ಮಾರುತಿ ಸುಜುಕಿ ಬಳಕೆ ಮಾಡುವ ಬಿಡಿಭಾಗಗಳನ್ನು ಬಳಕೆ ಮಾಡಲಿದೆಯೆಂತೆ ಟೊಯೊಟಾ
ಸಹಭಾಗಿತ್ವದ ಯೋಜನೆ ಅಡಿ ಮಾರುತಿ ಸುಜುಕಿ ಮತ್ತು ಯೊಟೊಟಾ ಕಂಪನಿಗಳು ಈಗಾಗಲೇ ಹೊಸ ಕಾರುಗಳ ಉತ್ಪಾದನಾ ಯೋಜನೆಯನ್ನು ಈಗಾಗಲೇ ಚಾಲನೆ ನೀಡಿರುವುದಲ್ಲದೇ ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆಗೆ ಸಿದ್ದಗೊಳ್ಳುತ್ತಿದ್ದು, ಹೊಸ ವಾಹನಗಳ ಉತ್ಪಾದನಾ ವೆಚ್ಚ ತಗ್ಗಿಸಲು ಟೊಯೊಟಾ ಕಂಪನಿಯು ಹೊಸ ಪ್ಲ್ಯಾನ್‌ಗೆ ಮುಂದಾಗಿದೆ.

2017ರಲ್ಲಿ ಮೊದಲ ಬಾರಿಗೆ ಸಹಭಾಗಿತ್ವದ ಯೋಜನೆ ಅಡಿ ರೀಬ್ಯಾಡ್ಜ್ ಕಾರುಗಳ ನಿರ್ಮಾಣಕ್ಕೆ ಚಾಲನೆ ನೀಡಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಮೊದಲ ಹಂತದಲ್ಲಿ ಗ್ಲಾಂಝಾ ಹ್ಯಾಚ್‌ಬ್ಯಾಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ರೀಬ್ಯಾಡ್ಜ್ ಜೊತೆಗೆ ಮಧ್ಯಮ ಕ್ರಮಾಂಕದ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳನ್ನು ಪರಿಚಯಿಸಲು ಎರಡು ಕಂಪನಿಗಳು ಸಹ ಯೋಜನೆ ರೂಪಿಸುತ್ತಿವೆ.

ಮಾರುತಿ ಸುಜುಕಿ ಈಗಾಗಲೇ ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಮಾರುಕಟ್ಟೆಯಲ್ಲಿರುವ ಬಹುತೇಕ ಕಾರುಗಳು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಇದೀಗ ಮಾರುತಿ ಸುಜುಕಿ ಜೊತೆ ಕೈಜೋಡಿಸಿರುವ ಟೊಯೊಟಾ ಸಂಸ್ಥೆಯು ತನ್ನ ಪ್ರೀಮಿಯಂ ಕಾರುಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಬೆಲೆ ಹೆಚ್ಚಳವನ್ನು ತಗ್ಗಿಸುವುದರೊಂದಿಗೆ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿದ್ದು, ಬಿಡಿಭಾಗಗಳ ಬಳಕೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ಧರಿಸಿದೆ.

ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿ ಕಂಪನಿಗೆ ಪೂರೈಕೆ ಮಾಡುವ ಬಿಡಿಭಾಗಗಳ ಉತ್ಪಾದನಾ ಕಂಪನಿಗಳಿಂದಲೇ ಟೊಯೊಟಾ ಕೂಡಾ ಬಿಡಿಭಾಗಗಳನ್ನು ಪಡೆದುಕೊಳ್ಳಲು ಮುಂದಾಗಿದ್ದು, ಮುಂಬರುವ ಹೊಸ ಬಜೆಟ್ ಬೆಲೆಯ ಕಾರುಗಳಲ್ಲಿ ಹೊಸ ಮಾದರಿಯ ಬಿಡಿಭಾಗಳನ್ನು ಬಳಸಿಕೊಳ್ಳಲು ಮುಂದಾಗಿದೆ.
ಹೊಸ ಯೋಜನೆಯಿಂದ ಕಾರುಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದಾದ ಬಗ್ಗೆ ಚಿಂತನೆ ನಡೆಸಿರುವ ಟೊಯೊಟಾ ಸಂಸ್ಥೆಯು ಗುಣಮಟ್ಟವನ್ನು ಸಹ ಕಾಯ್ದುಕೊಳ್ಳುವಲ್ಲಿ ಎಚ್ಚರ ವಹಿಸುತ್ತಿದ್ದು, ಸಾಧ್ಯವಷ್ಟು ಮಟ್ಟಿಗೆ ವೆಚ್ಚ ಕಡಿತಗೊಳಿಸುವಂತಹ ಬಿಡಿಭಾಗಗಳನ್ನು ಮಾರುತಿ ಸುಜುಕಿ ಬಿಡಿಭಾಗಗಳ ಪೂರೈಕೆದಾರರಿಂದ ಪಡೆದುಕೊಳ್ಳುವ ಯೋಜನೆಯಲ್ಲಿದೆ.

ಹೊಸ ಯೋಜನೆಯಿಂದ ಕಾರು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಸಾಕಷ್ಟು ಅನುಕೂರವಾಗಿದ್ದು, ಹೊಸ ಯೋಜನೆ ಕುರಿತು ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿದೆ.

ಇನ್ನು ಸಹಭಾಗಿತ್ವದ ಯೋಜನೆ ಅಡಿ ಶೀಘ್ರದಲ್ಲೇ ಮಾರುತಿ ಸುಜುಕಿ ನಿರ್ಮಾಣದ ಎರ್ಟಿಗಾ ಮತ್ತು ವಿಟಾರಾ ಬ್ರೆಝಾ ಕಾರುಗಳನ್ನು ರೀಬ್ಯಾಡ್ಜ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಟೊಯೊಟಾ ಕಂಪನಿಯು ಹೊಸ ಕಾರುಗಳನ್ನು ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುತ್ತಿದೆ.

ಒಂದು ವೇಳೆ ಹೊಸ ಕಾರುಗಳಲ್ಲಿ ಟೊಯೊಟಾ ಪೂರೈಕೆದಾರರು ಪೂರೈಸುವ ಬಿಡಿಭಾಗಗಳನ್ನು ಉಪಯೋಗಿಸಿದ್ದಲ್ಲಿ ಮೂಲ ಕಾರುಗಳ ಬೆಲೆಗಳಿಂತಲೂ ದುಬಾರಿಯಾಗಲಿದ್ದು, ಈ ಹಿನ್ನಲೆಯಲ್ಲಿ ಮೂಲ ಕಾರುಗಳ ಬೆಲೆಯಲ್ಲೇ ರೀಬ್ಯಾಡ್ಜ್ ಕಾರುಗಳನ್ನು ಪರಿಚಯಿಸಲು ಯೋಜಿಸಲಾಗಿದೆ.

ಇದಕ್ಕಾಗಿಯೇ ಬಲೆನೊ ಕಾರನ್ನು ಗ್ಲಾಂಝಾ ಹೆಸರಿನೊಂದಿಗೆ ಬಿಡುಗಡೆಯ ನಂತರ ಯಾವುದೇ ಹೊಸ ರೀಬ್ಯಾಜ್ಡ್ ಕಾರನ್ನು ಬಿಡುಗಡೆ ಮಾಡದ ಟೊಯೊಟಾ ಸಂಸ್ಥೆಯು ಕಾರುಗಳ ಬಿಡಿಭಾಗಗಳ ವೆಚ್ಚದ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದೆ.

ಇದಲ್ಲದೇ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮದಿಂದಾಗಿ ಟೊಯೊಟಾ ಸಂಸ್ಥೆಯು ಇಟಿಯಾಸ್ ಸರಣಿಯ ಎಲ್ಲಾ ಕಾರು ಮಾದರಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಮಾರುತಿ ಸುಜಕಿಯ ರೀಬ್ಯಾಡ್ಜ್ ಆವೃತ್ತಿಗಳ ಮೇಲೆ ಗಮನಹರಿಸುತ್ತಿದೆ.

ಜೊತೆಗೆ ರೀಬ್ಯಾಡ್ಜ್ ಕಾರುಗಳಲ್ಲಿ ವಿಶೇಷವಾಗಿ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿರುವುದು ಕೂಡಾ ಉತ್ಪಾದನಾ ವೆಚ್ಚವು ಹೆಚ್ಚಳವಾಗುವುದಕ್ಕೆ ಪ್ರಮುಖ ಕಾರಣವಾಗಿದ್ದು, ಇದರಿಂದ ಕೈಗೆಟುಕುವ ಬೆಲೆ ಮತ್ತು ಉತ್ತಮ ಮೈಲೇಜ್‌ನೊಂದಿಗೆ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಬಿಡಿಭಾಗಗಳ ಬಳಕೆಯಲ್ಲಿ ಬದಲಾವಣೆ ತರುತ್ತಿದೆ.


Click it and Unblock the Notifications








