ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಮೊದಲ ತಲೆಮಾರಿನ ಇನೋವಾ ಪರಿಚಯಿಸಿ 15 ವರ್ಷಗಳ ಸಂಭ್ರಮದ ಹಿನ್ನಲೆಯಲ್ಲಿ ಟೊಯೊಟಾ ಕಂಪನಿಯು ಲೀಡರ್‌ಶಿಪ್ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದ್ದು, ಹೊಸ ಎಡಿಷನ್ ಕಾರು ಸಾಮಾನ್ಯ ಆವೃತ್ತಿಗಿಂತಲೂ ವಿಭಿನ್ನವಾದ ಒಳವಿನ್ಯಾಸವನ್ನು ಪಡೆದುಕೊಂಡಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

2006ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದ ಇನೋವಾ ಕಾರು ಈ ತನಕ ಹಲವಾರು ಬದಲಾವಣೆಗಳೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿದ್ದು, ಬಿಡುಗಡೆಯ ದಿನದಿಂದ ಇದುವರೆಗೂ ಎಂಪಿವಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದೊಂದಿಗೆ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ಇದೀಗ ಇನೋವಾ ಕ್ರಿಸ್ಟಾ ಕಾರಿನಲ್ಲಿ ಸೀಮಿತ ಅವಧಿಗಾಗಿ ಲೀಡರ್‌ಶಿಪ್ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಮಧ್ಯಮ ಕ್ರಮಾಂಕದ ವಿಎಕ್ಸ್ ಟ್ರಿಮ್ ಆವೃತ್ತಿಯಲ್ಲಿ ಸ್ಪೆಷಲ್ ಎಡಿಷನ್ ಪರಿಚಯಿಸಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಸಾಮಾನ್ಯ ಕಾರು ಮಾದರಿಗಿಂತಲೂ ಲೀಡರ್‌ಶಿಪ್ ಎಡಿಷನ್‌ಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.21.21 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಹೊಸ ಕಾರಿನ ಬೆಲೆಯು ಸಾಮಾನ್ಯ ವಿಎಕ್ಸ್ ವೆರಿಯೆಂಟ್ ಮಾದರಿಗಿಂತಲೂ ರೂ.61 ಸಾವಿರದಷ್ಟು ಹೆಚ್ಚಳವಾಗಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆಮಾಡಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಲೀಡರ್‌ಶಿಪ್ ಎಡಿಷನ್ ಕಾರಿನಲ್ಲಿ ಟೊಯೊಟಾ ಸಂಸ್ಥೆಯು ಬಿಎಸ್-6 ಎಂಜಿನ್ ಅಳವಡಿಕೆ ಮಾಡಿದ್ದು, ಹೊಸ ಕಾರಿನ ಹೊರ ಮತ್ತು ಒಳವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಸ್ಪೆಷಲ್ ಎಡಿಷನ್‌ನಲ್ಲಿ ಹೆಚ್ಚುವರಿಯಾಗಿ ಕ್ರೋಮ್ ಗಾರ್ನಿಶ್, ಕಾರಿನ ಎರಡು ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿ ಲೀಡರ್‌ಶಿಪ್ ಬ್ಯಾಡ್ಜ್, ಕಪ್ಪು ಬಣ್ಣದ ಹೊರ ಕವಚ ಹೊಂದಿರುವ 17-ಇಂಚಿನ ಅಲಾಯ್ ಚಕ್ರಗಳು, ರಿಯರ್ ಸ್ಪಾಯ್ಲರ್, ಸೈಡ್ ಸ್ಕರ್ಟ್ ಮತ್ತು ಫ್ರಂಟ್ ಲಿಪ್ಸ್‌ಗಳನ್ನ ನೀಡಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಕಾರಿನ ಒಳಭಾಗದಲ್ಲೂ ಹಲವಾರು ಆಕರ್ಷಕ ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದ್ದು, ಲೀಡರ್‌ಶಿಪ್ ಹೆಸರುಪಡೆದುಕೊಂಡಿರುವ ಆಸನಗಳು, ಡ್ಯಾಶ್‌ಬೋರ್ಡ್ ಜೊತೆಗೆ ಕ್ಯಾಬಿನ್‌ನಲ್ಲೂ ಆಲ್ -ಬ್ಯಾಕ್ ಥೀಮ್ ಮುಂದುವರಿಸಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಜೊತೆಗೆ 360 ಡಿಗ್ರಿ ಕ್ಯಾಮೆರಾ, ಆಟೋ-ಫೋಲ್ಡಿಂಗ್ ರಿಯರ್ ವ್ಯೂ ಮಿರರ್, ಪೆಡಲ್ ಲ್ಯಾಂಪ್ಸ್, ಕೀ ಲೆಸ್ ಎಂಟ್ರಿ, ಫುಶ್ ಸ್ಟಾರ್ಟ್/ಸ್ಟಾಪ್ ಬಟನ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಪೆಷಲ್ ಎಡಿಷನ್‌ನಲ್ಲಿ ನೀಡಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಡ್ಯುಯಲ್ ಟೋನ್ ಕಲರ್ ಆಯ್ಕೆಯನ್ನು ನೀಡಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವೈಡ್‌ಫೈರ್ ರೆಡ್ ಜೊತೆ ಬ್ಲ್ಯಾಕ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಜೊತೆ ಬ್ಲ್ಯಾಕ್ ಬಣ್ಣವನ್ನು ಆಯ್ಕೆ ಮಾಡಬಹುದಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಕಾರು ಬಿಎಸ್-6 ವೈಶಿಷ್ಟ್ಯತೆಯ 2.4-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 148-ಬಿಚ್‌ಪಿ ಮತ್ತು 343-ಎನ್ಎಂ ಟಾರ್ಕ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಇನ್ನು ಸಾಮಾನ್ಯ ಆವೃತ್ತಿಯ ಇನೋವಾ ಕ್ರಿಸ್ಟಾ ಕಾರು ಆವೃತ್ತಿಯು ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.15.36 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.24.06 ಲಕ್ಷ ಬೆಲೆ ಹೊಂದಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾದಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಲೀಡರ್‌ಶಿಪ್ ಎಡಿಷನ್ ಬಿಡುಗಡೆ

ಹೊಸ ಎಮಿಷನ್ ಜೊತೆ ಬಿಎಸ್-6 ಇನೋವಾ ಕ್ರಿಸ್ಟಾ ಕಾರುಗಳಲ್ಲಿ ಈ ಬಾರಿ ಹಿಲ್ ಸ್ಟಾರ್ಟ್ ಅಸಿಸ್ಟ್, ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಎಮರ್ಜೆನ್ಸಿ ಬ್ರೇಕ್ ಸಿಗ್ನಲ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಬಿಎಸ್-4 ಮಾದರಿಗಿಂತ ಬಿಎಸ್-6 ಆವೃತ್ತಿಯು ರೂ. 1.32 ಲಕ್ಷದಷ್ಟು ದುಬಾರಿಯಾಗಿದೆ.

Article Published On: Tuesday, March 10, 2020, 14:05 [IST]
English summary
Toyota Innova Crysta Leadership Edition Launched In India. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+