ಮಾರಾಟ ನಂತರದ ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ಗ್ರಾಹಕ ಸೇವೆಗಳನ್ನು ಸಮರ್ಥವಾಗಿ ಪೂರೈಸಲು ಹೊಸದಾಗಿ ಪ್ರೊ ಸರ್ವಿಸ್ ಸೆಂಟರ್‌ಗಳ ಸ್ಥಾಪನೆಗೆ ಚಾಲನೆ ನೀಡಿದ್ದು, ಹೊಸ ಸರ್ವಿಸ್ ಸೆಂಟರ್‌ಗಳು ಎರಡನೇ ಮತ್ತು ಮೂರನೇ ದರ್ಜೆಗಳಲ್ಲಿ ಸ್ಥಾಪನೆಗೊಳ್ಳುತ್ತಿವೆ.

ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಹೊಸ ವಾಹನಗಳ ಮಾರಾಟ ಹೆಚ್ಚಿದಂತೆ ಅದಕ್ಕೆ ಪೂರಕವಾಗಿ ಗ್ರಾಹಕರ ಸೇವೆಗಳನ್ನು ಸಹ ಸಮರ್ಥವಾಗಿ ಪೂರೈಸುವುದು ಆಟೋ ಕಂಪನಿಗಳ ಜವಾಬ್ದಾರಿಯಾಗಿದ್ದು, ಟೊಯೊಟಾ ಕಂಪನಿಯು ಸಹ ಇದೀಗ ಮಹಾನಗರಗಳನ್ನು ಹೊರತುಪಡಿಸಿ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲೂ ಗ್ರಾಹಕರ ಸೇವೆಗಳನ್ನು ನಿಗದಿತ ಸಮಯದಲ್ಲಿ ಪೂರೈಸುವುದಕ್ಕಾಗಿ ಹೊಸ ಮಾದರಿಯ ಪ್ರೊ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದೆ.

ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಈ ವರ್ಷದ ಮೊದಲ ತಿಂಗಳಿನಲ್ಲಿಯೇ ಮೊದಲ ಪ್ರೊ ಸರ್ವಿಸ್ ಸೆಂಟರ್ ಸ್ಥಾಪಿಸಿದ್ದ ಟೊಯೊಟಾ ಕಂಪನಿಯು ಇದೀಗ ದೇಶದ ಪ್ರಮುಖ 80 ನಗರಗಳಲ್ಲಿ ಹೊಸ ಮಾದರಿಯ ಸರ್ವಿಸ್ ಸೆಂಟರ್‌ಗಳನ್ನು ವಿಸ್ತರಿಸಿದ್ದು, ಹೊಸ ಸರ್ವಿಸ್ ಸೆಂಟರ್‌ಗಳು ಆಯಾ ಭಾಗದ ಮುಖ್ಯ ಸರ್ವಿಸ್ ಸೆಂಟರ್‌ಗಳೊಂದಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ.

ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಮಾಹಾನಗರಗಳಲ್ಲಿರುವ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್‌ಗಳೊಂದಿಗೆ ಕಾರ್ಯನಿರ್ವಹಿಸುವ ಪ್ರೊ ಸರ್ವಿಸ್ ಸೆಂಟರ್‌ಗಳು ಯಾವುದೇ ರೀತಿಯಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿಲ್ಲವಾದರೂ ಮುಖ್ಯ ಸರ್ವಿಸ್ ಸೆಂಟರ್ ಲಭ್ಯವಾಗುವ ಎಲ್ಲಾ ಅಧಿಕೃತ ಬಿಡಿಭಾಗಗಳು ಪ್ರೊ ಸರ್ವಿಸ್ ಸೆಂಟರ್‌ಗಳಲ್ಲಿ ದೊರೆಯಲಿವೆ.

ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಸೇಲ್ಸ್ ಮತ್ತು ಸರ್ವಿಸ್ ಸೆಂಟರ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮತ್ತು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಸೇವೆಗಳನ್ನು ನೀಡಲು ಪ್ರೊ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಪ್ರೊ ಸರ್ವಿಸ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸಲು ಟೊಯೊಟಾ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ವಿವಿಧ ಹಂತದ ತರಬೇತಿ ಹೊಂದಿರುವ ಸಿಬ್ಬಂದಿಯನ್ನೇ ನೇಮಕಗೊಳಿಸಲಾಗಿದೆ.

ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಸಣ್ಣ-ಪುಟ್ಟ ಬಿಡಿಭಾಗಗಳ ರೀಪೆರಿ, ಕಂಪನಿ ವಾರಂಟಿಯಲ್ಲಿನ ನಿಯಮಿತ ಸರ್ವಿಸ್‌ಗಳು ಮತ್ತು ಪೆಟಿಂಗ್ ಸರ್ವಿಸ್‌ಗಳನ್ನು ಪ್ರೊ ಸರ್ವಿಸ್ ಸೆಂಟರ್‌ಗಳಲ್ಲೇ ಪಡೆದುಕೊಳ್ಳಬೇಕಿದ್ದು, ಎಂಜಿನ್ ವಿಭಾಗದಲ್ಲಿನ ಗಂಭೀರ ಸಮಸ್ಯೆಗಳಿದ್ದಲ್ಲಿ ಮಾತ್ರ ಮುಖ್ಯ ಸರ್ವಿಸ್ ಸೆಂಟರ್‌ಗಳಿಗೆ ಕಳುಹಿಸಿಕೊಡಲಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಪ್ರೊ ಸರ್ವಿಸ್ ಸೆಂಟರ್‌ಗಳಲ್ಲಿ ಟೊಯೊಟಾ ಕಂಪನಿಯು ತನ್ನ ಬ್ರಾಂಡ್ ಕಾರು ಮಾದರಿಗಳಿಗೆ ಮಾತ್ರ ಇತರೆ ಕಾರು ಮಾದರಿಗಳಿಗೂ ಸರ್ವಿಸ್ ಒದಗಿಸಲಿದ್ದು, ತನ್ನ ಕಾರುಗಳಿಗೆ ಮಾತ್ರವೇ ಅಧಿಕೃತ ಬಿಡಿಭಾಗಗಳನ್ನು ಪೂರೈಸಲಿದೆ.

ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಸದ್ಯ ಟೊಯೊಟಾ ಕಂಪನಿಯು ಭಾರತದ ಪ್ರಮುಖ ನಗರಗಳಲ್ಲಿ ವಾಹನ ಮಾರಾಟ ಜಾಲವನ್ನು ವಿಸ್ತರಣೆ ಮಾಡುವುದರ ಜೊತೆಗೆ ಹಲವಾರು ಹೊಸ ಉತ್ಪನ್ನಗಳೊಂದಿಗೆ ಗ್ರಾಹಕರ ಮೆಚ್ಚುಗೆಗೆ ಕಾರಣವಾಗುತ್ತಿದ್ದು, ಮಾರಾಟದಲ್ಲೂ ಕೂಡಾ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಪೈಪೋಟಿಯಾಗಿ ಬೆಳವಣಿಗೆ ಸಾಧಿಸುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಗ್ರಾಹಕ ಸೇವೆಗಳನ್ನು ಹೆಚ್ಟಿಸಲು ಪ್ರೊ ಸರ್ವಿಸ್ ಸೆಂಟರ್ ತೆರೆದ ಟೊಯೊಟಾ

ಹೀಗಿರುವಾಗ ಗ್ರಾಹಕ ಸೇವೆಗಳು ಕಾರುಗಳ ಮಾರಾಟಕ್ಕೆ ಹೆಚ್ಚು ಪೂರಕವಾಗಿದ್ದು, ವ್ಯವಸ್ಥಿತ ಸರ್ವಿಸ್ ಸೆಂಟರ್ ಲಭ್ಯತೆ ಮೇಲೆ ಕಾರುಗಳ ಖರೀದಿಗೆ ಗ್ರಾಹಕರ ನಿರ್ಧಿಸುತ್ತಾರೆ. ಈ ನಿಟ್ಟಿನಲ್ಲಿ ಟೊಯೊಟಾ ಪ್ರೊ ಸರ್ವಿಸ್ ಸೆಂಟರ್‌ಗಳು ಸಾಕಷ್ಟು ಸಹಕಾರಿಯಾಗಿದ್ದು, ತನ್ನ ಬ್ರಾಂಡ್ ಮಾದರಿಗಳಿಗೆ ಮಾತ್ರವಲ್ಲ ಇತರೆ ಕಾರುಗಳಿಗೂ ಸರ್ವಿಸ್ ನೀಡುತ್ತಿರುವುದು ಕಾರು ಕಂಪನಿಗೆ ಮತ್ತಷ್ಟು ಆದಾಯ ತಂದುಕೊಡಲಿದೆ.

Article Published On: Thursday, October 29, 2020, 13:33 [IST]
English summary
Toyota Kirloskar Motor Enhances Its Service Network Across India. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+