ಬರೋಬ್ಬರಿ 8 ಲಕ್ಷ ಕಿ.ಮೀ ಓಡಿದ್ರು ಸುಸ್ಥಿತಿಯಲ್ಲಿದೆ ಟೊಯೊಟಾ ನಿರ್ಮಾಣದ ಕ್ವಾಲಿಸ್...!
ಆಟೋ ಉದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ಉತ್ಪಾದನೆಯಲ್ಲಿ ಹಲವಾರು ಬದಲಾವಣೆಗಳಾವುದಲ್ಲದೆ ಗ್ರಾಹಕರ ಅಭಿರುಚಿ ಕೂಡಾ ಹೊಸತನದತ್ತ ಗಮನಸೆಳೆಯುತ್ತದೆ. ಆದ್ರೆ ಹೊಸ ವಾಹನಗಳು ಎಷ್ಟೇ ಬದಲಾವಣೆ ಪಡೆದುಕೊಂಡು ಮಾರುಕಟ್ಟೆ ಪ್ರವೇಶಿಸಿದರೂ ಹಳೆಯ ವಾಹನಗಳಲ್ಲಿನ ಕೆಲವು ವಿಶೇಷ ಗುಣವೈಶಿಷ್ಟ್ಯತೆಗಳು ನಮಗೆ ಮರಳಿ ಸಿಗಲಾರವು.

ಹೌದು, ಇಂತಹ ಅನುಭವವು ಹಳೆಯ ವಾಹನಗಳನ್ನು ಬಳಕೆ ಮಾಡಿ ಇದೀಗ ಹೊಸ ವಾಹನಗಳನ್ನು ಬಳಕೆ ಮಾಡುತ್ತಿರುವ ಬಹುತೇಕರ ಮನಸ್ಸಿನಲ್ಲಿ ಬರುವುದುಂಟು. ಇದಕ್ಕೆ ಕಾರಣ, ಕಳೆದ ಕೆಲ ವರ್ಷಗಳ ಹಿಂದಷ್ಟೇ ಮಾರುಕಟ್ಟೆಯಲ್ಲಿದ್ದ ವಾಹನಗಳಿಗೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಗಳಲ್ಲಿನ ವೈಶಿಷ್ಟ್ಯತೆಗಳಿಗೂ ಹೋಲಿಕೆ ಮಾಡಿದ್ದಲ್ಲಿ ಹಳೆಯ ವಾಹನಗಳ ಬಳಕೆಯೇ ಉತ್ತಮವಾಗಿತ್ತು ಎನ್ನುವುದು ಹಲವರ ಅಭಿಪ್ರಾಯ.

ಹಳೆಯ ಕಾರುಗಳಲ್ಲಿ ಲಭ್ಯವಾಗುವ ಕೆಲವೊಂದು ಅತ್ಯುನ್ನತ್ತ ವೈಶಿಷ್ಟ್ಯಗಳು ನಮಗೆ ಹೊಸ ಕಾರುಗಳಲ್ಲಿ ದೊರಕಲಾರದು. ಉದಾಹರಣೆ ನಿರ್ಮಾಣದ ಗುಣಮಟ್ಟ, ಚಾಲನಾ ಅನುಭವ, ಕಾರಿನ ಒಳಾಂಗಣ ಸ್ಥಳಾವಕಾಶ ಹೀಗೆ ಹತ್ತು ಹಲವಾರು ವಿಚಾರಗಳ ಬಗ್ಗೆ ಪಟ್ಟಿ ಮಾಡಿ ಹೇಳಬಹುದು.

ಹಾಗಿರುವಾಗ ಶಾಶ್ವತವಾಗಿ ಅಳಿಸಿ ಹೋಗಿರುವ ಹಲವಾರು ಕಾರುಗಳ ಸಾನಿಧ್ಯವನ್ನು ನಾವು ಮತ್ತೆ ಮತ್ತೆ ಬಯಸುತ್ತಲೇ ಇರುತ್ತೇವೆ. ಅಂತಹ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟಾ ಕ್ವಾಲಿಸ್ ಕೂಡಾ ಒಂದು ಎಂದ್ರೆ ತಪ್ಪಾಗುವುದಿಲ್ಲ.

2000ನೇ ಇಸವಿಯಲ್ಲಿ ದೇಶಿಯ ಮಾರುಕಟ್ಟೆ ಪ್ರವೇಶಿಸಿದ್ದ ಕ್ವಾಲಿಸ್ ಎಸ್‌ಯುವಿ ಕಾರು ಅತಿ ಕಡಿಮೆ ಅವಧಿಯಲ್ಲಿ ವಿಶ್ವಾಸಾರ್ಹ ಎಂಜಿನ್, ಐಷಾರಾಮಿ ಸೌಲಭ್ಯಗಳೊಂದಿಗೆ ಗ್ರಾಹಕರ ಹೃದಯಕ್ಕೆ ಹತ್ತಿರವಾಗಿತ್ತು.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

2005ರಲ್ಲಿ ಮೊದಲ ತಲೆಮಾರಿನ ಇನೋವಾ ಪರಿಚಯಿಸುವ ಕೆಲವೇ ದಿನಗಳ ಮುನ್ನ ಕ್ವಾಲಿಸ್ ಉತ್ಪಾದನೆಯನ್ನು ಅಧಿಕೃತವಾಗಿ ಬಂದ್ ಮಾಡಿದ್ದ ಟೊಯೊಟಾ ಕಂಪನಿಯು 2004ರ ಕೊನೆಯಲ್ಲಿ ಕ್ವಾಲಿಸ್ ಮಾರಾಟವನ್ನು ಪೂರ್ಣಗೊಳಿಸಿ ಹೊಸ ಕಾರು ಮಾದರಿಗಳತ್ತ ಮುಖ ಮಾಡಿತು.

ಕ್ವಾಲಿಸ್ ಕಾರಿನ ಮಾರಾಟವು 2004ಕ್ಕೆ ಕೊನೆಯಾದರೂ ಈಗಲೂ ಕೂಡಾ ಕ್ವಾಲಿಸ್ ಜನಪ್ರಿಯತೆಯು ತಗ್ಗಿಲ್ಲ. ಇದಕ್ಕೆ ನಿದರ್ಶನ ಕೇರಳದಲ್ಲಿ ಮಾರಾಟವಾಗಿದ್ದ ಮೊದಲ ತಲೆಮಾರಿನ ಕ್ವಾಲಿಸ್ ಕಾರು 20 ವರ್ಷವಾದ್ರು ಯಾವುದೇ ತಾಂತ್ರಿಕ ತೊಂದರೆಯಿಲ್ಲದೆ 8 ಲಕ್ಷ ಕಿ.ಮೀ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

2000ನೇ ಇಸವಿಯಲ್ಲಿ ಕ್ವಾಲಿಸ್ ಮಾರಾಟ ಆರಂಭವಾದ ಹೊಸದರಲ್ಲಿ ಖರೀದಿಸಲಾಗಿದ್ದ ಈ ಕಾರು ಯಶಸ್ವಿಯಾಗಿ 20ನೇ ವರ್ಷ ಪೂರೈಸಿದ್ದು, ಖರೀದಿ ಮಾಡಿದ ಹೊಸದರಲ್ಲಿ ಇದ್ದ ಎಂಜಿನ್ ಕಾರ್ಯಕ್ಷಮತೆಯಲ್ಲಿ ಈಗಲೂ ಕೂಡಾ ಕಡಿಮೆ ಆಗಿಲ್ಲ.

ಕಾರಿನ ಬಣ್ಣವು ಮಾಸಿರುವುದನ್ನು ಹೊರತುಪಡಿಸಿ ಕಾರಿನ ಎಂಜಿನ್, ಗೇರ್‌ಬಾಕ್ಸ್, ಬ್ರೇಕ್, ಕ್ಲಚ್ ಕಾರ್ಯಕ್ಷಮತೆಯು ಉತ್ತಮ ಸ್ಥಿತಿಯಲ್ಲಿದ್ದು, ಕಾಲಕಾಲಕ್ಕೆ ಸರ್ವೀಸ್ ಮಾಡಿಸಿರುವುದರಿಂದ ಕಾರಿನ ಕ್ಷಮತೆಯಲ್ಲಿ ಯಾವುದೇ ದೊಡ್ಡ ವ್ಯತ್ಯಾಸವಾಗಿಲ್ಲ.
MOST READ: ಲಾಕ್‌ಡೌನ್ ಸಂಕಷ್ಟ: ವಾಹನ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ

ಹೀಗಾಗಿ ಓಡೊ ಮೀಟರ್‌ನಲ್ಲಿ 8.22 ಲಕ್ಷ ಕಿ.ಮೀ ಗುರಿತಲುಪಿದರೂ ಎಂಜಿನ್ ಕಾರ್ಯಕ್ಷಮತೆಯಲ್ಲಿ ಉತ್ತಮವಾಗಿದ್ದು, ಕಾರಿನ ಗುಣಮಟ್ಟ ಮತ್ತು ವಿಶ್ವಾಸರ್ಹ ಎಂಜಿನ್ ಕುರಿತಾಗಿ ಕಾರಿನ ಮಾಲೀಕರೇ ತಮ್ಮಅನುಭವ ಹಂಚಿಕೊಂಡಿದ್ದಾರೆ.
2.4-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುವ ಕ್ವಾಲಿಸ್ ಎಸ್‌ಯುವಿ ಕಾರು 10 ಸೀಟರ್ ಸೌಲಭ್ಯ ಹೊಂದಿತ್ತು. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 75-ಬಿಎಚ್‌ಪಿ, 151-ಎನ್ಎಂ ಟಾರ್ಕ್‌ನೊಂದಿಗೆ ಸರಾಸರಿಯಾಗಿ 12 ಕಿ.ಮೀ ಮೈಲೇಜ್ ಹಿಂದಿರುಗಿಸುವ ಗುಣವೈಶಿಷ್ಟ್ಯತೆ ಹೊಂದಿದೆ.
MOST READ: ಅಕ್ಟೋಬರ್ 1ರಿಂದ ಹೊಸ ಸ್ಟಿಕ್ಕರ್ ಹೊಂದಲಿವೆ ಬಿಎಸ್ 6 ವಾಹನಗಳು

2004ರ ಸಮಯದಲ್ಲಿ ಗ್ರಾಹಕರ ಬೇಡಿಕೆಯೆಂತೆ ಬರೋಬ್ಬರಿ 36 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದ ಕ್ವಾಲಿಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.89 ಲಕ್ಷ ಬೆಲೆ ಹೊಂದಿತ್ತು. ತದನಂತರ ಬಂದ ಇನೋವಾ ಕಾರು ಇದೀಗ ಎಂಪಿವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.


Click it and Unblock the Notifications