ಅಕ್ಟೋಬರ್ 1ರಿಂದ ಹೊಸ ಸ್ಟಿಕ್ಕರ್ ಹೊಂದಲಿವೆ ಬಿಎಸ್ 6 ವಾಹನಗಳು
ದೇಶಾದ್ಯಂತ ಏಪ್ರಿಲ್ 1ರಿಂದ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬಂದಿವೆ. ಬಿಎಸ್ 6 ವಾಹನಗಳನ್ನು ಗುರುತಿಸಲು ಆ ವಾಹನಗಳಲ್ಲಿ ಹಸಿರು ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುವುದು. ಇದು ಬಿಎಸ್ 6 ವಾಹನಗಳಿಗೆ ವಿಶಿಷ್ಟವಾದ ಗುರುತನ್ನು ನೀಡಲಿದೆ. ಈ ವರ್ಷದ ಅಕ್ಟೋಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಬಿಎಸ್ 6 ವಾಹನಗಳ ನಂಬರ್ ಪ್ಲೇಟ್‌ನಲ್ಲಿ ಹಸಿರು ಸ್ಟಿಕ್ಕರ್ ಅಳವಡಿಸುವುದು ಕಡ್ಡಾಯ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಆದೇಶದಲ್ಲಿ ಹೇಳಲಾಗಿದೆ. 1 ಸೆಂ.ಮೀನ ಈ ಸ್ಟಿಕ್ಕರ್ ಅನ್ನು ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ವಿಂಡ್‌ಶೀಲ್ಡ್ ಒಳಗೆ ಹಾಗೂ ದ್ವಿಚಕ್ರ ವಾಹನ ನಂಬರ್ ಪ್ಲೇಟ್‌ಗಳಲ್ಲಿ ಅಳವಡಿಸಬಹುದು.

ಮೋಟಾರು ವಾಹನ ಕಾಯ್ದೆ 2018ರಡಿಯಲ್ಲಿರುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಈ ಆದೇಶವನ್ನು ತರಲಾಗಿದೆ. ಬಿಎಸ್ 6 ಪೆಟ್ರೋಲ್ ಹಾಗೂ ಸಿಎನ್‌ಜಿ ವಾಹನಗಳಿಗೆ ತಿಳಿ ನೀಲಿ ಬಣ್ಣದ ಹಾಗೂ ಡೀಸೆಲ್ ವಾಹನಗಳಿಗೆ ಆರೆಂಜ್ ಬಣ್ಣದ ಸ್ಟಿಕ್ಕರ್ ಅಳವಡಿಸಲಾಗುವುದು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಎಲ್ಲಾ ರೀತಿಯ ವಾಹನಗಳಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಲು 2019ರ ಏಪ್ರಿಲ್ 1ರಂದು ಇಲಾಖೆಯು ಸುತ್ತೋಲೆ ಹೊರಡಿಸಿತ್ತು. ಕಳೆದುಹೋದ ಅಥವಾ ಕಳವು ಮಾಡಲಾದ ವಾಹನಗಳನ್ನು ಪತ್ತೆಹಚ್ಚಲು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳು ನೆರವಾಗುತ್ತವೆ.

ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳು ಸಾಮಾನ್ಯ ನಂಬರ್ ಪ್ಲೇಟ್‌ಗಳಂತೆ ಕಂಡು ಬಂದರೂ ಅದರಲ್ಲಿರುವ ಟೆಕ್ನಿಕಲ್ ಅಂಶಗಳು ಅವುಗಳನ್ನು ಭಿನ್ನವಾಗಿಸುತ್ತವೆ. ಈ ಕಾರಣಕ್ಕೆ ವಾಹನ ಮಾಲೀಕರಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳುವಂತೆ ಇಲಾಖೆಯು ತನ್ನ ಸುತ್ತೋಲೆಯಲ್ಲಿ ಸೂಚಿಸಿತ್ತು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ನಲ್ಲಿ ಕ್ರೋಮಿಯಂ ಹೊಲೊಗ್ರಾಮ್ ಸ್ಟಿಕ್ಕರ್ ಬಳಸಲಾಗುತ್ತದೆ. ಇದರಲ್ಲಿ ವಾಹನದ ರಿಜಿಸ್ಟ್ರೇಷನ್ ನಂಬರ್, ಎಂಜಿನ್ ನಂಬರ್, ಚಾಸಿಸ್ ನಂಬರ್ ಮುಂತಾದ ವಿವರಗಳಿರುತ್ತವೆ. ಹೊಲೊಗ್ರಾಮ್ ಸ್ಟಿಕ್ಕರ್‌ನಲ್ಲಿ, ಈ ಮಾಹಿತಿಯನ್ನು ಬಿಸಿ-ಸ್ಟ್ಯಾಂಪಿಂಗ್ ಯಂತ್ರದ ಮೂಲಕ ದಾಖಲಿಸಲಾಗುತ್ತದೆ.

ಈ ವಿವರಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಯಂತ್ರದಿಂದ ಮಾತ್ರ ನೋಡಬಹುದು. ಕಾರು ಅಥವಾ ಬೈಕುಗಳನ್ನು ಕದ್ದ ನಂತರ ಅವುಗಳ ನಂಬರ್ ಪ್ಲೇಟ್‌ಗಳನ್ನು ಬದಲಿಸಲಾಗುತ್ತದೆ. ಇದರಿಂದಾಗಿ ಪೊಲೀಸರಿಗೆ ವಾಹನವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು ಅಳವಡಿಸಿದ ನಂತರ ಅದರಲ್ಲಿರುವ ಸ್ಟಿಕ್ಕರ್ ಅನ್ನು ತೆಗೆದುಹಾಕಲಾಗುವುದಿಲ್ಲ. ಸ್ಟಿಕ್ಕರ್ ತೆಗೆಯಲು ಪ್ರಯತ್ನಿಸಿದರೆ ಸ್ಟಿಕ್ಕರ್ ಹೊಂದಿರುವ ನಂಬರ್ ಪ್ಲೇಟ್ ಸಹ ಹಾಳಾಗುತ್ತದೆ.

ಟ್ರಾಫಿಕ್ ಪೊಲೀಸರ ಬಳಿಯಿರುವ ತಂತ್ರಜ್ಞಾನದ ನೆರವಿನಿಂದ ಕದ್ದ ವ್ಯಕ್ತಿಯನ್ನು ಸುಲಭವಾಗಿ ಪತ್ತೆಹಚ್ಚಬಹುದು. ಕಾರಿಗೆ ಸಂಬಂಧಿಸಿದ ಮಾಹಿತಿಯನ್ನು ಈ ನಂಬರ್ ಪ್ಲೇಟ್‌ನಿಂದ ಪಡೆಯಬಹುದು. ವಾಹನ ಮಾರಾಟಗಾರರಿಗೆ ಹೊಸ ವಾಹನಗಳನ್ನು ಮಾರಾಟ ಮಾಡುವಾಗ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.


Click it and Unblock the Notifications








