ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಇನೋವಾ ಬಿಡುಗಡೆ ಮಾಡಿ 15 ವರ್ಷಗಳ ಸಂಭ್ರಮದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆಯು ಸದ್ಯ ಹೊಸ ತಲೆಮಾರಿನ ಇನೋವಾ ಕ್ರಿಸ್ಟಾ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಬಿಎಸ್-6 ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಸುಳಿವು ನೀಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಮುಂಬರುವ ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮ ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಟೊಯೊಟಾ ಸಂಸ್ಥೆಯು ಇನೋವಾ ಕ್ರಿಸ್ಟಾ ಸೇರಿದಂತೆ ತನ್ನ ಪ್ರಮುಖ ಕಾರು ಮಾದರಿಗಳನ್ನು ಹೊಸ ನಿಯಮ ಅನುಸಾರ ಉನ್ನತೀಕರಿಸುತ್ತಿದೆ. ಇದರಲ್ಲಿ ಮೊದಲ ಹಂತವಾಗಿ ಇನೋವಾ ಕ್ರಿಸ್ಟಾ ಕಾರಿನ ಅಧಿಕೃತ ಬುಕ್ಕಿಂಗ್ ಆರಂಭಗೊಂಡಿದ್ದು, ಶೀಘ್ರದಲ್ಲೇ ಹೊಸ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡಲು ಭರ್ಜರಿ ಸಿದ್ದತೆ ನಡೆಸಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಬಿಎಸ್-6 ನಿಯಮ ಪಾಲನೆಗಾಗಿ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಕೈಬಿಡುತ್ತಿರುವ ಕಾರು ಉತ್ಪಾದನಾ ಸಂಸ್ಥೆಗಳು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್‌ ಎಂಜಿನ್ ಆಯ್ಕೆಯತ್ತ ಮುಖ ಮಾಡುತ್ತಿದ್ದು, ಟೊಯೊಟಾ ಕೂಡಾ ಇದೇ ಮೊದಲ ಬಾರಿಗೆ ಇನೋವಾ ಕ್ರಿಸ್ಟಾದಲ್ಲೂ ಹೈಬ್ರಿಡ್ ವರ್ಷನ್ ಪರಿಚಯಿಸುತ್ತಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಟೊಯೊಟಾ ಸಂಸ್ಥೆಯು ಹೈಬ್ರಿಡ್ ತಂತ್ರಜ್ಞಾನದಲ್ಲಿ ಈಗಾಗಲೇ ಮುಂಚೂಣಿ ಸಾಧಿಸುತ್ತಿದ್ದು, ಕ್ಯಾಮ್ರಿ ಸೆಡಾನ್ ಆವೃತ್ತಿಯಲ್ಲಿ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಮಾರಾಟ ಮಾಡುತ್ತಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಇದೀಗ ಬಿಎಸ್-6 ನಿಯಮದಂತೆ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಟೊಯೊಟಾ ಸಂಸ್ಥೆಯು ಪೆಟ್ರೋಲ್ ಮಾದರಿಯಲ್ಲಿ ಹೈಬ್ರಿಡ್ ವರ್ಷನ್ ಪರಿಚಯಿಸುವ ಸಾಧ್ಯತೆಗಳಿದ್ದು, 2.7-ಲೀಟರ್ ಎಂಜಿನ್‌ನಲ್ಲಿಯೇ ಹೈಬ್ರಿಡ್ ಆಯ್ಕೆಯನ್ನು ನೀಡುತ್ತಾ ಅಥವಾ ಹೊಸ ಎಂಜಿನ್ ಬಿಡುಗಡೆ ಮಾಡಲಿದೆಯಾ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಹೊಸ ಕಾರಿನಲ್ಲಿ ಅಗತ್ಯ ಬದಲಾವಣೆ ಅವಶ್ಯಕತೆಯಿದ್ದು, ಗ್ರಾಹಕರ ಮತ್ತೊಮ್ಮೆ ಮುಂಚೂಣಿ ಸಾಧಿಸುವುದಲ್ಲಿ ಯಾವುದೇ ಅನುಮಾನವಿಲ್ಲ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಕಾರುಗಳಿಗೆ ಸಂಕಷ್ಟ ಎದುರಾಗಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿ ಎಂಜಿನ್ ಉನ್ನತಿಕರಿಸಬೇಕು ಇಲ್ಲವೇ ಮಾರಾಟವನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಸದ್ಯ ಇನೋವಾ ಕ್ರಿಸ್ಟಾ ಕಾರು ಟೂರಿಸ್ಟ್ ಮತ್ತು ವ್ಯಯಕ್ತಿಯ ಬಳಕೆ ಕಾರುಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿದ್ದು, ಗ್ರಾಹಕರ ಬೇಡಿಕೆಯಂತೆ 2.4-ಲೀಟರ್ ಡೀಸೆಲ್, 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಇವುಗಳಲ್ಲಿ 2.4-ಲೀಟರ್ ಡಿಸೇಲ್ ಎಂಜಿನ್ ಮಾದರಿಯು ಟೂರಿಸ್ಟ್ ವಿಭಾಗದ ಬಳಕೆಯಲ್ಲಿ ಅತಿಹೆಚ್ಚು ಮಾರಾಟವಾಗುವ ದುಬಾರಿ ಕಾರು ಮಾದರಿಯಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಮತ್ತಷ್ಟು ದುಬಾರಿಯಾಗಲಿವೆ ಕಾರು ಬೆಲೆ..!

ಸದ್ಯ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಕಾರು ಆನ್‌ರೋಡ್ ಬೆಲೆ ಪ್ರಕಾರ ಆರಂಭಿಕವಾಗಿ ರೂ. 18.88 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.29.65 ಲಕ್ಷ ಬೆಲೆ ಹೊಂದಿದ್ದು, ಬಿಎಸ್-6 ಎಂಜಿನ್ ಜೋಡಣೆಯ ನಂತರ ಮತ್ತಷ್ಟು ದುಬಾರಿಯಾಗಲಿದೆ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತಲೂ ಪೆಟ್ರೋಲ್ ಕಾರಿನ ಬೆಲೆಯಲ್ಲಿ ರೂ.50 ಸಾವಿರದಿಂದ ರೂ.80 ಸಾವಿರ ದುಬಾರಿಯಾದಲ್ಲಿ, ಡೀಸೆಲ್ ಎಂಜಿನ್ ಕಾರಿನ ಬೆಲೆಯು ರೂ.1.50 ಲಕ್ಷದಿಂದ ರೂ.2.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಬಿಎಸ್-6 ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಕ್ರಿಸ್ಟಾ ಖರೀದಿಗೆ ಅಧಿಕೃತ ಬುಕ್ಕಿಂಗ್ ಶುರು...

ಬಿಎಸ್-6 ಡೀಸೆಲ್ ಎಂಜಿನ್ ಉನ್ನತೀಕರಣದ ಕುರಿತು ಮಾತನಾಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಅವರು, ಬಿಎಸ್-6 ಜಾರಿ ನಂತರವೂ ಪೆಟ್ರೋಲ್ ಜೊತೆಗೆ ಹೊಸ ನಿಯಮದ್ವನ ಉನ್ನತೀಕರಣಗೊಂಡ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯು ಮುಂದುವರೆಯಲಿದೆ ಎಂದಿದ್ದಾರೆ.

Article Published On: Monday, January 6, 2020, 11:04 [IST]
English summary
Toyota Kirloskar Motor opens bookings for BS-VI Compliant Innova Crysta. Read more in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+