ಮಾದರಿಯ ಬೆಲೆಯನ್ನು ರೂ.39,000 ದಿಂದ ರೂ.1.12 ಲಕ್ಷದವರೆಗೂ ಏರಿಕೆ ಮಾಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಇದರಿಂದಾಗಿ ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಫಾರ್ಚೂನರ್ ಬೆಲೆಯು ಸಹ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ಮಾರುಕಟ್ಟೆಯಲ್ಲಿರುವ ಬಿ‍ಎಸ್ 4 ಎಂಜಿನ್ ಹೊಂದಿರುವ ಫಾರ್ಚೂನರ್ ಎಸ್‍‍ಯುವಿಯ ಪೆಟ್ರೋಲ್ ಆವೃತ್ತಿಯ ಬೆಲೆ ರೂ.28.18 ಲಕ್ಷದಿಂದ ರೂ.29.77 ಲಕ್ಷಗಳಾದರೆ, ಡೀಸೆಲ್ ಆವೃತ್ತಿಯ ಬೆಲೆ ರೂ.30.19 ಲಕ್ಷದಿಂದ ರೂ.34.20 ಲಕ್ಷಗಳಾಗಿದೆ. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿ‍ಎಸ್- 6 ಟೊಯೊಟಾ ಫಾರ್ಚೂನರ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಟೊಯೊಟಾ ಫಾರ್ಚೂನರ್ ಎಸ್‍‍‍ಯುವಿಯನ್ನು ಶೀಘ್ರದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಜನಪ್ರಿಯ ಎಸ್‍‍ಯುವಿಯ ಹೊಸ ಆವೃತ್ತಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Article Published On: Thursday, January 30, 2020, 8:45 [IST]
English summary
Toyota Fortuner BS6 Petrol And Diesel Engine Specifications Revealed. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+