ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಆವೃತ್ತಿಯ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

2018ರಲ್ಲಿ ಮೊದಲ ಬಾರಿಗೆ ಹೊಸ ತಲೆಮಾರಿನ ಇನೋವಾ ಕ್ರಿಸ್ಟಾ ಬಿಡುಗಡೆ ಮಾಡಿದ್ದ ಟೊಯೊಟಾ ಕಂಪನಿಯು ಇದೀಗ ಫೇಸ್‌ಲಿಫ್ಟ್ ಮಾದರಿಯನ್ನು ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರಿನ ವಿನ್ಯಾಸದ ಕುರಿತಾದ ಪೇಟೆಂಟ್ ಚಿತ್ರಗಳು ಕೂಡಾ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿವೆ. ಇನೋವಾ ಕ್ರಿಸ್ಟಾ ಮಾದರಿಯು ದುಬಾರಿ ಬೆಲೆ ನಡುವೆಯೂ ಭಾರೀ ಪ್ರಮಾಣದ ಮಾರಾಟ ಸಂಖ್ಯೆಯನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಫೇಸ್‌ಲಿಫ್ಟ್ ಆವೃತ್ತಿ ಮೂಲಕ ಎಂಪಿವಿ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

ಫೇಸ್‌ಲಿಫ್ಟ್ ಕಾರು ಮಾದರಿಯು 2021ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆ ಪಡೆದುಕೊಂಡಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

ಹೊಸ ಕಾರು ಆವೃತ್ತಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದ್ದು, ಕಾರಿನ ಹೊರ ಮತ್ತು ಒಳ ಭಾಗದ ವಿನ್ಯಾಸಗಳಲ್ಲಿ ಮಹತ್ವದ ಬದಲಾವಣೆಗಳಾಗಿರುವುದು ರೋಡ್ ಟೆಸ್ಟಿಂಗ್ ಬಹಿರಂಗವಾಗಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

ಹೊಸ ಕಾರಿನಲ್ಲಿ ಮರವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್ಸ್ ಒಳಗೊಂಡ ಫ್ರಂಟ್ ಫಾಸಿಯಾ, ಮರುವಿನ್ಯಾಸಗೊಂಡ ಗ್ರಿಲ್ ಮತ್ತು ಬಂಪರ್, ಹೊಸ ಮಾದರಿಯ ಟೈಲ್ ಲ್ಯಾಂಪ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ನೀಡಲಾಗುತ್ತಿದ್ದು, ಹಿಂಭಾಗದ ಬಂಪರ್ ವಿನ್ಯಾಸದಲ್ಲಿ ಯಾವುದೇ ಹೊಸ ಬದಲಾವಣೆ ತಂದಿಲ್ಲ.

ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

ಹೊಸ ಕಾರಿನಲ್ಲಿ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆಗೊಂಡಿದ್ದು, ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ. ಎಂಜಿನ್ ಆಯ್ಕೆ ಮಾತ್ರ ಸದ್ಯ ಮಾರುಕಟ್ಟೆಯಲ್ಲಿನ ಮಾದರಿಯಂತೆ ಮುಂದುವರಿಯಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾ ಎಂಪಿವಿ ಕಾರಿನಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆವೃತ್ತಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಿದೆ.

ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

ಇದರ ಬೆನ್ನಲ್ಲೇ ಹೊಸ ಕಾರಿನಲ್ಲಿ ಮೊದಲ ಬಾರಿಗೆ ಹೊಸ ಕಾರಿನಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡಲು ಸಿದ್ದತೆ ನಡೆಸಲಾಗುತ್ತಿದ್ದು, ಸಿಎನ್‌ಜಿ ಆವೃತ್ತಿಯು ಡೀಸೆಲ್ ಕಾರಿಗಿಂತಲೂ ತುಸು ಹೆಚ್ಚಿನ ಮಟ್ಟದ ಮೈಲೇಜ್ ವೈಶಿಷ್ಟ್ಯತೆಯೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ರೋಡ್ ಟೆಸ್ಟಿಂಗ್ ನಡೆಸಿದ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಏಪ್ರಿಲ್ 1ರಿಂದಲೇ ಬಿಎಸ್-6 ಎಮಿಷನ್ ಜಾರಿಗೆ ತರಲಾಗಿದ್ದು, ಹೊಸ ನಿಯಮ ಅನುಸಾರವಾಗಿ ಬಹುತೇಕ ಕಾರು ಮಾದರಿಗಳು ಈಗಾಗಲೇ ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿವೆ. ಟೊಯೊಟಾ ಕೂಡಾ ಇನೋವಾ ಕ್ರಿಸ್ಟಾ ಸೇರಿದಂತೆ ವಿವಿಧ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

Source: Team BHP

Most Read Articles

Kannada
Read more on ಟೊಯೊಟಾ toyota
English summary
Toyota Innova Crysta Facelift Spotted Next To Current Model. Read in Kannada.
Story first published: Monday, October 5, 2020, 20:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X